ಮದರಸಾಗೆ ಸರಕಾರಿ ಹಣದಿಂದ ಶಿಕ್ಷಣ ನೀಡುವುದು ಸಂವಿಧಾನದ ಉಲ್ಲಂಘನೆ !

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಬಿಹಾರ ಸರಕಾರಕ್ಕೆ ನೋಟಿಸ್ ! 

ನವ ದೆಹಲಿ – ಬಿಹಾರದಲ್ಲಿನ ಮದರಸಾಗೆ ಸಂಬಂಧಿತ ಪ್ರಶ್ನೆಗಳಿಗೆ ಅಸಮಾಧಾನಕಾರಕ ಉತ್ತರ ಸಿಕ್ಕ ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗವು ರಾಜ್ಯದ ಮುಖ್ಯ ಸಚಿವ ಅಮೀರ ಸುಭಾನಿ ಇವರಿಗೆ ನೋಟಿಸ್ ನೀಡಿ ಉತ್ತರ ನೀಡಲು ಆಯೋಗದ ಎದುರು ಉಪಸ್ಥಿತರಿರಲು ಹೇಳಿದ್ದಾರೆ. ಆಯೋಗವು, ಮದರಸಾಗಳಲ್ಲಿ ಮಕ್ಕಳಿಗೆ ಯಾವುದೇ ಶಾಲೆಗೆ ಕಳಿಸದೆ ಸರಕಾರಿ ಹಣದಿಂದ ಶಿಕ್ಷಣ ನೀಡುವುದು ಇದು ಸಂವಿಧಾನದ ಉಲ್ಲಂಘನೆ ಆಗಿದೆ. ಮದರಸಾಗಳಿಗೆ ಸರಕಾರಿ ಸಹಾಯ ಏಕೆ ನೀಡಲಾಗುತ್ತಿದೆ ? ಇದರ ಯಾವುದೇ ಸಮಾಧಾನಕಾರಕ ಉತ್ತರ ನೀಡಲು ಬಿಹಾರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

೧. ಆಯೋಗವು, ಶಿಕ್ಷಣ ಹಕ್ಕು ಕಾನೂನಿನ ಪ್ರಕಾರ ದೇಶದಲ್ಲಿನ ಪ್ರತಿಯೊಂದು ಮಕ್ಕಳಿಗೆ ಶಿಕ್ಷಣ ನೀಡುವುದು ಅವಶ್ಯಕವಾಗಿದೆ. ಸಂವಿಧಾನದ ಪ್ರಕಾರ ಪ್ರಾಥಮಿಕ ಶಿಕ್ಷಣ ದೊರೆಯುವುದು, ಇದು ಎಲ್ಲಾ ಮಕ್ಕಳ ಮೂಲಭೂತ ಅಧಿಕಾರವಾಗಿದೆ. ಸರಕಾರವು ಮಕ್ಕಳಿಗೆ ಶಿಕ್ಷಣ ಹೇಗೆ ನೀಡಬೇಕು, ಇದನ್ನು ಕೂಡ ಸಂವಿಧಾನದಲ್ಲಿ ಹೇಳಿದ್ದಾರೆ.

೨. ಆಯೋಗವು ಈ ಪ್ರಕರಣದಲ್ಲಿ ಬಿಹಾರ ಸರಕಾರಕ್ಕೆ ಪ್ರತಿಜ್ಞಾಪತ್ರ ಪ್ರಸ್ತುತಪಡಿಸಲು ಹೇಳಿದೆ. ಆಯೋಗವು, ಬಿಹಾರದಲ್ಲಿ ನೋಂದಣಿಯಾಗದಿರುವ ಎಷ್ಟು ಮದರಸಾಗಳು ನಡೆಯುತ್ತಿವೆ ? ಮದರಸಾಗಳಲ್ಲಿ ಎಷ್ಟು ಮುಸಲ್ಮಾನೇತಾರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ? ಇದರ ಸಂಪೂರ್ಣ ಮಾಹಿತಿ ನೀಡಬೇಕು. ಎಷ್ಟು ಮುಸಲ್ಮಾನೇತರ ಮಕ್ಕಳು ಮದರಸಾದಿಂದ ೧೨ ನೆಯ ತರಗತಿಯವರೆಗೆ ಶಿಕ್ಷಣ ಪೂರ್ಣಗೊಳಿಸಿದ್ದಾರೆ ? ಎಷ್ಟು ಮುಸಲ್ಮಾನೆತರ ಮಕ್ಕಳು ಮದರಸಾಗಳಲ್ಲಿ ಶಿಕ್ಷಣ ಪೂರ್ಣಗೊಳಿಸಿ ಮೌಲ್ವಿ ಆಗಿದ್ದಾರೆ ? ಇದರ ಮಾಹಿತಿ ಸರಕಾರವು ನೀಡಬೇಕು.

೩. ಆಯೋಗವು ಮದರಸಾಗಳಲ್ಲಿ ಯಾವ ಪಠ್ಯಕ್ರಮ ಕಲಿಸುತ್ತಾರೆ, ಇದರ ಬಗ್ಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ (ಎನ್.ಸಿ.ಇ.ಆರ್.ಟಿ.) ಮತ್ತು ಯುನಿಸೇಫ್ (ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ಬಾಲ ಆಪತ್ಕಾಲಿನ ನಿಧಿ) ಇದಕ್ಕೂ ನೋಟಿಸ್ ಕಳುಹಿಸಿದೆ.

ಸಂಪಾದಕೀಯ ನಿಲುವು

ಬಿಹಾರದಲ್ಲಿ ಸಂಯುಕ್ತ ಜನತಾದಳ ಮತ್ತು ಭಾಜಪದ ಸರಕಾರ ಇರುವಾಗ ಈ ರೀತಿ ನೋಟಿಸ ನೀಡುವಂತ ಸಮಯ ಬರಬಾರದು ! ಸರಕಾರವು ಮದರಸಗಳಿಗೆ ಸರಕಾರಿ ಅನುದಾನ ನೀಡುವುದನ್ನು ನಿಲ್ಲಿಸಬೇಕು !