ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಯ ಕಿಮ್ಮತ್ತು ಕಚೇರಿಯಲ್ಲಿ ಕೆಲಸ ಮಾಡಿ ಸಂಬಳ ಪಡೆಯುವ ಸ್ತ್ರೀ ಗಿಂತ ಕಡಿಮೆ ಇಲ್ಲ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಗೃಹಿಣಿಯ ಕಿಮ್ಮತ್ತು ಕಚೇರಿಯಲ್ಲಿ ಕೆಲಸ ಮಾಡಿ ಸಂಬಳ ಪಡೆಯುವ ಸ್ತ್ರೀ ಗಿಂತ ಕಡಿಮೆ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ಕೆ .ವಿ. ವಿಶ್ವನಾಥನ್ ಇವರ ವಿಭಾಗೀಯ ಪೀಠವು, ಕುಟುಂಬದ ಕಾಳಜಿ ವಹಿಸುವ ಮಹಿಳೆಗೆ ವಿಶೇಷ ಮಹತ್ವ ಇರುತ್ತದೆ ಮತ್ತು ಆಕೆಯ ಕೊಡುಗೆ ಆರ್ಥಿಕ ದೃಷ್ಟಿಯಿಂದ (ರೂಪಾಯಿಯಲ್ಲಿ) ಅಳೆಯುವುದು ಕಠಿಣವಾಗಿರುತ್ತದೆ. ಗೃಹಿಣಿಯ ಕೆಲಸ ನೋಡಿದರೆ ಆಕೆಯ ಕೊಡುಗೆ ಉನ್ನತ ಮಟ್ಟದ್ದು ಮತ್ತು ಅಮೂಲ್ಯವಾಗಿರುತ್ತದೆ, ಇದರಲ್ಲಿ ಅನುಮಾನವಿಲ್ಲ.

ಈ ಪ್ರಕರಣದಲ್ಲಿ ನ್ಯಾಯಾಲಯದ ಆಲಿಕೆ !

೧. ೨೦೦೬ ರಲ್ಲಿ ಉತ್ತರಾಖಂಡದ ಓರ್ವ ಮಹಿಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು.

೨. ಮಹಿಳೆ ಪ್ರಯಾಣಿಸುತ್ತಿದ್ದ ವಾಹನದ ವಿಮೆ ಮಾಡಿಸಿರಲಿಲ್ಲ. ಆದ್ದರಿಂದ ಆಕೆಯ ಕುಟುಂಬದವರಿಗೆ ನಷ್ಟ ಪರಿಹಾರ ನೀಡುವ ಹೊಣೆ ವಾಹನ ಮಾಲಕನ ಮೇಲೆ ಬಂತು. ಇದರಿಂದ ಮಹಿಳೆಯ ಕುಟುಂಬದವರಿಗೆ (ಆಕೆಯ ಪತಿ ಮತ್ತು ಅಪ್ರಾಪ್ತ ಹುಡುಗ) ಎರಡುವರೆ ಲಕ್ಷ ರೂಪಾಯಿ ಪರಿಹಾರ ನೀಡಿದರು.

೩. ಕುಟುಂಬದವರು ಉತ್ತರಾಖಂಡ ಉಚ್ಚ ನ್ಯಾಯಾಲಯದಲ್ಲಿ ಹೆಚ್ಚಿನ ಪರಿಹಾರ ನೀಡಲು ಅರ್ಜಿ ಸಲ್ಲಿಸಿದರು; ಆದರೆ ೨೦೧೭ ರಲ್ಲಿ ಅರ್ಜಿ ತಿರಸ್ಕರಿಸಲಾಯಿತು. ‘ಮಹಿಳೆ ಗೃಹಿಣಿ ಆಗಿರುವುದರಿಂದ ಆಕೆಯ ಆದಾಯ ಮತ್ತು ಕನಿಷ್ಠ ಕಾಲ್ಪನಿಕ ಉತ್ಪನ್ನ ಇದರ ಆಧಾರದಲ್ಲಿ ಪರಿಹಾರದ ನಿರ್ಣಯ ತೆಗೆದುಕೊಳ್ಳಬೇಕು’, ಎಂದು ಉಚ್ಚ ನ್ಯಾಯಾಲಯ ಹೇಳಿತ್ತು. ಉಚ್ಚ ನ್ಯಾಯಾಲಯವು ಮಹಿಳೆಗೆ ಅಂದಾಜು ಉತ್ಪನ್ನ ದಿನಗೂಲಿ ಕಾರ್ಮಿಕರಗಿಂತಲೂ ಕಡಿಮೆ ಹೇಳಿತು.

೪. ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಈ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, ಈ ಪ್ರಕಾರ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿತು.

೫. ಕೊನೆಯಲ್ಲಿ ವಿಭಾಗೀಯ ಪೀಠವು ೬ ವಾರದ ಒಳಗೆ ಕುಟುಂಬಕ್ಕೆ ೬ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿತು.