ಧಾರ್ಮಿಕ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಗಳಿಗೆ ಸಂದ ಗೌರವ !

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ವಾರಣಾಸಿಯ ಅಖಿಲ ಭಾರತೀಯ ಸಾರಸ್ವತ ಪರಿಷತ್ತಿನಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಸನ್ಮಾನ !

ವಾರಣಾಸಿ (ಉತ್ತರಪ್ರದೇಶ) : ಅಖಿಲ ಭಾರತ ಸಾರಸ್ವತ ಪರಿಷತ್ತು, ವಾರಣಾಸಿಯ ವಾರ್ಷಿಕ ಸಮಾರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರನ್ನು ಧಾರ್ಮಿಕ ಕ್ಷೇತ್ರದಲ್ಲಿ ಅವರು ಮಾಡಿರುವ ವಿಶೇಷ ಕಾರ್ಯಕ್ಕಾಗಿ, ಅವರಿಗೆ ಪರಿಷತ್ತಿನ ವತಿಯಿಂದ ಭಾರತ ರತ್ನ ಪಂಡಿತ ಮದನ ಮೋಹನ ಮಾಳವೀಯ ಸ್ಮೃತಿ ರಾಷ್ಟ್ರೀಯ ಸನ್ಮಾನ ಸಮಾರಂಭದ ಸನ್ಮಾನಪತ್ರ ಮತ್ತು ಇತರ ಉಡುಗೊರೆ ಗಳನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಜನವರಿ ೨೭ ರಂದು ಬನಾರಸ ಹಿಂದೂ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಕ್ಷಣ, ಧರ್ಮ, ಆಡಳಿತ, ನಟನೆ, ವೈದ್ಯಕೀಯ, ವಿಜ್ಞಾನ, ಯೋಗ, ಪತ್ರಿಕೋದ್ಯಮ, ಸಮಾಜ ಮತ್ತು ಯುವ ಕ್ಷೇತ್ರಗಳಲ್ಲಿನ ವಿಶೇಷ ಕಾರ್ಯಗಳಿಗಾಗಿ ೩೪ ಗಣ್ಯರನ್ನು ಗೌರವಿಸಲಾಯಿತು. ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರನ್ನು ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಕೈಕೊಂಡಿರುವ ವಿಶೇಷ ಕಾರ್ಯಕ್ಕಾಗಿ ಆಮಂತ್ರಿಸಲಾಗಿತ್ತು.

ಅಖಿಲ ಭಾರತ ಸಾರಸ್ವತ ಪರಿಷತ್ತಿನ ರಾಷ್ಟ್ರೀಯ ಸಂಚಾಲಕ ಡಾ. ವಿವೇಕಾನಂದ ತಿವಾರಿಯವರು. ಈ ಕಾರ್ಯಕ್ರಮದ ಮುಖ್ಯ ಆಯೋಜಕರಾಗಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಲ್ಮೋಡಾ (ಉತ್ತರಾಖಂಡ) ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ ಪಾಂಡೆ, ಉತ್ತರ ಪ್ರದೇಶದ ಆಯುಷಮಂತ್ರಿ ಶ್ರೀ. ದಯಾಶಂಕರ ಮಿಶ್ರಾ ಉಪಸ್ಥಿತರಿದ್ದರು. ಹಾಗೆಯೇ ವೇದಿಕೆಯಲ್ಲಿ ಅಖಿಲ ಭಾರತೀಯ ಸಾರಸ್ವತ ಪರಿಷತ್ತಿನ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾದ ಶ್ರೀ. ಟೇಕನಾರಾಯಣಜಿ, ರಾಷ್ಟ್ರೀಯ ಅಧ್ಯಕ್ಷ ಶ್ರೀ. ಶ್ರೀಕೃಷ್ಣ ಅಗ್ರವಾಲ ಮತ್ತು ಪ್ರಧಾನ ಕಾರ್ಯದರ್ಶಿ ಜೆ.ಎಸ್. ತ್ರಿಪಾಠಿ ಉಪಸ್ಥಿತರಿದ್ದರು. ಈ ಸಮಯದಲ್ಲಿ ಸತ್ಯಪಾಲ ಯಾದವ ಮತ್ತು ಶಿಮ್ಲಾ ವಿದ್ಯಾಪೀಠದ ಪ್ರಾಧ್ಯಾಪಕ ಡಾ. ವಿವೇಕಾನಂದ ತಿವಾರಿ ಇವರು ಬರೆದ ೧೧ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.