ತ್ರಿಪುರಾದಲ್ಲಿನ ಸರಕಾರಿ ಕಲಾ ಮಹಾವಿದ್ಯಾಲಯದಲ್ಲಿ ಶ್ರೀ ಸರಸ್ವತಿದೇವಿಯ ಅಪಮಾನ !

ಮೂರ್ತಿಗೆ ಸಾಂಪ್ರದಾಯಿಕ ಸೀರೆ ಉಡಿಸದಿರುವುದರಿಂದ ಅ.ಭಾ.ವಿ.ಪ. ಮತ್ತು ಬಜರಂಗದಳದಿಂದ ಪ್ರತಿಭಟನೆ

ಆಗರತಳಾ (ತ್ರಿಪುರಾ) – ತ್ರಿಪುರಾದಲ್ಲಿ `ಆರ್ಟ್ ಅಂಡ್ ಕ್ರಾಫ್ಟ್’ ಎಂಬ ಸರಕಾರಿ ಕಲಾ ಮಹಾವಿದ್ಯಾಲಯದಲ್ಲಿ ಫೆಬ್ರುವರಿ ೧೪ ರಂದು ಶ್ರೀಸರಸ್ವತಿ ದೇವಿಯ ಪೂಜಾಉತ್ಸವ ಆಯೋಜಿಸಲಾಗಿತ್ತು; ಆದರೆ ಈ ಕಾರ್ಯಕ್ರಮದಲ್ಲಿ ಶ್ರೀಸರಸ್ವತಿ ದೇವಿಯ ಮೂರ್ತಿಗೆ ಸಾಂಪ್ರದಾಯಿಕ ಸೀರೆಯನ್ನು ಉಡಿಸಿರಲಿಲ್ಲ. ಇದರಿಂದಾಗಿ ಮೂರ್ತಿಯು ಅಶ್ಲೀಲವಾಗಿ ಕಾಣುತ್ತಿದ್ದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಮೂರ್ತಿಗೆ ಸೀರೆಯನ್ನು ಉಡಿಸಿದರು. ಈ ಪ್ರಕರಣದಲ್ಲಿ ಈ ಸಂಘಟನೆಗಳು ಇಲ್ಲಿ ಪ್ರತಿಭಟನೆ ನಡೆಸಿದವು. ಅ.ಭಾ.ವಿ.ಪ.ನ ತ್ರಿಪುರಾ ಶಾಖೆಯ ಕಾರ್ಯದರ್ಶಿಗಳಾದ ದಿವಾಕರ ಆಚಾರ್ಜಿ ರವರು ಈ ಆಂದೋಲನದ ನೇತೃತ್ವ ವಹಿಸಿದರು. ಕೊನೆಗೆ ಕಾಲೇಜಿನ ಆಡಳಿತವು ಈ ಮೂರ್ತಿಯನ್ನು ಬದಲಾಯಿಸಿ ಅದನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ಇಟ್ಟಿತು.

ಆಚಾರ್ಜಿರವರು ಮುಂದುವರಿದು, ನಮ್ಮೆಲ್ಲರಿಗೂ ವಸಂತ ಪಂಚಮಿಯಂದು ದೇಶಾದ್ಯಂತ ಶ್ರೀ ಸರಸ್ವತಿ ದೇವಿಯ ಪೂಜೆಯನ್ನು ಮಾಡುವುದು ತಿಳಿದಿದೆ. ಸರಕಾರಿ ಅರ್ಟ್ ಅಂಡ್ ಕ್ರಾಫ್ಟ್ ಮಹಾವಿದ್ಯಾಲಯದಲ್ಲಿ ಶ್ರೀಸರಸ್ವತಿ ದೇವಿಯ ಮೂರ್ತಿಯನ್ನು ತಪ್ಪು ಹಾಗೂ ಅಸಭ್ಯವಾಗಿ ಇಡಲಾಗಿರುವ ಮಾಹಿತಿಯು ನಮಗೆ ಬೆಳಗ್ಗೆ ದೊರೆಯಿತು. ಶ್ರೀಸರಸ್ವತಿ ದೇವಿಯ ಮೂರ್ತಿಗೆ ಸಾಂಪ್ರದಾಯಿಕ ಸೀರೆಯನ್ನು ಉಡಿಸಿರಲಿಲ್ಲ. ಆದುದರಿಂದ ಇದನ್ನು ವಿರೋಧಿಸಿ ನಾವು ಪ್ರತಿಭಟನೆ ನಡೆಸಿದೆವು. ಅನಂತರ ಈ ಬಗ್ಗೆ ಬಜರಂಗದಳಕ್ಕೆ ಮಾಹಿತಿ ದೊರೆಯಿತು. ಆದುದರಿಂದ ಅವರು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾದರು. ಅನಂತರ ಮೂರ್ತಿಗೆ ಸೀರೆ ಉಡಿಸಲಾಯಿತು ಎಂದು ಹೇಳಿದರು.

(ಸೌಜನ್ಯ – CHINI KHORANG TRIPURA)

(ಇಲ್ಲಿ ತೋರಿಸಲಾದ ಚಿತ್ರ ಹಾಗೂ ವಿಡಿಯೋ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)

ಘಟನಾಸ್ಥಳಕ್ಕೆ ಪೊಲೀಸರೂ ಭೇಟಿ ನೀಡಿದ್ದಾರೆ; ಆದರೆ ಕಾಲೇಜು ಪ್ರತಿಭಟನಾಕಾರರ ವಿರುದ್ಧ ಯಾವುದೇ ದೂರು ನೀಡಿಲ್ಲ. ಅ.ಭಾ.ವಿ.ಪ. ಮತ್ತು ಬಜರಂಗದಳವೂ ಮಹಾವಿದ್ಯಾಲಯದ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಾಂಪ್ರದಾಯಿಕ ಮೂರ್ತಿಯನ್ನು ತಯಾರಿಸಲಾಯಿತು ! – ಮಹಾವಿದ್ಯಾಲಯದ ಸ್ಪಷ್ಟನೆ

ಮಹಾವಿದ್ಯಾಲಯದ ಆಡಳಿತವು, ಹಿಂದೂ ದೇವಸ್ಥಾನದಲ್ಲಿ ಪಾಲಿಸಿರುವ ಸಾಂಪ್ರದಾಯಿಕ ಶಿಲ್ಪಕಲೆಯನ್ನು ಈ ಮೂರ್ತಿ ತಯಾರಿಕೆಯಲ್ಲಿ ಪಾಲಿಸಲಾಗಿತ್ತು. ಯಾರದೇ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶ ನಮ್ಮದಲ್ಲ, ಎಂದು ಹೇಳಿದೆ.

ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಮಹಾವಿದ್ಯಾಲಯದ ಮೇಲೆ ಕ್ರಮ ಕೈಗೊಳ್ಳಬೇಕು ! – ಅ.ಭಾ.ವಿ.ಪ.ನ ಬೇಡಿಕೆ

ತ್ರಿಪುರಾದ ಮುಖ್ಯಮಂತ್ರಿ ಮಾಣಿಕ ಸಾಹ ರವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಮಹಾವಿದ್ಯಾಲಯದ ಆಡಳಿತದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅ.ಭಾ.ವಿ.ಪ.ವು ಮನವಿ ಮಾಡಿದೆ.

ಸಂಪಾದಕೀಯ ನಿಲುವು

ತ್ರಿಪುರಾದಲ್ಲಿ ಭಾಜಪದ ಸರಕಾರವಿರುವಾಗ ಸರಕಾರಿ ಮಹಾವಿದ್ಯಾಲಯದಲ್ಲಿ ಇಂತಹ ಘಟನೆಗಳು ಅಪೇಕ್ಷಿತವಿಲ್ಲ !