ಸಿಬ್ಬಂದಿಗಳು ಮನೆಯಿಂದ ಕೆಲಸ ಮಾಡುವುದರಿಂದ ವೈಯಕ್ತಿಕ ಮತ್ತು ಸಂಸ್ಥೆಯ ಬೆಳವಣಿಗೆಯು ಕುಂಠಿತವಾಗುತ್ತದೆ !

ಟಾಟಾ ಕನ್ಸಲ್ಟೆನ್ಸಿಯ ಮುಖ್ಯ ಕಾರ್ಯಕಾರಿ ಅಧಿಕಾರಿಯಾದ ಕ್ರಿತಿವಾಸನ ರವರ ಹೇಳಿಕೆ

ಮುಂಬಯಿ – ಕೋರೋನಾ ಮಹಾಮಾರಿಯ ಕಾಲದಲ್ಲಿ ಅನೇಕ ಸಂಸ್ಥೆಗಳು ತಮ್ಮ ನೌಕಾರರಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಒದಗಿಸಿದ್ದವು. ಅನೇಕ ಕಂಪನಿಗಳಲ್ಲಿ ಈ ಸೌಲಭ್ಯವು ಇಂದಿಗೂ ಮುಂದುವರೆದಿದೆ. ಈ ಕೆಲಸದ ಪದ್ಧತಿಯಿಂದಾಗಿ ನೌಕರರು ಮತ್ತು ಸಂಸ್ಥೆಗಳಿಗೆ ಮೂಲತಃ ಹಾನಿಯಾಗುತ್ತಿರುವುದು ಆಗಾಗ ಸಾಬೀತಾಗಿದೆ. ಈಗ `ಟಾಟಾ ಕನ್ಸಲ್ಟೆನ್ಸಿ ಸರ್ವಿಸ್’ನ (ಟಿ. ಸಿ. ಎಸ್.) ಮುಖ್ಯ ಕಾರ್ಯಕಾರಿ ಅಧಿಕಾರಿಗಳಾದ ಕೆ. ಕ್ರಿತಿವಾಸನರವರು ಮನೆಯಿಂದ ಕೆಲಸ ಮಾಡುವ ಪದ್ಧತಿಯನ್ನು ನಿಲ್ಲಿಸಲು ಕರೆ ನೀಡಿದ್ದಾರೆ. ಅವರು ಮನೆಯಿಂದ ಕೆಲಸ ಮಾಡಿದರೆ ವೈಯಕ್ತಿಕ ಮತ್ತು ಸಂಸ್ಥೆಯ ಬೆಳವಣಿಗೆಯು ಕುಂಠಿತವಾಗುತ್ತದೆ, ಎಂದು ಹೇಳಿದರು. ಅವರು ನ್ಯಾಸ್ಕಾಂ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .

ಕ್ರಿತಿವಾಸನರವರು ಮಾತು ಮುಂದುವರೆಸುತ್ತಾ,

೧. ಟಿ.ಸಿ.ಎಸ್. ಸಂಘಭಾವ ಮತ್ತು ನೌಕರರ ನಡುವೆ ಸ್ನೇಹಪೂರ್ಣ ಸಂಬಂಧವನ್ನು ನಿರ್ಮಿಸಲು ಮಹತ್ವ ನೀಡುತ್ತದೆ. ನೌಕರರು ಕಾರ್ಯಾಲಯಕ್ಕೆ ಬರದಿದ್ದರೆ ಸಂಸ್ಥೆಯ ಮೌಲ್ಯ ಮತ್ತು ಸಂಸ್ಕೃತಿಯನ್ನು ಹೇಗೆ ಅಳವಡಿಸಿಕೊಳ್ಳುವರು ?

೨. ಅಧಿಕಾರಿಗಳು ಮತ್ತು ಹಿರಿಯ ಸಿಬ್ಬಂದಿಗಳು ಹೇಗೆ ಕೆಲಸ ಮಾಡುತ್ತಾರೆ ? ಎಂಬುದನ್ನು ನೋಡಿ ಇತರ ಸಿಬ್ಬಂದಿಗಳು ಕಲಿಯುತ್ತಿರುತ್ತಾರೆ. ಟಿ. ಸಿ. ಎಸ್. `ವರ್ಕ್ ಫ್ರಮ್ ಹೊಮ’ನ್ನು ಸಮರ್ಥಿಸುವುದಿಲ್ಲ; ಏಕೆಂದರೆ ಸಾಂಪ್ರದಾಯಿಕ ಕಾರ್ಯಾಲಯದ ವಾತಾವರಣವೇ ಎಲ್ಲಕ್ಕಿಂತ ಪ್ರಭಾವಿ ಪದ್ಧತಿಯಾಗಿದೆ, ಎಂದು ಹೇಳಿದರು.

ಟಿ.ಸಿ.ಎಸ್. ನ ನೌಕರರಿಗೆ ಕಾರ್ಯಾಲಯಕ್ಕೆ ಬರುವುದಕ್ಕಾಗಿ ಎಚ್ಚರಿಕೆ !

ಟಿ.ಸಿ.ಎಸ್. ನಲ್ಲಿಯೂ ಕೊರೊನಾ ಮಹಾಮಾರಿಯ ಕಾಲದಲ್ಲಿ ನೌಕರರಿಗೆ `ವರ್ಕ್ ಫ್ರಮ್ ಹೋಮ್’ನ ಸೌಲಭ್ಯ ನೀಡಲಾಗಿತ್ತು. ಆದರೆ ಜನಜೀವನವು ಸುಲಭವಾದ ನಂತರವೂ ಅನೇಕ ಸಿಬ್ಬಂದಿಗಳು ಕಾರ್ಯಾಲಯಕ್ಕೆ ಹಿಂತಿರುಗಿಲ್ಲ. ಆದುದರಿಂದ ಕಂಪನಿಯು ಇಂತಹ ಸಿಬ್ಬಂದಿಗಳಿಗೆ ಕಾರ್ಯಾಲಯಕ್ಕೆ ಬರುವುದರ ಬಗ್ಗೆ ಕೊನೆಯ ಎಚ್ಚರಿಕೆ (ಅಲ್ಟಿಮೇಟಮ್) ನೀಡಿದೆ.