‘ಇನ್ಸೆಟ್-3 ಡಿ.ಎಸ್.’ ಈ ಇಸ್ರೋದ ಉಪಗ್ರಹದ ಯಶಸ್ವಿ ಉಡಾವಣೆ !

  • ‘ಇನ್ಸೆಟ್’ ಸರಣಿಯಲ್ಲಿನ ಮೂರನೆ ಉಪಗ್ರಹ !

  • ‘ಇಸ್ರೋ’ದ ಅಧ್ಯಕ್ಷರಿಂದ ಚೆಂಗಲಮ್ಮ ದೇವಸ್ಥಾನದಲ್ಲಿ ಪೂಜೆ !

ಶ್ರೀಹರಿಕೋಟ (ಆಂಧ್ರಪ್ರದೇಶ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಎಂದರೆ ‘ಇಸ್ರೋ’ದಿಂದ ‘ಇನ್ಸೆಟ್-3 ಡಿ.ಎಸ್.’ ಹೆಸರಿನ ಉಪಗ್ರಹದ ಯಶಸ್ವಿ ಉಡಾವಣೆ ನಡೆಯಿತು. ಇಲ್ಲಿಯ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ಫೆಬ್ರುವರಿ ೧೭ ರಂದು ಸಂಜೆ ೫.೩೫ ಕ್ಕೆ ಉಡಾವಣೆ ನಡೆಯಿತು. ಉಪಗ್ರಹದ ಯಶಸ್ವಿ ಉಡಾವಣೆಗಾಗಿ ‘ಇಸ್ರೋ’ದ ಅಧ್ಯಕ್ಷ ಎಸ್. ಸೋಮನಾಥ ಇವರು ಈ ಹಿಂದೆ ಆಂಧ್ರಪ್ರದೇಶದಲ್ಲಿರುವ ಸಲ್ಲೂರಪೇಟದಲ್ಲಿನ ಶ್ರೀ ಚೆಂಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹವಾಮಾನ ಮತ್ತು ನೈಸರ್ಗಿಕ ಆಪತ್ತುಗಳು ನಿಖರ ಮಾಹಿತಿ ದೊರೆಯಬೇಕು, ಇದೇ ಈ ಉಪಗ್ರಹದ ಉದ್ದೇಶವಾಗಿದೆ. ಇದರ ಸಂದರ್ಭದಲ್ಲಿ ಸೋಮನಾಥ ಇವರು, ಈ ಉಪಗ್ರಹ ಪೃಥ್ವಿ ವಿಜ್ಞಾನ ಸಚಿವಾಲಯಕ್ಕಾಗಿ ಸಿದ್ಧಪಡಿಸಿದೆ. ಉಪಗ್ರಹದ ‘ಇನ್ಸೆಟ್’ ಸರಣಿಯಲ್ಲಿನ ಮೂರನೆಯ ಉಪಗ್ರಹವಾಗಿದೆ ಎಂದು ಹೇಳಿದರು.

ಹವಾಮಾನದ ನಿಖರ ಮಾಹಿತಿ ದೊರೆಯುವುದು !

ಈ ಅಭಿಯಾನಕ್ಕೆ ಸಂಪೂರ್ಣ ನಿಧಿ ಭಾರತ ಸರಕಾರದ ಪೃಥ್ವಿ ವಿಜ್ಞಾನ ಸಚಿವಾಲಯದಿಂದ ಉಪಲಬ್ಧಗೊಳಿಸಿದ್ದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಉಡಾವಣೆ ಭಾರತದ ಹೆಚ್ಚುತ್ತಿರುವ ವರ್ಚಸ್ಸಿನ ದಿಕ್ಕಿನತ್ತ ಒಂದು ಮಹತ್ವದ ಹೆಜ್ಜೆ ಆಗಿದೆ. ‘ಇನ್ಸೆಟ್-3 ಡಿ.ಎಸ್.’ ಉಪಗ್ರಹ ಸಮುದ್ರದ ಪೃಷ್ಟಭಾಗದ ಸವಿಸ್ತಾರ ಅಭ್ಯಾಸ ಮಾಡಲಿದೆ. ಇದರಿಂದ ಹವಾಮಾನದ ನಿಖರ ಮಾಹಿತಿ ದೊರೆಯುವುದು. ಇದರಿಂದ ಮಾನವನಿಗೆ ನೈಸರ್ಗಿಕ ಆಪತ್ತಿನ ಬಗ್ಗೆ ಹೆಚ್ಚು ಒಳ್ಳೆಯ ಅಂದಾಜು ವ್ಯಕ್ತಪಡಿಸಲು ಸಾಧ್ಯವಾಗುವುದು. ಭಾರತೀಯ ಹವಾಮಾನ ಸಂಸ್ಥೆಗಾಗಿ ಈ ಉಪಗ್ರಹ ಅತ್ಯಂತ ಮಹತ್ವದ್ದಾಗುವುದು.

ಸಂಪಾದಕೀಯ ನಿಲುವು

ಈಶ್ವರನ ಅಧಿಷ್ಟಾನದ ಮಹತ್ವ ತಿಳಿದಿರುವ ‘ಇಸ್ರೋ’ದ ಅಧ್ಯಕ್ಷ !