ಮಾಲದಾ (ಬಂಗಾಳ)ದ ಆದಿನಾಥ ಮಂದಿರವನ್ನು ಕೆಡವಿ ಆದಿನಾ ಮಸೀದಿ ನಿರ್ಮಾಣ !`

  • ಮಸೀದಿ ಪ್ರದೇಶದಲ್ಲಿ ಈಗಲೂ ಹಿಂದೂ ದೇವತೆಗಳ ಮೂರ್ತಿ ಮತ್ತು ಭಗ್ನಗೊಂಡ ಶಿವಲಿಂಗ ಇದೆ

  • ಪುರಾತತ್ವ ಇಲಾಖೆ ನೀಡಿದ ದೂರಿನ ಆಧಾರದ ಮೇಲೆ ಆ ಪ್ರದೇಶದಲ್ಲಿ ಪೂಜೆ ಸಲ್ಲಿಸುತ್ತಿದ್ದ ಹಿಂದೂ ಅರ್ಚಕರ ವಿರುದ್ಧ ದೂರು ದಾಖಲು!

ಮಾಲದಾ (ಬಂಗಾಳ) – ಇಲ್ಲಿನ ‘ಆದಿನಾ’ ಮಸೀದಿ ಪ್ರದೇಶದಲ್ಲಿ ಫೆಬ್ರವರಿ 17 ರಂದು ವೃಂದಾವನದ ವಿಶ್ವವಿದ್ಯಾ ಟ್ರಸ್ಟ್‌ನ ಮುಖ್ಯಸ್ಥ ಹಿರಣ್ಯಮಯ ಗೋಸ್ವಾಮಿ ಇವರ ಮುಖಂಡತ್ವದಲ್ಲಿ ಹಿಂದೂಗಳು ಪೂಜೆ ಸಲ್ಲಿಸಿದರು. ಇದಕ್ಕೆ ಸ್ಥಳೀಯ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಹಿರಣ್ಯಮಯ ಗೋಸ್ವಾಮಿ ವಿರುದ್ಧ ಮಾಲದಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತನ್ನು ನಿಯೋಜಿಸಲಾಗಿರುವ ಸುದ್ದಿಯಿದೆ. ಈ ಮಶೀದಿಯನ್ನು ಹಿಂದೂಗಳ ಮಂದಿರವನ್ನು ಕೆಡವಿ ಕೆಲವು ಶತಕಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿ ಈಗಲೂ ಹಿಂದೂಗಳ ದೇವತೆಗಳ ಮೂರ್ತಿ ಮತ್ತು ಭಗ್ನಗೊಂಡ ಶಿವಲಿಂಗವಿದೆ.

1. ಹಿರಣ್ಯಮಯ ಗೋಸ್ವಾಮಿ ಈ ಪ್ರದೇಶದಲ್ಲಿ ಭೇಟಿ ನೀಡಲು ಬಂದಿದ್ದರು. ಅವರು ಇಲ್ಲಿರುವ ಶಿವಲಿಂಗ ಮತ್ತು ದೇವತೆಗಳ ಮೂರ್ತಿಗಳನ್ನು ನೋಡಿದರು. ತದನಂತರು ಅವರು ತಮ್ಮ ಕೆಲವು ಮಿತ್ರಗಳನ್ನು ಕರೆಸಿದರು ಮತ್ತು ಪೂಜೆ ಮತ್ತು ಮಂತ್ರಪಠಣವನ್ನು ಪ್ರಾರಂಭಿಸಿದರು. ಇದರಿಂದ ಪ್ರದೇಶದಲ್ಲಿರುವ ಮುಸಲ್ಮಾನರಿಗೆ ತೊಂದರೆಯಾಯಿತು. ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

2. ಗೋಸ್ವಾಮಿಯವರನ್ನು ತಡೆಯಲು ಸಬ್ ಇನ್ಸ್ ಪೆಕ್ಟರ್ ನವೀನಚಂದ್ರ ಪೊದ್ದಾರ್ ಅಲ್ಲಿಗೆ ತಲುಪಿದರು. ಪೋದ್ದಾರ ಮಶೀದಿಯಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬಾರದಂತೆ ಹೇಳಿದರು. ಗೋಸ್ವಾಮಿ ಪೊದ್ದಾರ್‌ನನ್ನು, ‘ನನ್ನ ಅಪರಾಧವೇನು?’ ಎಂದು ಕೇಳಿದಾಗ, ಪೋದ್ದಾರ್, ‘ನಿಮ್ಮ ಅಪರಾಧವು ನೀವು ನಿಮಗೆ ಬೇಕಾದ ಕಡೆಯಲ್ಲಿ ನಮಸ್ಕಾರ ಮಾಡುತ್ತಿದ್ದೀರಿ. ಇಲ್ಲಿ ನೀವು ಇಂತಹ ಕೃತ್ಯಗಳನ್ನು ಮಾಡಲು ಬರುವುದಿಲ್ಲ’ ಎಂದು ಹೇಳಿದರು. ಇದರಿಂದ ಅಲ್ಲಿ ವಿವಾದ ನಿರ್ಮಾಣವಾಯಿತು.

3. ಗೋಸ್ವಾಮಿಯವರು ಪೊಲೀಸ್ ಅಧಿಕಾರಿ ಪೊದ್ದಾರ್ ಅವರಿಗೆ ‘ನನಗೆ , ಇಲ್ಲಿ ಒಂದು ಮೂರ್ತಿ ಕಾಣಿಸುತ್ತಿದೆ. ನಾನೇಕೆ ಅದನ್ನು ಪೂಜಿಸಬಾರದು? ಇಲ್ಲಿ ನಮಸ್ಕಾರ ಮಾಡಲು ಸಾಧ್ಯವಿಲ್ಲ?’ ಇಲ್ಲಿ ಹಾಗೆ ಮಾಡಬಾರದೆಂದು ಎಲ್ಲಿ ಬರೆದಿದ್ದಾರೆ. ಅದನ್ನು ನನಗೆ ತೋರಿಸಿರಿ. ನನ್ನನ್ನು ಇಲ್ಲಿಂದ ಹೋಗುವಂತೆ ಹೇಳುವ ಅಧಿಕಾರ ನಿಮಗೆ ಇದೆಯೇ?’ ಎಂದು ಕೇಳಿದರು. ತದನಂತರ ಹಿಂದೂಗಳು ಅವರಿಗೆ ಇಲ್ಲಿ ಬರುವುದನ್ನು ನಿರ್ಬಂಧಿಸಲಾಗಿದೆಯೆನ್ನುವ ಲಿಖಿತ ಆದೇಶವನ್ನು ತೋರಿಸುವಂತೆ ಆಗ್ರಹಿಸಿದರು.

ಆದಿನಾಥ ಮಂದಿರದ ಇತಿಹಾಸ

ಇಸ್ಲಾಮಿಕ್ ಆಕ್ರಮಣಕಾರ ಸುಲ್ತಾನ ಸಿಕಂದರ ಶಾಹ 1369 ರಲ್ಲಿ ಹಿಂದೂ ಮಂದಿರವನ್ನು ಕೆಡವಿ ಇಲ್ಲಿ ಮಸೀದಿಯನ್ನು ನಿರ್ಮಿಸಿದ್ದನು. 2022 ರಲ್ಲಿ ಭಾಜಪ ನಾಯಕ ರತೀಂದ್ರ ಬೋಸ್ ಅವರು ಮಶೀದಿಯ ಕೆಳಗೆ ‘ಆದಿನಾಥ ಮಂದಿರವಿದೆ’’ ಎಂದು ಹೇಳಿದ್ದರು. ಅವರು ಟ್ವೀಟ್ ಮಾಡಿ, ‘ಮುಸ್ಲಿಮರು ಮತ್ತು ಬ್ರಿಟಿಷ್ ಆಡಳಿತಗಾರರಿಂದ ಈ ಮಂದಿರವನ್ನು ರಕ್ಷಿಸುವಾಗ ಜಿತು ಸರ್ದಾರ ಇವರು ವೀರಮರಣ ಹೊಂದಿದರು.ಈ ಇತಿಹಾಸ ಯಾರಿಗೂ ತಿಳಿದಿಲ್ಲ. ಸ್ಥಳೀಯ ಶಾಸಕ ಚಿನ್ಮಯ ದೇಬ ಬರ್ಮನ್ ಅವರೊಂದಿಗೆ ನಾನು ಇಲ್ಲಿ ತಿರುಗಾಡಿದಾಗ, ನನಗೆ ಈ ವಿಷಯ ನನ್ನ ಗಮನಕ್ಕೆ ಬಂದಿತು. ಕಾಶಿಯ ವಿಶ್ವನಾಥನು ತನ್ನ ಸ್ಥಾನಕ್ಕೆ ಮರಳಿದ್ದಾರೆ. ಈಗ ಭಗವಾನ ಆದಿನಾಥನಿಗೆ ಅವಕಾಶ ಬರುವುದೇ?’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ದೇಶದಲ್ಲಿ ಹಿಂದೂ ಮಂದಿರಗಳನ್ನು ಕೆಡವಿ ಮಶೀದಿ ನಿರ್ಮಿಸಲಾಗುತ್ತಿದೆ, ಅದು ಪುನಃ ಹಿಂದೂಗಳಿಗೆ ಸಿಗಲು ಈಗ ಕೇಂದ್ರಸರಕಾರವೇ ಕಾನೂನು ರಚಿಸುವ ಆವಶ್ಯಕವಾಗಿದೆ.

ಪುರಾತತ್ವ ಇಲಾಖೆಯ ವಶದಲ್ಲಿರುವ ಪುರಾತನ ಮಂದಿರಗಳಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕು ಪಡೆಯಲು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ.