ಮಡಗಾಸ್ಕರ ಸರಕಾರದಿಂದ ಹೊಸ ಕಾನೂನು; ಬಲಾತ್ಕಾರಿಗಳನ್ನು ನಪುಸಂಕರನ್ನಾಗಿ ಮಾಡುವ ಶಿಕ್ಷೆ !

ಅಂಟಾನಾನಾರಿವೊ (ಮಡಗಾಸ್ಕರ) – ಬಲಾತ್ಕಾರವು ಘೋರ ಅಪರಾಧವಾಗಿದೆ. ಪ್ರಪಂಚದಾದ್ಯಂತದ ದೇಶಗಳಲ್ಲಿ ಬಲಾತ್ಕಾರ ಮಾಡಿರುವವರಿಗೆ ಕಠಿಣ ಶಿಕ್ಷೆಯ ಅವಕಾಶವಿದೆ. ಈ ಅಪರಾಧವು ಚಿಕ್ಕ ಮಕ್ಕಳ ಮೇಲಿನ ಕ್ರೂರತೆಗೆ ಸಂಬಂಧಿಸಿದ್ದರೆ, ಆ ಅಪರಾಧವು ಇನ್ನಷ್ಟು ಭಯಾನಕವಾಗುತ್ತದೆ. ಇಂತಹ ಬಲಾತ್ಕಾರಿಗಳಿಗೆ ಪಾಠ ಕಲಿಸಲು ಆಫ್ರಿಕಾದ ಮಡಗಾಸ್ಕರ್ ನಲ್ಲಿ ಒಂದು ಹೊಸ ಕಾನೂನನ್ನು ಜಾರಿಗೆ ತರಲಾಗಿದೆ. ಈ ಕಾನೂನಿನ ಅಡಿಯಲ್ಲಿ, ಚಿಕ್ಕ ಮಕ್ಕಳ ಮೇಲೆ ಬಲಾತ್ಕಾರ ಎಸಗುವವರಿಗೆ ಶಸ್ತ್ರಚಿಕಿತ್ಸೆ ಮೂಲಕ ಅಥವಾ ರಾಸಾಯನಿಕ ದ್ರವ್ಯಗಳ ಮೂಲಕ ನಪುಂಸಕರನ್ನಾಗಿ ಮಾಡಲಾಗುವುದು.

(ಸೌಜನ್ಯ – Brut India)

ಅತ್ಯಾಚಾರದ ಘಟನೆಗಳನ್ನು ತಡೆಯಲು ಮಹತ್ವದ ಹೆಜ್ಜೆ ! – ಮಡಗಾಸ್ಕರ್ ಕಾನೂನು ಸಚಿವ

ಈ ವಿಷಯದ ಬಗ್ಗೆ ಮಡಗಾಸ್ಕರ್‌ನ ಕಾನೂನು ಸಚಿವ ಲ್ಯಾಂಡಿ ಮೊಬೋಲಾಟಿಯಾನಾ ರಾಂಡ್ರಿಮನಾಂತೊಸೊವಾ ಮಾತನಾಡಿ, ಚಿಕ್ಕ ಬಾಲಕಿಯರ ಮೇಲೆ ಬಲಾತ್ಕಾರದ ಘಟನೆಗಳಲ್ಲಿ ಹೆಚ್ಚಳವಾಗಿದೆ. ಇದನ್ನು ನಿಲ್ಲಿಸಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. 2023 ರಲ್ಲಿ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಬಲಾತ್ಕಾರದ 600 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಜನವರಿ ತಿಂಗಳಲ್ಲಿ ಇದುವರೆಗೆ 133 ಅಪರಾಧಗಳು ದಾಖಲಾಗಿವೆ.

ಶಿಕ್ಷೆಯು ಸಂತ್ರಸ್ಥಳ ವಯಸ್ಸನ್ನು ಅವಲಂಬಿಸಿ ಇರಲಿದೆ !

ಹೊಸ ಕಾನೂನಿನ ಅನುಸಾರ , 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಯಾರಾದರೂ ತಪ್ಪಿತಸ್ಥರನ್ನು ಸಾಬೀತಾದರೇ ಆತನನ್ನು ಶಸ್ತ್ರಚಿಕಿತ್ಸೆಯ ಮೂಲಕ ನಪುಂಸಕ ಮಾಡಲಾಗುತ್ತದೆ. 10 ರಿಂದ 13 ವರ್ಷ ವಯಸ್ಸಿನ ಬಾಲಕಿಯ ಮೇಲೆ ಬಲಾತ್ಕಾರ ಮಾಡುವವನಿಗೆ ಶಸ್ತ್ರಚಿಕಿತ್ಸೆ ಅಥವಾ ರಾಸಾಯನಿಕ ಚುಚ್ಚುಮದ್ದಿನ ಮೂಲಕ ನಪುಂಸಕಗೊಳಿಸಲಾಗುತ್ತದೆ. 14 ರಿಂದ 17 ವರ್ಷದೊಳಗಿನ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರದ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ, ಅವನಿಗೆ ರಾಸಾಯನಿಕ ದ್ರವ್ಯ ನೀಡಿ ನಪುಂಸಕಗೊಳಿಸಲಾಗುವುದು. ಹೊಸ ಕಾನೂನಿನ ಪ್ರಕಾರ, ಬಲಾತ್ಕಾರಿಗಳನ್ನು ನಪುಂಸಕಗೊಳಿಸಿ, ಜೀವಾವಧಿ ಶಿಕ್ಷೆಯನ್ನು ನೀಡಲಾಗುತ್ತದೆ.

ಕಾನೂನು ಸಚಿವ ತಮ್ಮ ಮಾತನ್ನು ಮುಂದುವರಿಸಿ, ಮಕ್ಕಳ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ. ಸಂತ್ರಸ್ಥೆ ಎಷ್ಟು ಚಿಕ್ಕವಳಿರುತ್ತಾಳೆಯೋ, ಅಷ್ಟು ಅಪರಾಧಿಯ ಶಿಕ್ಷೆ ಹೆಚ್ಚಾಗಿರಲಿದೆ. ‘ಬಲಾತ್ಕಾರದ ಬಗ್ಗೆ ಯೋಚಿಸಲೂ ಯಾರೂ ಧೈರ್ಯ ಮಾಡಲಾರರು’, ಎಂಬ ನಿಯಮವನ್ನು ಮಾಡಲಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಲ್ಲಿ ಬಲಾತ್ಕಾರಗಳನ್ನು ಕಡಿಮೆ ಮಾಡಲು ಮಡಗಾಸ್ಕರ್ ಸರಕಾರದ ನಿರ್ಣಯ ಶ್ಲಾಘನೀಯವಾಗಿದೆ ! ಭಾರತವೂ ಇದರಿಂದ ಪಾಠವನ್ನು ಕಲಿಯುವುದು ಆವಶ್ಯಕವಾಗಿದೆ !