ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಅವರ ಘೋಷಣೆ !
ಡೆಹರಾಡೂನ (ಉತ್ತರಾಖಂಡ) – ಹಲ್ದ್ವಾನಿಯ ಬನಭೂಲಪುರದಲ್ಲಿ ಕಾನೂನುಬಾಹಿರ ಕಟ್ಟಡವನ್ನು ಕೆಡವಲಾಗಿದೆ. ಅದೇ ಸ್ಥಳದಲ್ಲಿ ಪೋಲೀಸ್ ಠಾಣೆಯನ್ನು ಕಟ್ಟಲಾಗುವುದು. ದೇವಭೂಮಿಯ ಶಾಂತತೆಯೊಂದಿಗೆ ಆಟವಾಡುವ ಯಾರನ್ನೂ ಬಿಡುವುದಿಲ್ಲ, ಇದು ನಮ್ಮ ಸರಕಾರದಿಂದ ಭ್ರಷ್ಟ ಮತ್ತು ಗಲಭೆಕೋರರಿಗೆ ಸ್ಪಷ್ಟ ಸಂದೇಶವಾಗಿದೆ. ಉತ್ತರಾಖಂಡದಲ್ಲಿ ಇಂತಹ ವಂಚಕರಿಗೆ ಜಾಗವಿಲ್ಲ, ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಮತಾಂಧ ಮುಸ್ಲೀಂರಿಗೆ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಇಲ್ಲಿ ಅತಿಕ್ರಮಣ ತೆರವಿಗೆ ಮತಾಂಧರು ಗಲಭೆ ನಡೆಸಿದ್ದರು. ಇದರಲ್ಲಿ ೫ ಜನರು ಸಾವನ್ನಪ್ಪಿದ್ದು, ೧೦೦ ಕ್ಕೂ ಹೆಚ್ಚು ಪೋಲೀಸರು ಗಾಯಗೊಂಡಿದ್ದರು.
🛑 #Uttarakhand Chief Minister Pushkar Singh Dhami’s announcement
👉 A Police Station will be built at the site where the encroachment was demolished in #Haldwani#HaldwaniViolence #HaldwaniEncroachment #UttarakhandPolice pic.twitter.com/yLo0gCmWt2
— Sanatan Prabhat (@SanatanPrabhat) February 12, 2024