|
ದರ್ಭಂಗಾ (ಬಿಹಾರ) – ಬಿಹಾರದ ದರ್ಭಂಗಾ ಮತ್ತು ಸೀತಾಮಢಿಯಲ್ಲಿ ಫೆಬ್ರವರಿ 15 ರಂದು ಶ್ರೀ ಸರಸ್ವತಿ ದೇವಿಯ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಹಾಗೆಯೇ ಹೊಡೆದಾಟ ಮಾಡಿರುವ ಘಟನೆ ವರದಿಯಾಗಿದೆ. ಇದರಲ್ಲಿ ದರ್ಭಂಗಾದ ಪ್ರಕರಣದಲ್ಲಿ ಮೆರವಣಿಗೆಯ ಮೇಲೆ ಮಸೀದಿಯ ಹತ್ತಿರ ಕಲ್ಲು ತೂರಾಟ ಮತ್ತು ಆಸಿಡ್ ಎಸೆದಿದ್ದರು. ಈ ಸಂದರ್ಭದಲ್ಲಿ ದೇವಿಯ ಮೂರ್ತಿಯನ್ನು ಧ್ವಂಸಗೊಳಿಸಿದರು. `ಸ್ವರಾಜ್ಯಮಾಗ’ ಈ ಹಿಂದುತ್ವನಿಷ್ಠ ಸುದ್ದಿ ಸಂಕೇತಸ್ಥಳದ ಪತ್ರಕರ್ತೆ ಸ್ವಾತಿ ಗೋಯಲ ಶರ್ಮಾ ಇವರು ದರ್ಭಂಗಾದ ಘಟನೆಯ ಒಂದು ವಿಡಿಯೋ `ಎಕ್ಸ್’ ನಲ್ಲಿ ಪ್ರಸಾರ ಮಾಡಿದ್ದಾರೆ.
(ಸೌಜನ್ಯ – News 18 Bihar Jharkhand)
ದಾಳಿಯಿಂದಾಗಿ ಹಿಂದೂಗಳು ದೇವಿಯ ಮೂರ್ತಿಯನ್ನು ಬಿಟ್ಟು ಪಲಾಯನ !
ದರ್ಭಂಗದ ಕಸಾಯಿ ಟೋಲಾದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಮೂರ್ತಿ ವಿಸರ್ಜನೆಗೆ ತೆರಳುತ್ತಿದ್ದವರ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಲ್ಲಿ ಅನೇಕ ಜನರು ಗಾಯಗೊಂಡರು. ಕಲ್ಲು ತೂರಾಟ ಆರಂಭವಾಗುತ್ತಿರುವಾಗಲೇ ಇದ್ದಕ್ಕಿದ್ದಂತೆ ನೂಕುನುಗ್ಗಲು ಆಯಿತು. ಜನರು ದೇವಿಯ ಮೂರ್ತಿಯನ್ನು ಬಿಟ್ಟು ಅಲ್ಲಿಂದ ಓಡಿಹೋದರು. ಇದರಿಂದ ಮತಾಂಧ ಮುಸಲ್ಮಾನರು ಶ್ರೀ ಸರಸ್ವತಿ ದೇವಿಯ ಮೂರ್ತಿಯನ್ನು ಧ್ವಂಸಗೊಳಿಸಿದರು. ಇದರಿಂದ ಆಕ್ರೋಶಗೊಂಡ ಜನರು ಮತಾಂಧರ ಮನೆ, ಅಂಗಡಿ, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಹಿಂಸಾಚಾರದ ಘಟನೆಯ ಬಗ್ಗೆ ಮಾಹಿತಿ ಪಡೆದ ದರ್ಬಂಗಾ ಜಿಲ್ಲಾಧಿಕಾರಿ, ವಿಶೇಷ ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. (ಇಂತಹ ಭಯಭಿತ ಹಿಂದೂಗಳಿಂದ ಏನು ಪ್ರಯೋಜನ ? ದೇವತೆಗಳ ಮೂರ್ತಿಗಳನ್ನು ರಕ್ಷಿಸಲು ಸಾಧ್ಯವಾಗದವರು ಎಂದಾದರೂ ಹಿಂದೂ ಧರ್ಮ ಮತ್ತು ದೇಶವನ್ನು ರಕ್ಷಿಸ ಬಲ್ಲರೇ ?)
ಯಾತ್ರೆಯ ಮಾರ್ಗವನ್ನು ಬದಲಾಯಿಸಿದ್ದರಿಂದ ಉದ್ವಿಗ್ನ
ಭಾಲಪಟ್ಟಿ ಪೊಲೀಸ್ ಠಾಣಾಧಿಕಾರಿ ಪ್ರಿನ್ಸ ಕುಮಾರ ಯಾದವ ಮಾತನಾಡಿ, ಯಾತ್ರೆಯ ಮಾರ್ಗ ಬದಲಾಯಿಸಿದ್ದರಿಂದ ಅಕಸ್ಮಿಕವಾಗಿ ಉದ್ವಿಗ್ನತೆ ನಿರ್ಮಾಣವಾಯಿತು. ಈ ಕಸಾಯಿ ಪ್ರದೇಶದಿಂದ ಮೆರವಣಿಗೆ ಈ ಹಾದು ಹೋಗುತ್ತಿರುವಾಗ ಕಲ್ಲು ತೂರಾಟ ನಡೆಸಿದರು. ಈ ಮೆರವಣಿಗೆ ಮಸೀದಿ ಹತ್ತಿರ ತಲುಪುವ ಮೊದಲೇ ಅದರ ಮೇಲೆ ದಾಳಿ ನಡೆಸಲಾಯಿತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ 13 ಜನರನ್ನು ಬಂಧಿಸಲಾಗಿದೆ.
ಸೀತಾಮಢಿಯಲ್ಲಿ ಮತಾಂಧರ ಕಲ್ಲು ತೂರಾಟಕ್ಕೆ ಕಲ್ಲು ತೂರಾಟದಿಂದಲೇ ಪ್ರತ್ಯುತ್ತರ !
ಸೀತಾಮಢಿಯ ಪರಿಹಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಶ್ರೀ ಸರಸ್ವತಿ ದೇವಿಯ ಮೂರ್ತಿಯ ವಿಸರ್ಜನೆ ಮಾಡಲು ಹೊರಟಿದ್ದ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆ ಮಸಾಹ ಟೊಲಾ ವಾರ್ಡ್ ಸಂಖ್ಯೆ 13 ರಲ್ಲಿ ನಡೆದಿದೆ. ಈ ಕಲ್ಲು ತೂರಾಟಕ್ಕೆ ಕಲ್ಲು ಎಸೆದು ಪ್ರತ್ಯುತ್ತರ ನೀಡಲಾಯಿತು. ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ಸಿಗುತ್ತಲೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಇಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಪಾದಕೀಯ ನಿಲುವುಬಿಹಾರದಲ್ಲಿ, ಜನತಾ ದಳ (ಸಂಯುಕ್ತ) ಮತ್ತು ಭಾಜಪ ಸರಕಾರ ಇರುವಾಗ ಹಿಂದೂಗಳ ಮೇಲೆ ದಾಳಿ ಮಾಡುವ ಮತಾಂಧರಿಗೆ ಧೈರ್ಯಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ ! ‘ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮತಾಂಧರು ನಡೆಸುವ ದಾಳಿಯನ್ನು ‘ಪೊಲೀಸರು ಮತ್ತು ಸರಕಾರ ನಿಲ್ಲಿಸದಿದ್ದರೆ, ಹಿಂದೂಗಳೇ ಅವರ ಮೇಲಾಗುವ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತ್ಯುತ್ತರ ನೀಡಲು ಪ್ರಾರಂಭಿಸಿದರೆ, ಅವರನ್ನು ಅಪರಾಧಿಗಳೆಂದು ಹೇಳಲಾಗುವುದಿಲ್ಲ’, ಎಂದು ಯಾರಿಗಾದರೂ ಅನಿಸುತ್ತಿದ್ದರೆ, ಅದನ್ನು ತಪ್ಪೆಂದು ತಿಳಿಯಬಾರದು ! |