ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ನೋಡಿ ಸನಾತನದ ಮೊದಲನೇ ಬಾಲಸಂತ ಪೂ. ಭಾರ್ಗವರಾಮ ಪ್ರಭು (೬ ವರ್ಷ) ಇವರಿಗೆ ಅರಿವಾದ ಅಂಶಗಳು

ಪೂ. ಭಾರ್ಗವರಾಮ ಭರತ ಪ್ರಭು

೨೨.೧.೨೦೨೪ ರಂದು ಮಂಗಳೂರಿನಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಡೆದ ಶ್ರೀ ರಾಮಲಲ್ಲಾನ (ಬಾಲಕ ರೂಪದಲ್ಲಿನ ರಾಮನ) ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ಗಣಕೀಯ ತಂತ್ರಾಂಶದ ಮೂಲಕ ನೇರ ಪ್ರಸಾರ ಮಾಡಲಾಯಿತು. ಆ ಸಮಯದಲ್ಲಿ ಪೂ. ಭಾರ್ಗವರಾಮ ಇವರು ಶ್ರೀ ರಾಮಲಲ್ಲಾನ ಮೂರ್ತಿಯ ಕಡೆಗೆ ತುಂಬಾ ಸಮಯ ಒಂದೇ ಸಮನೆ ನೋಡುತ್ತಿದ್ದರು. ನಾನು ಪೂ. ಭಾರ್ಗವರಾಮ ಇವರಿಗೆ ‘ನಿಮಗೆ ಶ್ರೀ ರಾಮಲಲ್ಲಾನ ಮೂರ್ತಿಯನ್ನು ನೋಡಿ ಏನು ಅನಿಸಿತು ?, ಎಂದು ಕೇಳಿದಾಗ ಅವರು ಹೇಳಿದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

ಸೌ. ಭವಾನಿ ಪ್ರಭು

೧. ಪೂ. ಭಾರ್ಗವರಾಮ ಇವರು, “ಶ್ರೀ ರಾಮಲಲ್ಲಾನ ಮೂರ್ತಿಯಿಂದ ಸಂಪೂರ್ಣ ಬ್ರಹ್ಮಾಂಡದಲ್ಲಿ ತುಂಬಾ ಚೈತನ್ಯ ಹರಡುತ್ತಿದೆ
೨. ರಾಮಭಕ್ತರ ತೊಂದರೆಗಳು ದೂರವಾಗಿ ಅವರಿಗೆ ಉತ್ಕಟ ಭಕ್ತಿಯನ್ನು ಮಾಡಲು ಸ್ಫೂರ್ತಿ ಸಿಗುತ್ತಿದೆ. ಶ್ರೀರಾಮನ ಮೂರ್ತಿಯೇ ಭಕ್ತಿಮಯವಾಗಿದೆ. ಶ್ರೀರಾಮನ ಭಕ್ತಿ ಮಾಡುವುದಿರುವವರಿಗೂ
ಈ ಮೂರ್ತಿ ನೋಡಿ ಭಾವಜಾಗೃತವಾಗುವುದು.
೩. ಶ್ರೀರಾಮನ ತೇವವಾದ ಕಣ್ಣುಗಳು, ಅವನ ನಿರ್ಮಲ ಪ್ರೀತಿಯ ಸ್ವರೂಪವಾಗಿವೆ. ಈ ಮೂರ್ತಿಯಿಂದ ಶ್ರೀರಾಮನ ಅಪಾರ ಪ್ರೀತಿಯ ಸುರಿಮಳೆಯಾಗುತ್ತಿದೆ.
೪. ಶ್ರೀರಾಮನ ಮೂರ್ತಿಯನ್ನು ಹತ್ತಿರದಿಂದ ನೋಡಿದರೆ ಮೂರ್ತಿಯಲ್ಲಿ ಭಾವ ಇರುವುದು ಅರಿವಾಗುತ್ತದೆ ಮತ್ತು ದೂರದಿಂದ ನೋಡಿದರೆ ‘ರಾಮನು ಧ್ಯಾನ ಮಾಡುತ್ತಿದ್ದಾನೆ’ ಎಂದು ಅನಿಸುತ್ತದೆ. ‘ಅಲ್ಲಿ ಸಾಕ್ಷಾತ್ ರಾಮ ನಿಂತಿದ್ದಾನೆ’, ಎಂದೆನಿಸುತ್ತದೆ. ನನಗೂ ಧ್ಯಾನ ತಗಲುತ್ತಿದೆ.
೫. ಶ್ರೀರಾಮನ ಮೂರ್ತಿಯನ್ನು ನೋಡಿದ ನಂತರ ‘ಏನಾದರೂ ಮಾತನಾಡಬೇಕು’, ಎಂದು ಅನಿಸುವುದಿಲ್ಲ. ನಾನು ನಿರ್ವಿಚಾರ ಸ್ಥಿತಿಯನ್ನು ಅನುಭವಿಸುತ್ತಿದ್ದೇನೆ.”
೬. ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾದ ನಂತರ ಪೂ. ಭಾರ್ಗವರಾಮ ಇವರು, “ಪ್ರಭು ಶ್ರೀರಾಮನು ಅವತರಿಸಿದ್ದಾನೆ. ಪೃಥ್ವಿಯಲ್ಲಿ ತೇಜ ಹೆಚ್ಚಾಗಿದೆ ಮತ್ತು ತಂಪುಗಾಳಿಯೂ ಬೀಸುತ್ತಿದೆ. ಒಂದೇ ಸಮಯದಲ್ಲಿ ತೇಜ ಮತ್ತು ವಾಯುವಿನ ಅನುಭೂತಿ ಬರುತ್ತಿದೆ”, ಎಂದರು.
೭. ಜನರು ಶ್ರೀರಾಮನ ಭಕ್ತಿಯನ್ನು ಮಾಡಿ ಶ್ರೀರಾಮಮಂದಿರವನ್ನು ನಿರ್ಮಿಸಿದ್ದಾರೆ. ಜನರು ಇದರ ೧೦೦ ಕ್ಕಿಂತಲೂ ಹೆಚ್ಚು ಪಟ್ಟು ಭಕ್ತಿಯನ್ನು ಮಾಡಿದಾಗ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು.
೮. ಗುರುದೇವರೂ ರಾಮನೇ ಆಗಿದ್ದಾರೆ. ಅವರು ಸಾಕ್ಷಾತ್ ವಿಷ್ಣುವಾಗಿದ್ದಾರೆ.”

– ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು, (೨೩.೧.೨೦೨೪)

ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಂದು ಸನಾತನದ ಮೊದಲನೇ ಬಾಲಸಂತರಾದ ಪೂ. ಭಾರ್ಗವರಾಮ ಪ್ರಭು (೬ ವರ್ಷ) ಇವರನ್ನು ಶ್ರೀರಾಮನ ರೂಪದಲ್ಲಿ ನೋಡಿ ಸಮಾಜದ ವ್ಯಕ್ತಿಗೆ ಮತ್ತು ಸಾಧಕರಿಗೆ ಬಂದ ಅನುಭೂತಿಗಳು

ಶ್ರೀರಾಮನ ರೂಪದಲ್ಲಿ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು

‘ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಯಂದು ಪೂ. ಭಾರ್ಗವರಾಮ ಪ್ರಭು ಇವರನ್ನು ಶ್ರೀರಾಮನಂತೆ ಅಲಂಕರಿಸಬೇಕು, ಎಂದು ಅನಿಸಿತು. ಪೂ. ಭಾರ್ಗವರಾಮ ಇವರನ್ನು ಈ ರೂಪದಲ್ಲಿ ನೋಡಿ ಸಾಧಕರಿಗೆ ಮತ್ತು ಸಮಾಜದಲ್ಲಿನ ವ್ಯಕ್ತಿಗಳಿಗೆ ಬಂದ ಅನುಭೂತಿಗಳನ್ನು ಇಲ್ಲಿ ಕೊಡಲಾಗಿದೆ.

೧. ಸಾಧಕರು, ‘ಪೂ. ಭಾರ್ಗವರಾಮ ಇವರನ್ನು ಬಾಲ ರಾಮನ ರೂಪದಲ್ಲಿ ನೋಡಿ ನಮ್ಮ ಭಾವಜಾಗೃತವಾಗುತ್ತಿದೆ. ನಮಗೆ ಆನಂದವಾಯಿತು, ಎಂದು ಹೇಳಿದರು.

೨. ಸಮಾಜದಲ್ಲಿನ ಓರ್ವ ವ್ಯಕ್ತಿಯು ಪೂ. ಭಾರ್ಗವರಾಮ ಇವರನ್ನು ನೋಡಿ, “ಪ್ರಭು ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ ಆಯಿತು ಮತ್ತು ಇಲ್ಲಿ ಶ್ರೀ ರಾಮಲಲ್ಲಾ ಪ್ರತ್ಯಕ್ಷ ಬಂದಿದ್ದಾನೆ ಎಂದು ಹೇಳಿದರು.

೩. ‘ಪೂ. ಭಾರ್ಗವರಾಮ ಇವರು ಅಯೋಧ್ಯೆಯಲ್ಲಿನ ಶ್ರೀ ರಾಮಲಲ್ಲಾನಂತೆ ಕಾಣಿಸುತ್ತಿದ್ದಾರೆ, ಎಂದು ಅನೇಕ ಸಾಧಕರು ಮತ್ತು ಸಂಬಂಧಿಕರು ಹೇಳಿದರು.

‘ಗುರುದೇವರ ಕೃಪೆಯಿಂದ ನಮಗೆ ಪೂ. ಭಾರ್ಗವರಾಮ ಇವರಲ್ಲಿರುವ ಶ್ರೀರಾಮತತ್ತ್ವದ ಅನುಭೂತಿ ಬಂತು, ಅದಕ್ಕಾಗಿ ಗುರುದೇವರ ಚರಣಗಳಲ್ಲಿ ಶತಕೋಟಿ ಕೃತಜ್ಞತೆಗಳು !

– ಸೌ. ಭವಾನಿ ಪ್ರಭು (ಪೂ. ಭಾರ್ಗವರಾಮ ಇವರ ತಾಯಿ), ಮಂಗಳೂರು. (೨೩.೧.೨೦೨೪)