ಟಿಪ್ಪುಸುಲ್ತಾನನ ಫಲಕ ತೆಗೆಯಲು ಮತಾಂಧ ‘ಡಿ.ವೈ.ಎಫ್.ಐ‘ರ ನಿರಾಕರಣೆ !

ರಾಜ್ಯದಲ್ಲಿ ಪೋಲೀಸರ ಆದೇಶ ಕವಡೆ ಕಿಮ್ಮತ್ತು ?

ಮಂಗಳೂರು – ಕೋಣಾಜಿ ಪೋಲಿಸ ಠಾಣೆಯ ಇನ್ಸಪೆಕ್ಟರ್ ಇತ್ತೀಚೆಗೆ ‘ಪ್ರಜಾಸತ್ತಾತ್ಮಕ ಯುವ ಫೆಡರೇಷನ್ (ಡಿ.ವೈ.ಎಫ್.ಐ)ನ ಹರೆಕಳಾ ಶಾಖೆಯ ಅಧ್ಯಕ್ಷರಿಗೆ ನೋಟೀಸ್ ಜಾರಿಮಾಡಿ ಪೂರ್ವಾನುಮತಿ ಇಲ್ಲದೆ ಸಂಘಟನೆಯ ಕಾರ್ಯಾಲಯದ ಬಳಿ ಹಾಕಲಾಗಿದ್ದ ಟಿಪ್ಪು ಸುಲ್ತಾನನ ಫಲಕವನ್ನು ತೆಗೆದುಹಾಕುವಂತೆ ಆದೇಶ ನೀಡಿದ್ದರು; ಆದರೆ ‘ಡಿ.ವೈ.ಎಫ್.ಐ.’ ಟಿಪ್ಪು ಸುಲ್ತಾನನ ಫಲಕವನ್ನು ತೆಗೆಯಲು ನಿರಾಕರಿಸಿದೆ.

‘ಡಿ.ವೈ.ಎಫ್.ಐ.’ನ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ‘ಡೆಮೊಕ್ರೆಟಿಕ್ ಯೂಥ ಫೆಡರೇಷನ್ ಆಫ್ ಇಂಡಿಯಾ‘ದ ರಾಜ್ಯ ಪರಿಷತ್‌ನ ಒಂದು ಅಂಗವಾಗಿ ಟಿಪ್ಪುಸುಲ್ತಾನನ ಫಲಕ ಹಾಕಲಾಗಿದೆ. ಸರಕಾರಕ್ಕೆ ಈ ಫಲಕದ ಮೇಲೆ ನಿಷೇಧಿಸುವ ಹಕ್ಕಿಲ್ಲ ರಾಜ್ಯದಲ್ಲಿ ಸರಕಾರ ಬದಲಾದರೂ, ದಕ್ಷಿಣಕನ್ನಡ ಜಿಲ್ಲೆಯ ಪೋಲೀಸರು ಇನ್ನೂ ಸಂಘದ ಮಾನಸಿಕತೆಯಿಂದ ಕೆಲಸ ಮಾಡುತ್ತಿದ್ದಾರೆ‘ ಎಂದರು. ಫೆಬ್ರವರಿ ೧೫ ರಿಂದ ತೊಕ್ಕೋಟ್ಟುದಲ್ಲಿ ನಡೆಯುವ ಕರ್ನಾಟಕ ರಾಜ್ಯ ಪರಿಷತ್‌ನ ಅಂಗವಾಗಿ ಹಾಕಲಾಗಿದ್ದ ಟಿಪ್ಪು ಸುಲ್ತಾನನ ಫಲಕವನ್ನು ತೆಗೆಯಲು ಅವರು ನಿರಾಕರಿಸಿದ್ದಾರೆ.

  • ಡಿ.ವೈ.ಎಫ್.ಐ.ನ ಅಧ್ಯಕ್ಷ ಮುನೀರ ಕಾಟಿಪಳ್ಳ ಕೆಂಡಾಮಂಡಲ

  • ‘ಭಾಜಪಗೆ ಇಷ್ಟ ಇಲ್ಲ; ಅದಕ್ಕಾಗಿ ಟಿಪ್ಪುನ ಚಿತ್ರ ತೆಗೆಯುವುದಿಲ್ಲ !’ (ಅಂತೆ)

ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ‘ನೀವು ಅನುಮತಿ ಪಡೆದಿಲ್ಲ ಎಂದು ಪೊಲೀಸರು ಹೇಳಿದರು. ಚಿತ್ರದಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದರು. ಇಲ್ಲಿ ಅನುಮತಿಯ ಪ್ರಶ್ನೆಯೇ ಇಲ್ಲ. ಟಿಪ್ಪು ಚಿತ್ರ ಹಾಕಿ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕೆ ಹೆದರಿ ಪೊಲೀಸರು ನಮಗೆ ನೋಟಿಸ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಟಿಪ್ಪು ಚಿತ್ರ ತೆಗೆಯುವುದಿಲ್ಲ. ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದೇವೆ. ಟಿಪ್ಪು ಯಾವುದೇ ಕಾರಣಕ್ಕೂ ವಿವಾದಿತ ವ್ಯಕ್ತಿ ಅಲ್ಲ. ಬಿಜೆಪಿಯವರು ಟಿಪ್ಪುವನ್ನು ಇಷ್ಟಪಡದಿರುವುದು ಮಾತ್ರವಲ್ಲ; ಹಾಗಾಗಿ ನಾವು ಅದನ್ನು ತೆಗೆಯುವ ಪ್ರಶ್ನೆಯೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿತ್ತು. ಈ ನೆಲದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆದಿದೆ. ರಾಣಿ ಅಬ್ಬಕ್ಕ ಮತ್ತು ಟಿಪ್ಪು ಸುಲ್ತಾನ್ ಇಬ್ಬರ ಚಿತ್ರಗಳನ್ನು ಹಾಕಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ಮೇಲೆ ಪೌರುಷ ತೋರಿಸುವ ಪೋಲೀಸರು ಈ ಸಂಘಟನೆಯನ್ನು ನಿಯಂತ್ರಣಕ್ಕೆ ತರುತ್ತಾರೆಯೇ ಅಥವಾ ಅವರ ಮುಂದೆ ತಲೆಬಾಗುತ್ತಾರೆಯೇ ?