ಗುಜರಾತದಲ್ಲಿ ಇಲ್ಲಿಯವರೆಗೆ ೧೦೮ ಅಕ್ರಮ ಗೊರಿಗಳು ದ್ವಂಸ !

ಕರ್ಣಾವತಿ (ಗುಜರಾತ) – ರಾಜ್ಯದಲ್ಲಿ ಅತಿಕ್ರಮಣ ತೆರವುಗೊಳಿಸುವ ಅಭಿಯಾನ ವೇಗವಾಗಿ ನಡೆಯುತ್ತಿದೆ. ಈ ಅಭಿಯಾನ ಬೇಟ್ ದ್ವಾರಕ ಇಲ್ಲಿಂದ ಆರಂಭವಾಗಿ ಈಗ ಅದು ಸೂರತ, ಜಾಮನಗರ, ಪೋರಬಂದರ, ಪಾವಾಗಡ ಮತ್ತು ಕರ್ಣಾವತಿ ಇಲ್ಲಿಯವರೆಗೆ ತಲುಪಿದೆ. ಸೋಮನಾಥ ದೇವಸ್ಥಾನದ ಹತ್ತಿರ ಇರುವ ಅಕ್ರಮ ಅತಿಕ್ರಮಣ ಕೂಡ ತೆರವುಗೊಳಿಸಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೆ ೧೦೮ ಅಕ್ರಮ ಗೋರಿಗಳು ನೆಲೆಸಮ ಮಾಡಲಾಗಿದೆ. ‘ಜುನಾಗಡದ ಕೋಟೆಯ ಹತ್ತಿರ ಇರುವ ದೊಡ್ಡ ಪ್ರಮಾಣದಲ್ಲಿನ ಗೋರಿಗಳು ಎಲ್ಲಿಂದ ಬಂದವು ? ಇದು ಯಾರಿಗೂ ತಿಳಿದಿಲ್ಲ. ಇಷ್ಟು ಬೇಗನೇ ಇಲ್ಲಿ ಗೊರಿಗಳು ಹೇಗೆ ಕಟ್ಟಿದರು ? ಷಡ್ಯಂತ್ರ ರಚಿಸಿ ಕಟ್ಟಿರುವ ಪ್ರತಿಯೊಂದು ಅಕ್ರಮ ಕಟ್ಟಡ ನೆಲಸಮ ಮಾಡುವುದಕ್ಕಾಗಿ ನಮ್ಮ ಬುಲ್ಡೋಜರ್ ಸಿದ್ದವಿದೆ ಎಂದು ಗೃಹ ಸಚಿವ ಹರ್ಷ ಸಂಘವಿ ಇವರು ಗುಜರಾತ ವಿಧಾನ ಸಭೆಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ರಾತ್ರಿವಿಡಿ ಗರಭಾ ಆಡಲು ಅನುಮತಿ !

ರಾಜ್ಯದಲ್ಲಿ ನವರಾತ್ರಿಯಲ್ಲಿ ರಾತ್ರಿವಿಡಿ ಗರಭಾ ಆಡಲು ಅನುಮತಿ ನೀಡುವುದರ ಕುರಿತು ಹರ್ಷ ಸಂಘವಿ ಇವರು, ನಮ್ಮ ರಾಜ್ಯದಲ್ಲಿ ಗರಭಾ ಆಡದಿದ್ದರೆ ಪಾಕಿಸ್ತಾನದಲ್ಲಿ ಹೋಗಿ ಆಡಬೇಕೆ ? ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಲ್ಲಿ ಯಾವ ಸ್ಥಳದಲ್ಲಿ ಭಾರತ ಮತ್ತು ಹಿಂದೂ ವಿರೋಧಿ ಕಾರ್ಯ ಚಟುವಟಿಕೆ ನಡೆಯುತ್ತದೆ ಅವುಗಳನ್ನು ಮೊದಲು ಪ್ರಾಧಾನ್ಯತೆಯಿಂದ ನೆಲಸಮ ಮಾಡುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ ಅವುಗಳನ್ನು ಮತ್ತೆ ಎಂದು ಕಟ್ಟದ ಹಾಗೆ ಸರಕಾರ ಮತ್ತು ಪೊಲೀಸರು ಜಾಗರೂಕತೆ ವಹಿಸುವುದು ಅವಶ್ಯಕವಾಗಿದೆ !

ಎಲ್ಲಾ ಕಡೆ ಸಕ್ಷಮ ವ್ಯವಸ್ಥೆ ಅಳವಡಿಸಿ ಅತಿಕ್ರಮಣ ಆಗದಂತೆ ನೋಡಿಕೊಳ್ಳಬೇಕು, ಅಷ್ಟು ಸಕ್ಷಮ ವ್ಯವಸ್ಥೆ ಭಾರತದಲ್ಲಿ ನಿರ್ಮಾಣವಾಗುವುದು ಅವಶ್ಯಕವಾಗಿದೆ !