ದೆಹಲಿಯ ಗಡಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ !

ಅಂಬಾಲಾ (ಹರಿಯಾಣ) – ಕನಿಷ್ಠ ಖಾತ್ರಿ ಬೆಲೆಗಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯದಲ್ಲಿನ ರೈತರ ಪ್ರತಿಭಟನೆ ಎರಡನೆಯ ದಿನ ಕೂಡ ಮುಂದುವರೆದಿದೆ; ಆದರೆ ಮೊದಲ ದಿನದಂತೆ ಎರಡನೆಯ ದಿನದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯದೇ ಇದ್ದರೂ ಕೂಡ ರೈತರಂದ ಕಲ್ಲು ತೂರಾಟ ನಡೆದಿದೆ. ಹಾಗೂ ಪೊಲೀಸರು ಅಶ್ರುವಾಯು ಸಿಡಿಸಿದರು.

ರೈತರು ಕಾಲ್ನಡಿಗೆಯಲ್ಲಿ ಮತ್ತು ವಾಹನಗಳ ಮೂಲಕ ದೆಹಲಿಯ ಬೇರೆ ಬೇರೆ ಗಡಿಗಳಲ್ಲಿ ತಲುಪಿದ್ದಾರೆ. ಅವರಿಗೆ ದೆಹಲಿಯಲ್ಲಿ ಪ್ರವೇಶಿಸಿ ಪ್ರತಿಭಟನೆ ಮಾಡುವುದಿದೆ; ಆದರೆ ದೆಹಲಿ ಪೊಲೀಸರು ಗಡಿಯಲ್ಲಿ ಬ್ಯಾರಿಕೇಡ್ ಹಾಕಿ ಗಡಿಯಲ್ಲೇ ಅವರನ್ನು ತಡೆದರು. ಫೆಬ್ರವರಿ ೧೩ ರಂದು ಪ್ರತಿಭಟನಾಕಾರ ರೈತರು ಶಂಭು ಗಡಿಯಿಂದ ದೆಹಲಿಗೆ ನುಗ್ಗಲು ಪ್ರಯತ್ನ ಮಾಡುತ್ತಿರುವಾಗ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಆ ಸಮಯದಲ್ಲಿ ಪೊಲೀಸರು ಅವರ ಮೇಲೆ ಆಶ್ರುವಾಯು ಸಿಡಿಸಿದರು ಹಾಗೂ ರಬ್ಬರ್ ಗುಂಡುಗಳನ್ನು ಹಾರಿಸಿದರು. ಪೊಲೀಸರು ಡ್ರೋನ್ ಮೂಲಕ ಆಶ್ರುವಾಯು ಸಿಡಿಸಿದರು. ಇದರಲ್ಲಿ ಕೆಲವು ರೈತರು ಗಾಯಗೊಂಡರು ಹಾಗೂ ಅನೇಕ ರೈತರನ್ನು ಬಂಧಿಸಲಾಯಿತು. ಕಿಸಾನ ಮಜದೂರ ಮೋರ್ಚಾದ ಸಮನ್ವಯಕ ಸರ್ವನ್ ಸಿಂಹ ಪಂಧೆರ ಇವರು, ಯಾವುದೇ ಪರಿಸ್ಥಿತಿಯನ್ನು ಎದುರಿಸಿ ನಾವು ದೆಹಲಿಗೆ ಹೋಗುವೆವು ಎಂದು ಹೇಳಿದರು.

ಹರಿಯಾಣದಲ್ಲಿನ ಅಂಬಾಲಾ, ಕುರುಕ್ಷೇತ್ರ, ಕೈಥಲ, ಜಿಂದ, ಹಿಸ್ಸಾರ್, ಫತೆಹಾಬಾದ್ ಮತ್ತು ಶಿರಸಾ ಇಲ್ಲಿ ಇಂಟರ್ನೆಟ್ ನಿಷೇಧಿಸಿದ್ದಾರೆ. ಈ ಪ್ರತಿಭಟನೆಯಿಂದ ದೆಹಲಿಯ ಗಡಿಯಲ್ಲಿನ ರಸ್ತೆಗಳಲ್ಲಿ ಬೃಹತ್ ಸಾರಿಗೆ ಅಡಚಣೆ ನಿರ್ಮಾಣ ಆಗಿದೆ.

ಸಮಸ್ಯೆಯನ್ನು ಸೃಷ್ಟಿಸುವುದರಿಂದ ಅಲ್ಲ ಬದಲಾಗಿ ಸಂವಾದದಲ್ಲಿ ಪರಿಹಾರ ದೊರೆಯುವುದು ! – ಕೇಂದ್ರ ಕೃಷಿ ಸಚಿವ ಅರ್ಜುನ ಮುಂಡಾ

ಕೃಷಿ ಸಚಿವ ಅರ್ಜುನ ಮುಂಡಾ ಇವರು ಮಾತನಾಡುತ್ತಾ, ಯಾವ ವಿಷಯದ ಕುರಿತು ಮಾತನಾಡುತ್ತಿದ್ದೇವೆ ಆ ವಿಷಯದ ನಿರ್ಣಯ ಇಷ್ಟು ಬೇಗ ತೆಗೆದುಕೊಳ್ಳಲು ಸಾಧ್ಯವಿಲ್ಲ. ರೈತರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ನಾವು ಅವರ ಎಲ್ಲಾ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಸಾಮಾನ್ಯ ಜನಜೀವನ ಹದಗೆಡಬಾರದು ಮತ್ತು ಜನರು ಅಡಚಣೆಗಳನ್ನು ಎದುರಿಸಬಾರದು, ಇತರ ರೈತರ ಸಂಘಟನೆಯ ನಾಯಕರು ಕೂಡ ಕಾಳಜಿ ವಹಿಸಬೇಕು. ಸಾಮಾನ್ಯ ಜನಜೀವನ ಹದಗೆಡಬಾರದು ಮತ್ತು ಜನರಿಗೆ ತೊಂದರೆ ಆಗಬಾರದು ಇದರ ಬಗ್ಗೆ ಕೂಡ ರೈತ ಸಂಘಟನೆಯ ನಾಯಕರು ಕಾಳಜಿ ವಹಿಸಿಕೊಳ್ಳಬೇಕು. ಸಮಸ್ಯೆಗಳನ್ನು ನಿರ್ಮಿಸಿದರೆ ಪರಿಹಾರ ಸಿಗುವುದಿಲ್ಲ ಸಂವಾದದಿಂದ ಪರಿಹಾರ ಸಿಗುತ್ತದೆ ಎಂದು ಹೇಳಿದರು.