ಹಲ್ದ್ವಾನಿ (ಉತ್ತರಖಂಡ) ಇಲ್ಲಿಯ ಹಿಂಸಾಚಾರದ ಹಿಂದೆ ಪಾಕಿಸ್ತಾನದ ‘ಟೂಲ್ ಕಿಟ್’ನ ಬಳಕೆ

ನವ ದೆಹಲಿ – ಉತ್ತರಖಂಡದಲ್ಲಿನ ಹಲ್ದ್ವಾನಿ ಇಲ್ಲಿಯ ಅಕ್ರಮ ಮದರಸಾ ನೆಲಸಮ ಮಾಡಲು ಹೋಗಿದ್ದ ತಂಡದ ಮೇಲೆ ನೂರಾರು ಮತಾಂಧರು ಹಲ್ಲೆ ಮಾಡಿದರು. ಅವರು ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಠಾಣೆ ಸುಡಲು ಪ್ರಯತ್ನಿಸಿದರು. ಈ ಹಿಂಸಾಚಾರದಲ್ಲಿ ೫ ಜನರು ಸಾವನ್ನಪ್ಪಿದರು ಹಾಗೂ ೧೦೦ ಕ್ಕಿಂತಲೂ ಹೆಚ್ಚಿನ ಪೊಲೀಸರು ಗಾಯಗೊಂಡರು. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೪೨ ಕ್ಕಿಂತಲೂ ಹೆಚ್ಚಿನ ಜನರನ್ನು ಬಂಧಿಸಿದ್ದಾರೆ. ಈ ಹಿಂಸಾಚಾರದ ತನಿಖೆಯಿಂದ ಇದರ ಹಿಂದೆ ಪಾಕಿಸ್ತಾನದ ‘ಟೂಲ್ ಕಿಟ್’ ಇರುವುದು ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳಿಂದ ಪ್ರಚೋದನೆ ನೀಡುತ್ತಿರುವುದರಿಂದ ಈ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿನ ಖಾತೆಗಳು ಪಾಕಿಸ್ತಾನದಿಂದ ಸಂಚಾಲಿತ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪೊಲೀಸರು ವಿಚಾರಣೆಯ ವರದಿ ಕೇಂದ್ರ ಗೃಹ ಸಚಿವಾಲಯಕ್ಕೆ ಒಪ್ಪಿಸಿದ್ದಾರೆ.

೧. ನ್ಯಾಯಾಲಯವು ಯಾವಾಗ ಹಲ್ದ್ವಾನಿಯಲ್ಲಿನ ಬನಭೂಲಪುರದಲ್ಲಿನ ಅತಿಕ್ರಮಣಕರ ಮೇಲೆ ಕ್ರಮ ಕೈಗೊಳ್ಳುವ ಆದೇಶ ನೀಡಿತು, ಅದರ ನಂತರ ಪಾಕಿಸ್ತಾನವು ಅಲ್ಲಿ ಗಲಭೆ ನಡೆಸುವ ಷಡ್ಯಂತ್ರ ರೂಪಿಸುತ್ತ ಪಾಕಿಸ್ತಾನಿ ಟೂಲ್ ಕಿಟ್ ಸಿದ್ದವಾಯಿತು. ಇದಕ್ಕಾಗಿ ಮಹಮ್ಮದ್ ಅಖ್ತರ, ಆಸಿಫ್ ಪಾಲಿಟಿಕ್ ಲೇಸ್, ಮಹಮ್ಮದ್ ಆಲಂ, ಅರ್ಕಾಮ, ಆಲಮ ಶೇಖ ಮತ್ತು ಆಸೀಫ್ ಮನ್ಸೂರಿ ಇವರ ಹೆಸರುಗಳು ‘ಎಕ್ಸ್’ನಲ್ಲಿ ೧೦ ಖಾತೆಗಳು ತೆರೆದಿದ್ದರು. ಈ ಮೂಲಕ ಮುಸಲ್ಮಾನರಿಗೆ ಪ್ರಚೋದನೆ ನೀಡುತ್ತಿದ್ದರು.

೨. ಪೊಲೀಸರ ವಿಚಾರಣೆಯಲ್ಲಿ ಹಲ್ದ್ವಾನಿಯಲ್ಲಿ ಹಿಂಸಾಚಾರ ಆರಂಭವಾದ ನಂತರ ಪಾಕಿಸ್ತಾನದಲ್ಲಿನ ಕರಾಚಿ, ಇಸ್ಲಾಮಬಾದ್, ಎಬೋಟಾಬಾದ್ ಮತ್ತು ಲಾಹೋರ್ ದಿಂದ ೯ ‘ಹ್ಯಾಶ್ ಟ್ಯಾಗ್’ (ಒಂದೇ ವಿಷಯದ ಚರ್ಚೆ ನಡೆಸುವುದು) ಸಕ್ರಿಯ ವಾಗಿರುವ ಸಾಕ್ಷಿಗಳು ದೊರೆತಿವೆ. ಅದರಲ್ಲಿ ‘ಹಲ್ದ್ವನಿ ಬರ್ನಿಂಗ್’, ‘ಹಲ್ದ್ವಾನಿ ರೈಟ್ಸ್’, ‘ಹಲ್ಡ್ವಾನಿ ವಾಯಲನ್ಸ್’ ಈ ಪದಗಳ ಉಪಯೋಗಿಸಿ ಪ್ರಚೋದನಾತ್ಮಕ ಪೋಸ್ಟ್ ಪ್ರಸಾರ ಮಾಡಲಾಯಿತು.

ಟೂಲ್ ಕಿಟ್ ಎಂದರೇನು ?

ಯಾವುದಾದರು ಪ್ರಕರಣದಲ್ಲಿ ದೊಡ್ಡ ಸ್ವರೂಪದಲ್ಲಿ ಪ್ರತಿಭಟನೆ ಮಾಡಲು ಒಂದು ಆಯೋಜಿತ ಕಾರ್ಯಕ್ರಮ ಸಿದ್ಧಪಡಿಸುತ್ತಾರೆ. ಪ್ರತಿಭಟನೆ ಮುಂದಿನ ಹಂತಕ್ಕೆ ಒಯ್ಯುವುದು ಅಥವಾ ತೀವ್ರ ಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಸಿದ್ಧವಾಗುತ್ತದೆ ಅದನ್ನೇ ಟೂಲ್ ಕಿಟ್ ಎನ್ನುತ್ತಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನ ಭಾರತದಲ್ಲಿ ಸುಲಭವಾಗಿ ಹಿಂಸಾಚಾರ ನಡೆಸಬಹುದು, ಇದು ಭಾರತದಲ್ಲಿನ ಬೇಹುಗಾರಿಕೆ ಮತ್ತು ಸುರಕ್ಷಾ ವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ !