ಭಾಗ್ಯನಗರದ (ತೆಲಂಗಾಣ) ಕ್ಯಾಡ್ಬರಿ ಚಾಕೊಲೇಟ್‌ನಲ್ಲಿ ಜೀವಂತ ಹುಳು ಪತ್ತೆ !

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ !

ಭಾಗ್ಯನಗರ (ತೆಲಂಗಾಣ) – ಕ್ಯಾಡ್ಬರಿ ಚಾಕೊಲೇಟ್‌ಗಳಲ್ಲಿ ಜೀವಂತ ಹುಳು ಕಂಡುಬಂದಿರುವ ವೀಡಿಯೊವನ್ನು ರಾಬಿನ್ ಝಾಕಿಯಸ್ ಹೆಸರಿನ ವ್ಯಕ್ತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಅವರು, ‘ಅಂತಹ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಪರಿಶೀಲಿಸಲು ಯಾವುದಾದರು ಯಂತ್ರ ವಿದೆಯೆ ? ಸಾರ್ವಜನಿಕ ಆರೋಗ್ಯ ಸಂದರ್ಭದಲ್ಲಿ ಈ ಅಕ್ಷಮ್ಯ ದುರ್ಲಕ್ಷಕ್ಕಾಗಿ ಯಾರು ಹೊಣೆ ? ‘ಈ ವೀಡಿಯೊದೊಂದಿಗೆ ಖರೀದಿ ಪಾವತಿಯು ಸಹ ಕಾಣುತ್ತದೆ. ರಾಬಿನ್ ಅವರ ಪೋಸ್ಟ್‌ಗೆ ‘ಕ್ಯಾಡ್ಬರಿ ಡೈರಿ ಮಿಲ್ಕ್’ ಉತ್ತರಿಸಿದೆ. ಇದರಲ್ಲಿ, ‘ಮ್ಯಾಂಡೆಲೆಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್’ ಯಾವಾಗಲೂ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ನಿಮಗೆ ಬಂದ ಕೆಟ್ಟ ಅನುಭವಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ನಿಮ್ಮ ದೂರಿನ ಪರಿಹಾರಕ್ಕಾಗಿ ದಯವಿಟ್ಟು ನಿಮ್ಮ ದೂರನ್ನು suggestions@mdlzindiacom ಗೆ ಕಳುಹಿಸಿ. ಅದರ ಜೊತೆಗೆ ನಿಮ್ಮ ಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಖರೀದಿ ವಿವರಗಳನ್ನು ನೀಡಿ ಎಂದು ವಿನಂತಿಸಲಾಗಿದೆ.

ಸಂಪಾದಕೀಯ ನಿಲುವು

ಆಹಾರ ಮತ್ತು ಔಷಧ ಇಲಾಖೆಗೆ ಇವು ಕಾಣುವುದಿಲ್ಲವೇ ?