ಬಿಹಾರ ಮತ್ತು ಜಾರ್ಖಂಡನಲ್ಲಿ ಶ್ರೀಸರಸ್ವತಿ ದೇವಿಯ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ರಾಂಚಿ (ಜಾರ್ಖಂಡ) – ಜಾರ್ಖಂಡ ಮತ್ತು ಬಿಹಾರ ರಾಜ್ಯಗಳಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿ ವಿಸರ್ಜನೆಯ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿರುವ ಘಟನೆ ನಡೆದಿದೆ. ಮೆರವಣಿಗೆಯು ಮಸೀದಿಯ ಬಳಿ ಬಂದಾಗ ವಿವಾದ ನಡೆಯಿತು, ಅನಂತರ ಮತಾಂಧ ಮುಸಲ್ಮಾನರು ದಾಳಿ ಮಾಡಿರುವ ಘಟನೆ ಘಟಿಸಿದೆ.

೧. ಜಾರ್ಖಂಡದಲ್ಲಿನ ಮೆರವಣಿಗೆಗೆ ಮುಸಲ್ಮಾನರಿಂದ ವಿರೋಧ !

ಚೋಗಾಖಾರ ಗ್ರಾಮದಲ್ಲಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ

ಜಾರ್ಖಂಡನ ದೇವಘರ ಜಿಲ್ಲೆಯಲ್ಲಿನ ಚೋಗಾಖಾರ ಗ್ರಾಮದಲ್ಲಿ ಫೆಬ್ರುವರಿ ೧೬ ರಂದು ನಡೆಸಲಾದ ಮೆರವಣಿಗೆಯು ಮಸೀದಿಯ ಬಳಿ ಬಂದಾಗ ಮುಸಲ್ಮಾನರು ಅದನ್ನು ವಿರೋಧಿಸಿದರು. ಇವರಲ್ಲಿ ಶಹಾಬುದ್ದೀನ ಅನ್ಸಾರಿ, ಹಬೀಬ, ಆಜಾದ ಇವರೊಂದಿಗೆ ಹಲವರು ಸೇರಿದ್ದರು. ಇವರು ಮೆರವಣಿಗೆಯಲ್ಲಿದ್ದ ಧ್ವನಿವರ್ಧಕವನ್ನು ನಿಲ್ಲಿಸಲು ಹೇಳಿದರು. ಅದೇ ಸ್ಥಿತಿಯಲ್ಲಿ ಹಿಂದೂಗಳು ಮೆರವಣಿಗೆಯನ್ನು ಮುಂದುವರೆಸಿದರು. ಪೊಲೀಸರು ಹಿಂದೂಗಳಿಗೆ ಆದಷ್ಟು ಬೇಗ ಮೆರವಣಿಗೆಯನ್ನು ಮುಂದೆ ಓಯ್ಯಲು ಹೇಳಿದರು. ಅದೇ ಸಮಯದಲ್ಲಿ ಮಸೀದಿಯ ಅಕ್ಕಪಕ್ಕದ ಮನೆಗಳಿಂದ ಮೆರವಣಿಗೆಯ ಮೇಲೆ ಕಲ್ಲುತೂರಾಟ ಆರಂಭವಾಯಿತು. ಕಲ್ಲುತೂರಾಟ ಮಾಡುವವರಲ್ಲಿ ಚಿಕ್ಕ ಮಕ್ಕಳು, ವೃದ್ಧರು ಮತ್ತು ಮಹಿಳೆಯರೂ ಸೇರಿದ್ದರು. (ಈ ಮುಸಲ್ಮಾನರು ತಮ್ಮನ್ನು ಭಾರತದಲ್ಲಿ ಅಸುರಕ್ಷಿತರೆಂದು ತಿಳಿಯುತ್ತಾರೆ, ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು) ಮುಸಲ್ಮಾನರನ್ನು ತಡೆಯಲು ಪ್ರಯತ್ನಿಸುವಾಗ ೨ ಪೊಲೀಸರು ಮತ್ತು ಇತರ ೮ ಜನರು ಗಾಯಗೊಂಡರು. ಆಡಳಿತವು ಧ್ವನಿವರ್ಧಕವನ್ನು ನಿಲ್ಲಿಸಿ ಮೆರವಣಿಗೆಯನ್ನು ನಿಲ್ಲಿಸಿದರು. ಹೆಚ್ಚುವರಿ ಪೊಲೀಸರು ಸ್ಥಳವನ್ನು ತಲುಪಿದ ನಂತರ ಪರಿಸ್ಥಿತಿಯನ್ನು ಹಿಡಿತಕ್ಕೆ ತರಲಾಯಿತು. ಈಗ ಅಲ್ಲಿ ಪೊಲೀಸ ಬಂದೋಬಸ್ತ್ ಇಡಲಾಗಿದೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

೨. ಗ್ರಾಮದ ಸರಪಂಚ ವಿನೋದ ಯಾದವರವರು, ಈ ಪ್ರಕರಣ ಮುಚ್ಚಿ ಹಾಕಲು ಸರಕಾರವು ಹಿಂದೂಗಳ ಮೇಲೆಯೂ ದೂರು ದಾಖಲಿಸಿದ್ದಾರೆ ಮತ್ತು ಇದರಲ್ಲಿ ನನ್ನ ಹೆಸರನ್ನೂ ಸೇರಿಸಿದ್ದಾರೆ. ನನಗೆ ಈ ಘಟನೆಗೆ ಯಾವುದೇ ಸಂಬಂಧವಿರಲಿಲ್ಲ. ಎರಡೂ ಪಕ್ಷಗಳ ನಡುವೆ ಸಂಧಾನ ಮಾಡಿಸುವುದಕ್ಕಾಗಿ ಒತ್ತಡ ಹೇರಲು ಸರಕಾರವು ಈ ರೀತಿ ಮಾಡಿದೆ. (ಜಾರ್ಖಂಡ್ ಮುಕ್ತಿ ಮೋರ್ಚಾದ ಹಿಂದೂ ದ್ವೇಷಿ ಸರಕಾರ ! – ಸಂಪಾದಕರು)

ರಾಂಚಿಯಲ್ಲಿ ಮುಸಲ್ಮಾನರಿಂದ ವಿವಾದ !

ರಾಂಚಿಯ ನಾಗದಿಯಲ್ಲಿ ಫೆಬ್ರುವರಿ ೧೬ ರಂದು ಮೂರ್ತಿಯ ವಿಸರ್ಜನೆಯ ಸಮಯದಲ್ಲಿ ಮಸೀದಿಯ ಬಳಿ ವಾದ-ವಿವಾದ ನಡೆಯಿತು. ಅನಂತರ ಮತಾಂಧ ಮುಸಲ್ಮಾನರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು, ಹಾಗೆಯೇ ಲಾಠಿ-ಕೋಲುಗಳಿಂದ ದಾಳಿ ನಡೆಸುತ್ತಾ ಗುಂಡು ಹಾರಿಸಿದರು. ಪೊಲೀಸರು ಗುಂಡು ಹಾರಿಸಿರುವ ಸುದ್ದಿಗೆ ಅನುಮೋದನೆ ನೀಡಿಲ್ಲ. ಈ ಘಟನೆಯಲ್ಲಿ ೧೨ ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ಲಾಠಿಚಾರ್ಜ್ ನಡೆಸಲಾಯಿತು. ಈಗ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

೨. ಬಿಹಾರದಲ್ಲಿಯೂ ಬಿಗುವಿನ ವಾತಾವರಣ

ತಹಬಲಪುರ ಮಂಡಲ ಟೋಲಾದಲ್ಲಿ ಹಿಂದೂಗಳೂ ಪ್ರತ್ಯುತ್ತರ ನೀಡಿದರು

ಬಿಹಾರದ ಭಾಗಲಪುರ ಜಿಲ್ಲೆಯಲ್ಲಿನ ತಹಬಲಪುರ ಮಂಡಲ ಟೋಲಾದಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳ ಮೆರವಣಿಗೆಯು ಹೋಗುತ್ತಿರುವಾಗ ಅದರ ಮೇಲೆ ಕಲ್ಲು ತೂರಾಟ ನಡೆಯಿತು. ಇದರಲ್ಲಿ ದೇವಿಯ ಮೂರ್ತಿಯನ್ನು ಧ್ವಂಸಗೊಳಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಹಿಂದೂಗಳು ಪ್ರತ್ಯುತ್ತರ ನೀಡಲು ಪ್ರಯತ್ನಿಸಿದರು. ಪೊಲೀಸರಿಗೆ ಈ ಹಿಂಸಾಚಾರದ ಮಾಹಿತಿ ದೊರೆಯುತ್ತಲೇ ಅವರು ಘಟನಾಸ್ಥಳವನ್ನು ತಲುಪಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ದರಭಂಗಾದಲ್ಲಿನ ಮಸೀದಿಯ ಚಾವಣಿಯಿಂದ ಕಲ್ಲು ತೂರಾಟ

ಬಿಹಾರದ ದರಭಂಗಾದಲ್ಲಿನ ಬೆನಿಪೂರಬಹೆರಾ ಎಂಬ ಪ್ರದೇಶದಲ್ಲಿ ಕೂಡ ಮತಾಂಧದಿಂದ ಮೆರವಣಿಗೆಯ ಮೇಲೆ ಮಸೀದಿ ಮೇಲಿಂದ ಕಲ್ಲು ತೂರಾಟ ನಡೆಯಿತು. ಈ ಘಟನಾಸ್ಥಳದಿಂದ ಪೊಲೀಸ ಠಾಣೆಯು ಸ್ವಲ್ಪವೇ ಅಂತರದಲ್ಲಿದ್ದರೂ ಈ ಕಲ್ಲು ತೂರಾಟ ನಡೆಸಿದ್ದಾರೆ. (ಮತಾಂಧರಿಗೆ ಪೊಲೀಸರ ಭಯ ಇಲ್ಲದಿರುವುದರ ಪರಿಣಾಮ ! – ಸಂಪಾದಕರು)
ಇದರಲ್ಲಿ ೧೮ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಪೊಲೀಸರು ಕೆಬಹಳ ಸಮಯದ ನಂತರ ಪರಿಸ್ಥಿತಿಯನ್ನು ಹಿಡಿತಕ್ಕೆ ತಂದರು. ಈ ಘಟನೆಯ ಹಿಂದಿನ ದಿನ ಕಸಾಯಿ ಟೋಲಾದಲ್ಲಿಯೂ ಕೂಡ ಮತಾಂಧ ಮುಸಲ್ಮಾನರು ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದರು.

ಸಂಪಾದಕೀಯ ನಿಲುವು

ಮಸೀದಿಯ ಬಳಿ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಯಾವಾಗಲೂ ದಾಳಿ ನಡೆಸಲಾಗುತ್ತದೆ; ಆದರೆ ಇದರ ಮೇಲೆ ಯಾವುದೇ ಸರಕಾರ ದೃಢವಾದ ಮತ್ತು ಪರಿಣಾಮಕಾರಕ ಉಪಾಯ ಯೋಜನೆಯನ್ನು ಮಾಡುವುದಿಲ್ಲ. ಈ ಸ್ಥಿತಿಯು ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !

ಮುಸಲ್ಮಾನ ದೇಶದಲ್ಲಿ ಹಿಂದೂಗಳಿಗೆ ಮೆರವಣಿಗೆ ನಡೆಸಲು ಅನುಮತಿ ಕೂಡ ದೊರೆಯುವದಿಲ್ಲ, ಹಿಂದೂಗಳ ದೇಶದಲ್ಲಿ ಹಿಂದೂಗಳ ಮೆರವಣಿಗೆಗಳ ಮೇಲೆ ದಾಳಿ ನಡೆಸುವ ಧೈರ್ಯವನ್ನು ಮತಾಂಧ ಮುಸಲ್ಮಾನರು ಯಾವಾಗಲೂ ತೋರಿಸುತ್ತಾರೆ ಮತ್ತು ಹಿಂದೂಗಳು ಯಾವಾಗಲೂ ಥಳಿಸಲ್ಪಡುತ್ತಾರೆ, ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !