ಇಸ್ರೇಲ್ ನಲ್ಲಿ ಇಲ್ಲಿಯವರೆಗೆ ೨೦ ಸಾವಿರ ಭಾರತೀಯ ಕಾರ್ಮಿಕರ ನೇಮಕಾತಿ

೧ ಲಕ್ಷದವರೆಗೆ ಭಾರತೀಯ ಕಾರ್ಮಿಕರ ನೇಮಕಾತಿಯ ಗುರಿ !

ತೇಲ್ ಅವಿವ (ಇಸ್ರೇಲ್) – ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಇಸ್ರೇಲ್ ಭಾರತದಿಂದ ಇಲ್ಲಿಯವರೆಗೆ ಸುಮಾರು ೨೦ ಸಾವಿರ ಕಾರ್ಮಿಕರನ್ನು ನೇಮಕಾತಿ ಮಾಡಿದೆ. ಪ್ಯಾಲೆಸ್ಟೈನ್ ಕಾರ್ಮಿಕರ ಅಪಾಯ ಗುರುತಿಸಿ ಇಸ್ರೇಲ್ ಈ ನೇಮಕಾತಿ ಮಾಡಿದೆ. ಅದೇ ಸಮಯದಲ್ಲಿ ಇಸ್ರೇಲ್ ನಲ್ಲಿ ಕೆಲಸದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಮತ್ತು ಯುರೋಪ್‌ನ ತುಲನೆಯಲ್ಲಿ ಇಸ್ರೇಲ್ ನಲ್ಲಿ ಹೆಚ್ಚು ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದಾರೆ, ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಾರ್ಷಿಕ ೧೬ ಲಕ್ಷದ ೪೭ ಸಾವಿರ ರೂಪಾಯಿ ವೇತನ !

ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಂದ ತಲಾ ೧೦ ಸಾವಿರ ಕಾರ್ಮಿಕರ ಇಸ್ರೇಲ್ ನಲ್ಲಿ ನೇಮಕಾತಿ ಆಗಿದ್ದಾರೆ. ಇದರಲ್ಲಿ ಮುಖ್ಯವಾಗಿ ಕಟ್ಟಡ ಕಾರ್ಮಿಕ ಮತ್ತು ವೆಲ್ಡರ್ಗಳ ಸಮಾವೇಶ ಇದೆ. ಈ ಕಾರ್ಮಿಕರಿಗೆ ಪ್ರತಿ ವರ್ಷ ೧೬ ಲಕ್ಷದ ೪೭ ಸಾವಿರ ರೂಪಾಯಿ ವೇತನ ನೀಡುವರು. ಇಸ್ರೇಲ್ ನೇಮಕಾತಿಯ ಮೊದಲ ಹಂತ ಪೂರ್ಣಗೊಳಿಸಿದ್ದು ಭಾರತದಿಂದ ೫೦ ಸಾವಿರದ ೧ ಲಕ್ಷ ಕಾರ್ಮಿಕರ ನೇಮಕಾತಿ ಮಾಡುವ ಇಚ್ಛೆ ಇದೆ.

ಮೃತ್ಯುವಿನ ಅಪಾಯ ಇದ್ದರೂ ಕೂಡ ಭಾರತೀಯ ಕಾರ್ಮಿಕರು ನೇಮಕಾತಿಗಾಗಿ ಗದ್ದಲ !

ಇತ್ತೀಚಿಗೆ ಕಾರ್ಮಿಕರ ಹಕ್ಕುಗಳಿಗಾಗಿ ಕೆಲಸ ಮಾಡುವ ಒಂದು ಸಂಸ್ಥೆಯು, ಇಸ್ರೇಲ್ ನಲ್ಲಿ ಪ್ರತಿಯೊಂದು ಲಕ್ಷ ಕಾಮಗಾರಿ ಕೆಲಸದ ಸ್ಥಳದಲ್ಲಿ ಕಾರ್ಮಿಕರ ಸಾವಿನ ಸಂಖ್ಯೆ ಯುರೋಪಿನ ತುಲನೆಯಲ್ಲಿ ೨.೫ ರಷ್ಟು ಹೆಚ್ಚು ಇದೆ. ಭಾರತೀಯ ಕಾರ್ಮಿಕರು ಪ್ರತಿ ತಿಂಗಳು ಸುಮಾರು ೧ ಲಕ್ಷದ ೩೨ ಸಾವಿರ ರೂಪಾಯಿ ದೊರೆಯುವುದು. ಭಾರತದಲ್ಲಿ ಅವರಿಗೆ ಒಂದು ಕೆಲಸಕ್ಕಾಗಿ ಒಟ್ಟು ಸಿಗುವ ವೇತನಕ್ಕಿಂತಲೂ ಈ ವೇತನ ೬ ಪಟ್ಟು ಹೆಚ್ಚಾಗಿದೆ. ಆದ್ದರಿಂದ ಸಾವಿನ ಅಪಾಯ ಇದ್ದರೂ ಕೂಡ ಭಾರತೀಯರು ಇಸ್ರೇಲ್‌ಗೆ ಹೋಗಲು ಪ್ರಾಧಾನ್ಯತೆ ನೀಡುತ್ತಿದ್ದಾರೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಬೃಹತ್ ಪ್ರಮಾಣದಲ್ಲಿ ಗದ್ದಲವಾಗುತ್ತಿದೆ ಎಂದು ಬಹಿರಂಗಪಡಿಸಿದೆ.

ಭಾರತ ಸರಕಾರದ ಸಹಾಯ

‘ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಷನ್’ನ ಉಪಾಧ್ಯಕ್ಷ ಹೈಮ್ ಫಿಗ್ಲಿನ್ ಇವರ ಪ್ರಕಾರ, ಭಾರತ ಸರಕಾರದಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಇಸ್ರೇಲ್‌ಗೆ ಸಹಾಯ ಸಿಗುತ್ತಿದೆ. ಇಸ್ರೇಲ್ ಮಾಡಿರುವ ಹೆಚ್ಚಿನ ಭಾರತೀಯ ನೇಮಕಾತಿಯಲ್ಲಿ ಕಾರ್ಪೆಂಟರ್ ಮತ್ತು ಮೇಸ್ತ್ರಿ ಇವರ ಸಮಾವೇಶವಿದೆ. ಈ ಎಲ್ಲಾ ಭಾರತೀಯರು ಪ್ಯಾಲೆಸ್ಟೈನ್ ಕಾರ್ಮಿಕರ ಜಾಗವನ್ನು ಪಡೆಯುವವರು. ಅವರಿಗೆ ಹಮಾಸ್‌ನ ದಾಳಿಯ ನಂತರ ಇಸ್ರೇಲ್ ನಲ್ಲಿ ಪ್ರವೇಶಿಸಲು ನಿಷೇಧಿಸಿದರು.