ಶ್ರೀ ಗಣೇಶನಿಗೆ ವಿವಾಹದ ಆಮಂತ್ರಣ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದಲ್ಲಿನ ಬಹರಾಯಿಚ ಇಲ್ಲಿಯ ಓರ್ವ ಮುಸಲ್ಮಾನ ಯುವಕನ ವಿವಾಹದ ಲಗ್ನಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಪತ್ರಿಕೆಯಲ್ಲಿ ಶ್ರೀ ಗಣೇಶನಿಗೆ ಮೊದಲ ಆಮಂತ್ರಣ ನೀಡಿದ್ದಾರೆ. ಅದರ ಜೊತೆಗೆ ಪಂಚ ಪ್ರಕೃತಿಗಳಿಗೂ ವಿವಾಹದ ಸಾಕ್ಷಿದಾರರಾಗಲು ಆವಾಹನೆ ಮಾಡಿದ್ದಾರೆ. ವಿಶೇಷ ಎಂದರೆ ‘ಮುಸಲ್ಮಾನರು ಸಾಂಪ್ರದಾಯದಿಂದ ದೂರ ಹೋಗುತ್ತಾ ಹಿಂದೂ ಸಾಂಪ್ರದಾಯದ ಪ್ರಕಾರ ವಿವಾಹ ಮಾಡಬೇಕು’, ಎಂದು ಇದರಲ್ಲಿ ಹೇಳಿದ್ದಾರೆ. ‘ಈ ಪತ್ರಿಕೆ ಹಿಂದೂ ಸ್ನೇಹಿತರಿಗೆ ಆಮಂತ್ರಣ ನೀಡುವುದಕ್ಕಾಗಿ ಮುದ್ರಿಸಿದ್ದಾರೆ’, ಎಂದು ವರನ ತಂದೆ ಸ್ಥಳೀಯ ಪತ್ರಕರ್ತರಿಗೆ ಹೇಳಿದರು.
(ಸೌಜನ್ಯ – NMF News)
ಬಹರಾಯಿಚ ಜಿಲ್ಲೆಯಲ್ಲಿನ ಕೈಸರ್ ಗಂಜ ಹತ್ತಿರ ಇರುವ ಸಫಿಪುರ ಗ್ರಾಮದಲ್ಲಿನ ಘಟನೆಯಾಗಿದೆ. ಅಜೂಲ್ ಕಮರ್ ಇವರ ಪುತ್ರ ಸಮೀರ್ ಅಹಮದ್ ಫೆಬ್ರುವರಿ ೨೯ ರಂದು ಇವನ ವಿವಾಹವಿದೆ. ಅಜೂಲ್ ಕಮರ, ಅವರ ಜನಾಂಗದಲ್ಲಿನ ಜನರು ಮತ್ತು ಸಂಬಂಧಿಕರಿಗಾಗಿ ಉರ್ದೂನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿದ್ದಾರೆ. ವಿವಾಹದ ಒಂದು ದಿನ ಮೊದಲು ಹಿಂದೂ ಬಾಂಧವರಿಗಾಗಿ ಔತಣಕೂಟದ ಆಯೋಜನೆ ಕೂಡ ಮಾಡಿದ್ದಾರೆ.
ಹಿಂದೂ ಸಂಪ್ರದಾಯದ ಸಾಕ್ಷಿ ನೀಡುವ ಹಿಂದಿ ಭಾಷೆಯಲ್ಲಿನ ಪತ್ರಿಕೆಯ ವೈಶಿಷ್ಟಗಳು
೧. ‘ಶ್ರೀ ಗಣೇಶಾಯ ನಮಃ ||’ ಇಂದ ಪತ್ರಿಕೆಯ ಆರಂಭ !
೨. ‘ವಿನಮ್ರ’ ಮತ್ತು ‘ದರ್ಶನಾಭಿಲಾಶಿ’ ಈ ಪದಗಳ ಬಳಿಕೆ !
೩. ‘ಉತ್ಸವ’, ‘ಶುಭ ವಿವಾಹ’, ವರನಿಗಾಗಿ ‘ಚಿರಂಜೀವಿ’ ಮತ್ತು ವಧುವಿಗಾಗಿ ‘ಆಯುಷ್ಮತಿ ಕುಮಾರಿ’ ಇಂತಹ ಪದಗಳ ಬಳಕೆ !
ಸಂಪಾದಕೀಯ ನಿಲುವುಯಾವುದೇ ನೇಮ ಇಲ್ಲದಿರುವ ಮತ್ತು ತರ್ಕಶೂನ್ಯವಾಗಿ ಬಡಬಡಾಯಿಸುವ ಅತಿ ಬುದ್ಧಿವಂತ ಪ್ರಗತಿ (ಅಧೋ)ಪರರ ಗುಂಪಿಗೆ ಈಗಲು ಹಿಂದುಗಳಿಗೆ ‘ಹಿಂದೂ ಮುಸಲ್ಮಾನ ಐಕ್ಯತೆ’ಯ ಉಪದೇಶ ನೀಡಲು ಆರಂಭಿಸಿದರೆ, ಅದರಲ್ಲಿ ಆಶ್ಚರ್ಯವೇನು ! |