ರಾಜಸ್ಥಾನದ ಶಾಲೆಗಳಲ್ಲಿ ರಥಸಪ್ತಮಿಯ ನಿಮಿತ್ತ ಉತ್ಸಾಹಪೂರ್ಣವಾಗಿ ‘ಸೂರ್ಯನಮಸ್ಕಾರ’ದ ಕಾರ್ಯಕ್ರಮ ಜರುಗಿತು !

ಕಾರ್ಯಕ್ರಮವನ್ನು ನಿಷೇಧಿಸುವಂತೆ ದಾಖಲಿಸಲಾಗಿದ್ದ ಮುಸ್ಲಿಂ ಸಂಘಟನೆಯ ಅರ್ಜಿಯನ್ನು ರಾಜಸ್ಥಾನ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ !

ಜಯಪುರ (ರಾಜಸ್ಥಾನ) – ರಾಜಸ್ಥಾನದ ಭಾಜಪ ಸರಕಾರವು ಫೆಬ್ರವರಿ 15 ರಂದು ರಥ ಸಪ್ತಮಿಯ ನಿಮಿತ್ತ ಶಾಲೆಗಳಲ್ಲಿ ‘ಸೂರ್ಯನಮಸ್ಕಾರ’ದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಉತ್ಸಾಹಪೂರ್ಣವಾಗಿ ಜರುಗಿತು. ರಾಜಸ್ಥಾನದ ಶಿಕ್ಷಣ ಸಚಿವರಾದ ಮದನ ದಿಲಾವರ ರವರು ವಿಧ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದರು. ಈ ಕಾರ್ಯಕ್ರಮವನ್ನು ನಿಷೇಧಿಸಬೇಕೆಂಬ ಮುಸಲ್ಮಾನ ಸಂಘಟನೆಯ ಬೇಡಿಕೆಯನ್ನು ರಾಜಸ್ಥಾನ ಉಚ್ಚನ್ಯಾಯಾಲಯವು ಹಿಂದಿನ ದಿನವೇ ವಜಾಗೊಳಿಸಿತ್ತು. ಮುಸಲ್ಮಾನ ಸಂಘಟನೆಯು `ಸೂರ್ಯನಮಸ್ಕಾರದಲ್ಲಿ ಶ್ಲೋಕಗಳನ್ನೂ ಹೇಳಲಾಗುತ್ತದೆ. ಮುಸಲ್ಮಾನರು ಕೇವಲ ಅಲ್ಲಾನನ್ನು ಪೂಜಿಸುವುದರಿಂದ ಇದು ಇಸ್ಲಾಂನ ವಿರುದ್ಧವಾಗಿದೆ, ಎಂದು ಹೇಳಿತ್ತು.

1. ಹಲವು ಮುಸ್ಲಿಂ ಸಂಘಟನೆಗಳು ‘ಮುಸ್ಲಿಂ ಫೋರಂ’ ಎಂಬ ವೇದಿಕೆಯಡಿ ಅರ್ಜಿ ಸಲ್ಲಿಸಿದ್ದವು. ಈ ವೇದಿಕೆಯ ಪರವಾಗಿ ಎಂ.ಐ.ಎಂ. ನ ಕಾರ್ಯದರ್ಶಿಯಾದ ಕಾಶಿಫ ಜುಬೇರಿಯವರು ಅರ್ಜಿಯನ್ನು ದಾಖಲಿಸಿದ್ದರು. (ಮುಸ್ಲಿಂ ಸಂಘಟನೆಗಳು ಧರ್ಮಕ್ಕಾಗಿ ಒಗ್ಗೂಡುತ್ತವೆ, ಆದರೆ ಹಿಂದೂ ಸಂಘಟನೆಗಳು ಧರ್ಮಕ್ಕಾಗಿ ಒಗ್ಗೂಡುವುದಿಲ್ಲ ! – ಸಂಪಾದಕರು)

2. ಮುಸ್ಲಿಂ ಸಂಘಟನೆಗಳು ರಾಜಸ್ಥಾನದ ಶಾಲೆಗಳಲ್ಲಿ ಕಲಿಯುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಈ ದಿನವನ್ನು ಬಹಿಷ್ಕರಿಸಿ, ಶಾಲೆಗೆ ಹೋಗದಿರಲು ಹೇಳಿದ್ದವು. (ಈ ಕಾರಣದಿಂದ ಶಾಲೆಗೆ ಬರದಿರುವ ವಿದ್ಯಾರ್ಥಿಗಳ ವಿರುದ್ಧ ಶಾಲೆಯು ಕ್ರಮ ಕೈಗೊಳ್ಳಬೇಕು !- ಸಂಪಾದಕರು)

3. ರಾಜಸ್ಥಾನ ಉಚ್ಚನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸುವಾಗ ‘ಮುಸ್ಲಿಂ ಫೋರಂ’ ಶಾಲಾ ಮಕ್ಕಳ ಪ್ರತಿನಿಧಿಯಲ್ಲ ಅಥವಾ ನೋಂದಾಯಿತ ಸಂಸ್ಥೆಯೂ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಬಂಧಪಟ್ಟವರ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ, ಎಂದು ಹೇಳಿತ್ತು. (ನೊಂದಣಿಯಾಗದಿರುವಾಗಲೂ ಇಂತಹ ಸಂಘಟನೆಗಳು ನೇರವಾಗಿ ಉಚ್ಚನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸುತ್ತಿದ್ದರೆ, ಸರಕಾರವು ಅವುಗಳ ಮೇಲೆ ಕ್ರಮಕೈಕೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. – ಸಂಪಾದಕರು)

4. ಜಮಿಯತ್ ಉಲೇಮಾ-ಎ-ಹಿಂದ್ ನ ರಾಜ್ಯ ಕಾರ್ಯದರ್ಶಿಯಾದ ಅಬ್ದುಲ ವಾಹಿದ ಖತ್ರಿಯವರು ಮಾತನಾಡುತ್ತ, ಹಿಂದೂಗಳು ಸೂರ್ಯನನ್ನು ದೇವರೆಂದು ನಂಬುತ್ತಾರೆ; ಆದರೆ ಇಸ್ಲಾಂನಲ್ಲಿ ಅಲ್ಲಾನ ಮೇಲೆ ಯಾರೂ ಇಲ್ಲ, ಎಂದು ಹೇಳಿದರು. (ಇಂತಹ ಮುಸಲ್ಮಾನರು ಎಂದಾದರೂ ಸರ್ವಧರ್ಮಸಮಭಾವ ಹಾಗೂ ಜಾತ್ಯಾತೀತತೆಯನ್ನು ಪಾಲಿಸುವರೇ? ಈಗ ಇನ್ನೂ ಎಷ್ಟು ದಿನಗಳ ವರೆಗೆ ಕೇವಲ ಹಿಂದೂಗಳು ಇದನ್ನು ಪಾಲಿಸುವುದು? ಎಂಬುದನ್ನು ನಿರ್ಧರಿಸಬೇಕಿದೆ. – ಸಂಪಾದಕರು)

ಸಂಪಾದಕೀಯ ನಿಲುವು

ಜೂನ್ 21 ರಂದು ‘ವಿಶ್ವ ಯೋಗ ದಿನ’ವನ್ನು ಆಚರಿಸಲಾಗುತ್ತದೆ. ಭಾರತದ ಹೆಚ್ಚಿನ ಮುಸಲ್ಮಾನರು ಇದನ್ನೂ ವಿರೋಧಿಸುತ್ತಾರೆ; ಆದರೆ ಅನೇಕ ಮುಸಲ್ಮಾನ ದೇಶಗಳು ಈ ದಿನವನ್ನು ಆಚರಿಸುತ್ತವೆ. ಇದು ಭಾರತದ ಮುಸಲ್ಮಾನರಿಗೆ ತಿಳಿದಿದ್ದರೂ ಹಿಂದೂ ದ್ವೇಷದಿಂದಾಗಿ ಸೂರ್ಯನಮಸ್ಕಾರವನ್ನು ವಿರೋಧಿಸುತ್ತಿರುತ್ತಾರೆ !