‘ಹೈದರಾಬಾದ ಮುಕ್ತಿ ಸಂಗ್ರಾಮ’ದ ಯಶೋಗಾಥೆ ತೋರಿಸುವ ‘ರಜಾಕಾರ’ ಚಲನಚಿತ್ರ ಮಾರ್ಚ್ 1 ರಂದು ಬಿಡುಗಡೆ !

ಮುಂಬಯಿ – ಹೈದರಾಬಾದ (ಭಾಗ್ಯನಗರದ) ಮುಕ್ತಿ ಸಂಗ್ರಾಮದ ಯಶೋಗಾಥೆ ಹೇಳುವ ‘ರಜಾಕಾರ್’ ಚಲನಚಿತ್ರ ಮಾರ್ಚ್ 1ರಂದು ಚಲನಚಿತ್ರ ಮಂದಿರದಲ್ಲಿ ಪ್ರದರ್ಶನ ಗೊಳ್ಳಲಿದೆ. ಈ ಚಲನಚಿತ್ರದ ‘ಟ್ರೈಲರ್’ (ಜಾಹೀರಾತಿಗಾಗಿ ಚಲನಚಿತ್ರದ ಪ್ರದರ್ಶನಗೊಳ್ಳುವ ಸ್ವಲ್ಪ ಭಾಗ) ಪ್ರದರ್ಶಿತಗೊಳಿಸಲಾಯಿತು. ಇದರಲ್ಲಿ ನಿಜಾಮನು ಹಿಂದುಗಳ ನರಸಂಹಾರ ಮಾಡಿರುವುದು, ಪಾಕಿಸ್ತಾನವು ನಿಜಾಮನ ಪ್ರತ್ಯೇಕತಾವಾದಕ್ಕೆ ನೀಡಿರುವ ಸಹಾಯ, ಹೈದರಾಬಾದ್ ಸಂಸ್ಥಾನಕ್ಕೆ ಭಾರತದಲ್ಲಿ ವಿಲೀನಗೊಳಿಸುವುದಕ್ಕಾಗಿ ತತ್ಕಾಲಿನ ಕೇಂದ್ರ ಸಚಿವ ವಲ್ಲಭಾಯಿ ಪಟೇಲ್ ಇವರು ನಡೆಸಿರುವ ಸೈನ್ಯ ಕಾರ್ಯಾಚರಣೆ, ಈ ಕಾಲಾವಧಿಯಲ್ಲಿ ನಿಜಾಮರ ದೌರ್ಜನ್ಯದ ವಿರುದ್ಧ ಹಿಂದೂಗಳಿಂದ ನೀಡಲಾದ ಧರ್ಮ ಹೋರಾಟದ ಮನಕಲಕುವ ವಾಸ್ತವ ಈ ಚಲನಚಿತ್ರದಲ್ಲಿ ತೋರಿಸಲಾಗಿದೆ.

(ಸೌಜನ್ಯ – ADITYA MOVIES)

ಚಲನಚಿತ್ರದ ಮೂಲಕ ಮನಕಲಕುವ ವಾಸ್ತವ ಬೆಳಕಿಗೆ ಬರುವುದು

೧. ಈ ಚಲನಚಿತ್ರದಲ್ಲಿ ಹೈದರಾಬಾದದ ೭ ನೇ ನಿಜಾಮ ಮೀರ ಉಸ್ಮಾನ್ ಅಲಿ ಖಾನ್ ಇವನು ಹಿಂದುಗಳ ಮೇಲೆ ನಡೆಸಿರುವ ಕ್ರೂರ ದೌರ್ಜನ್ಯದ ವಾಸ್ತವಿಕ ಚಿತ್ರಣ ಇದೆ. ಹಿಂದೂಗಳ ಮತಾಂತರ, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹಿಂದೂಗಳ ನರಸಂಹಾರದ ಭೀಕರತೆ ಈ ಚಲನಚಿತ್ರದಲ್ಲಿ ತೋರಿಸಲಾಗಿದೆ.

೨. ‘ಯಾ ತೋ ಮಾಜಹಬ ಬದಲನಾ ಹೋಗಾ, ಯಾ ರಾಜ್ಯ ಚೊಡನಾ ಹೋಗಾ’ (ಧರ್ಮ ಬದಲಾಯಿಸಬೇಕು ಅಥವಾ ರಾಜ್ಯ ಬಿಡಬೇಕು), ‘ಓಂ ಶಬ್ದ ಸುನಾಯಿ ನಹಿ ದೇನಾ ಚಾಹಿಯೇ ಔರ ಭಗವಾ ರಂಗ ದಿಖಾಯಿ ನಹಿ ದೇನಾ ಚಾಹಿಯೇ’ (ಓಂ ಶಬ್ದ ಕೇಳಿಸಬಾರದು ಅಥವಾ ಕೇಸರಿ ಬಣ್ಣ ಕಾಣಿಸಬಾರದು) ಮುಂತಾದವು ನಿಜಾಮನ ಬಾಯಿಯಲ್ಲಿ ಬರುವ ವಾಕ್ಯಗಳು ಹಿಂದುಗಳ ಮೇಲಿನ ದೌರ್ಜನ್ಯದ ಭೀಕರತೆ ತೋರಿಸಲಾಗಿದೆ.

೩. ಚಲನಚಿತ್ರದಲ್ಲಿ ‘ಮೈ ಹೈದರಾಬಾದ್ ಕೋ ದೂಸರ ಕಾಶ್ಮೀರ್ ಬನನೇ ನಹಿ ದುಂಗಾ’ (ನಾನು ಹೈದರಾಬಾದವನ್ನು ಎರಡನೆಯ ಕಾಶ್ಮೀರ ಆಗಲು ಬಿಡುವುದಿಲ್ಲ) ‘ಅವಕಾಶ ಇಲ್ಲ, ಸಮರ್ಪಣೆ ಇಲ್ಲ, ಯುದ್ಧ ಆಗುವುದು’ (ನಾ ಸಂದೀ, ನಾ ಸಮರ್ಪಣ ಯುದ್ಧತೋ ಹೋಗ) ಈ ಸಂವಾದದಿಂದ ವಲ್ಲಭಾಯಿ ಪಟೇಲ್ ಇವರು ನಿಜಾಮನ ವಿರುದ್ಧ ತೆಗೆದುಕೊಂಡ ಆಕ್ರಮಕ ನಿಲುವು ಇದರ ವಾಸ್ತವ ಚಿತ್ರಣ ತೋರಿಸುವುದು ಗಮನಕ್ಕೆ ಬರುತ್ತದೆ. ಒಟ್ಟಾರೆ ಚಲನಚಿತ್ರದ ಟ್ರೈಲರ್ ಹಿಂದೂಗಳ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

ಗೂಡೂರ ನಾರಾಯಣ ರೆಡ್ಡಿ ಇವರು ಈ ಚಲನಚಿತ್ರದ ನಿರ್ಮಾಪಕರಾಗಿದ್ದಾರೆ. ಸತ್ಯನಾರಾಯಣ ಇವರು ಈ ಚಲನಚಿತ್ರದ ನಿರ್ದೇಶಕರಾಗಿದ್ದಾರೆ. ಈ ಚಲನಚಿತ್ರದಲ್ಲಿ ಮಹೇಶ್ ಅಚಂತಾ, ಅನಸುಯಾ ಭಾರದ್ವಾಜ, ರಾಜ ಅರುಣ, ಮಕರಂದ ದೇಶಪಾಂಡೆ, ಅಶ್ವಿನಿ ಕಾಳಸೇಕರ ಈ ಪ್ರಸಿದ್ಧ ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ.

ಸಂಪಾದಕೀಯ ನಿಲುವು

ಒಂದುವರೆ ಸಾವಿರ ವರ್ಷದಲ್ಲಿ ಮುಸಲ್ಮಾನರಿಂದ ನಡೆದಿರುವ ‘ಹಿಂದೆಂದೂ ಕಂಡರಿಯದ’ ರೀತಿಯ ಅತ್ಯಾಚಾರ ಹಿಂದುಗಳು ಸಹಿಸಿದ್ದಾರೆ. ನೆಹರು ಗಾಂಧಿ ಮತ್ತು ಕಾಂಗ್ರೆಸ್ ಇವರಿಂದ ಇಷ್ಟು ವರ್ಷಗಳ ಕಾಲ ಇದರ ಬಗ್ಗೆ ಮಾತನಾಡುವುದು ಕೂಡ ಸಾಧ್ಯವಿರಲಿಲ್ಲ; ಅಥವಾ ಮುಂದಿನ ಪೀಳಿಗೆಗೆ ಮತ್ತು ದೇಶಾದ್ಯಂತ ಇರುವ ಹಿಂದುಗಳಿಂದ ಈ ವಿಷಯ ಮುಚ್ಚಿಡಲಾಗಿತ್ತು. ಈಗ ಇದು ವಿವಿಧ ಮಾಧ್ಯಮದಿಂದ ಹಿಂದುಗಳವರೆಗೆ ವ್ಯಾಪಕ ಪ್ರಮಾಣದಲ್ಲಿ ತಲುಪಿಸುವುದು, ಇದು ಪರಿವರ್ತನೆಯ ದೊಡ್ಡ ಲಕ್ಷಣವಾಗಿದೆ.