ಭಾರತೀಯ ನೌಕಾಪಡೆ ಆಯೋಜಿಸಿರುವ ಸೇನಾ ಅಭ್ಯಾಸದಲ್ಲಿ 51 ದೇಶಗಳ ನೌಕಾಪಡೆ ಸಹಭಾಗ !

ವಿಶಾಖಪಟ್ಟಣಂ – ಭಾರತೀಯ ನೌಕಾಪಡೆಯು ಫೆಬ್ರವರಿ 19 ರಿಂದ ವಿಶಾಖಪಟ್ಟಣಂನಲ್ಲಿ ‘ಮಿಲನ್-24’ ಕಾರ್ಯಕ್ರಮದ ಅಡಿಯಲ್ಲಿ ಅತಿದೊಡ್ಡ ಸೈನ್ಯ ಅಭ್ಯಾಸ ಪ್ರಾರಂಭಿಸಿದೆ. 51 ದೇಶಗಳ ನೌಕಾಪಡೆ ಇದರಲ್ಲಿ ಭಾಗವಹಿಸಿದೆ. ಈ ಸಮರಾಭ್ಯಾಸದಲ್ಲಿ ಭಾಗವಹಿಸಲು ವಿವಿಧ ದೇಶಗಳ 35 ಪ್ರಮುಖ ಯುದ್ಧನೌಕೆಗಳು ಮತ್ತು 50 ವಿಮಾನಗಳು ಭಾರತಕ್ಕೆ ಆಗಮಿಸಿವೆ. ಸೇನಾ ಸಮರಾಭ್ಯಾಸ ಫೆಬ್ರವರಿ 27 ರವರೆಗೆ ನಡೆಯಲಿದೆ. ‘ಮಿಲನ್-24’ ಎಂಬ ಸೈನ್ಯ ಅಭ್ಯಾಸ ಪ್ರತಿ 2 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 1995 ರಲ್ಲಿ ಕೇವಲ 4 ದೇಶಗಳೊಂದಿಗೆ ಈ ಸೈನ್ಯ ಅಭ್ಯಾಸ ಪ್ರಾರಂಭವಾಗಿತ್ತು. ಈಗ ಅದರ ವ್ಯಾಪ್ತಿ ಹೆಚ್ಚಿದೆ. ಅಮೇರಿಕಾ ಬಿಟ್ಟು ಆಸ್ಟ್ರೇಲಿಯಾ, ಜಪಾನ್, ವಿಯೆಟ್ನಾಂ, ಥೈಲ್ಯಾಂಡ್, ಮಾಲ್ಡೀವ್ಸ್, ಬ್ರಿಟನ್, ಮಲೇಷ್ಯಾ, ಕೆನಡಾ, ಸ್ಪೇನ್, ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಇಂಡೋನೇಷ್ಯಾ, ಮ್ಯಾನ್ಮಾರ್, ಇರಾಕ್, ಬ್ರೆಜಿಲ್ ಮತ್ತು ಯೆಮೆನ್ ಈ ದೇಶದಲ್ಲೂ ತಮ್ಮ ಪ್ರತಿನಿಧಿಗಳನ್ನು ‘ಮಿಲನ್‌ಗೆ – 24’ ಕ್ಕೆ ಕಳುಹಿಸಿದ್ದಾರೆ.

(ಸೌಜನ್ಯ – Republic world)