BJP Delegation Sandeshkhali : ಸಂದೇಶಖಾಲಿಗೆ ಹೋಗುತ್ತಿದ್ದ ಭಾಜಪದ ಮಹಿಳಾನಿಯೋಗವನ್ನು ಪೋಲೀಸರು ತಡೆದರು !

ಕೋಲಕಾತಾ (ಬಂಗಾಳ) – ಹಿಂದೂ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಸಂದೇಶಖಾಲಿಗೆ ಹೋಗುತ್ತಿದ್ದ ಭಾಜಪದ ಮಹಿಳಾ ನಿಯೋಗವನ್ನು ಪೋಲೀಸರು ತಡೆದಿದ್ದಾರೆ. ಈ ನಿಯೋಗದ ನೇತ್ರುತ್ವವನ್ನು ಬಿಜೆಪಿ ಮಹಿಳಾ ಸಂಸದೆ ಲಾಕೆಟ್ ಚಟರ್ಜಿ ವಹಿಸಿದ್ದರು. ಈ ವೇಳೆ ಅವರ ಮತ್ತು ಪೋಲೀಸರ ಮಧ್ಯೆ ವಾಗ್ವಾದ ನಡೆದಿದೆ. ಆನಂತರ ಲಾಕೆಟ್ ಚಟರ್ಜಿ ಅವರನ್ನು ವಶಕ್ಕೆ ಪಡೆಯಲಾಯಿತು. ಈ ಹಿಂದೆ ಫೆಬ್ರವರಿ ೧೬ ರಂದು ಕೂಡ ಕೇಂದ್ರ ಸಚಿವೆ ಮತ್ತು ಮಹಿಳಾ ಸಂಸದೆ ಅವರ ನಿಯೋಗವನ್ನು ಸಂದೇಶಖಾಲಿಗೆ ಹೋಗದಂತೆ ತಡೆಯಲಾಗಿತ್ತು. ಮತ್ತೊಂದೆಡೆ ಇಡಿ ಆರ್ಥಿಕ ದುರುಪಯೋಗದ ಪ್ರಕರಣದಲ್ಲಿ ಪರಾರಿಯಾಗಿದ್ದ ತೃಣಮೂಲ ಕಾಂಗ್ರೆಸ್ಸಿನ ನಾಯಕ ಶಾಹಜಹಾನ್ ವಿರುದ್ಧ ದೂರು ದಾಖಲಿಸಿದೆ. ಪಡಿತರ ದುರುಪಯೋಗದ ಪ್ರಕರಣದಲ್ಲಿ ಇಡಿಯು ಬಂಗಾಳದ ೬ ಸ್ಥಳಗಳಲ್ಲಿ ದಾಳಿ ನಡೆಸಿದೆ.

ಮಾರ್ಚ್ ೬ ರಂದು ಪ್ರಧಾನಿಮೋದಿ ಸಂದೇಶಖಾಲಿಗೆ ಹೋಗಬಹುದು ! – ಭಾಜಪ

ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ೬ ರಂದು ಸಂದೇಶಖಾಲಿಗೆ ಹೋಗಬಹುದು, ಎಂದು ಭಾಜಪದ ಬಂಗಾಳ ಪ್ರದೇಶಾಧ್ಯಕ್ಷ ಸುಕಾಂತ ಮಜುಂದಾರ ಇವರು ಮಾಹಿತಿ ನೀಡಿದ್ದಾರೆ.