ಕೆಪಟಾವುನ (ದಕ್ಷಿಣ ಆಫ್ರಿಕಾ) – ‘ನನ್ನ ಶಕ್ತಿಸ್ಥಾನ ನನ್ನ ಧರ್ಮವಾಗಿದೆ. ಧರ್ಮ ಮತ್ತು ಆಧ್ಯಾತ್ಮ ಇವು ಕಠಿಣ ಪ್ರಸಂಗಗಳಲ್ಲಿ ನನ್ನ ಶಕ್ತಿ ಸ್ಥಾನವಾಗಿದೆ’, ಎಂದು ದಕ್ಷಿಣ ಆಫ್ರಿಕಾದ ಬೌಲರ್ ಕೇಶವ ಮಹಾರಾಜ್ ಇವರು ಹೇಳಿಕೆ ನೀಡಿದರು. ಬಲಗೈ ಮೇಲೆ ‘ಓಂ ನಮಃ ಶಿವಾಯ’ ಬರೆದಿರುವ ತಾಮ್ರದ ಕಡಗ ಹಾಕಿಕೊಂಡಿರುವ ಕೇಶವ ಮಹಾರಾಜರು ಅಯೋಧ್ಯೆಗೆ ಆಗಮಿಸಿ ಶ್ರೀರಾಮಲಲ್ಲಾನ ದರ್ಶನ ಪಡೆಯುವ ಆಸೆ ಇದೆ ಎಂದು ಹೇಳಿದರು.
ಕೇಶವ ಮಹಾರಾಜ ಇವರು ಹಿಂದೂ ಧರ್ಮದಲ್ಲಿ ಶ್ರದ್ಧೆ ಇರುವ ಕೆಲವು ವಿಶೇಷ ಉದಾಹರಣೆ !
೧. ಕೇಶವ ಮೈದಾನದಲ್ಲಿ ಅವರ ಭಗವಂತನ ಮೇಲೆ ವಿಶ್ವಾಸ ವ್ಯಕ್ತಪಡಿಸುವಲ್ಲಿ ಎಂದೂ ಹಿಂದೆ ಸರಿದಿಲ್ಲ. ಇದರ ಒಂದು ಉದಾಹರಣೆ ಕೆಲವು ವಾರಗಳ ಹಿಂದೆ ಭಾರತೀಯ ಸಂಘದ ದಕ್ಷಿಣ ಆಫ್ರಿಕ-ಕ್ರಿಕೆಟ್ ಪ್ರವಾಸದ ಸಮಯದಲ್ಲಿ ಕಂಡುಬಂದಿತು. ಕೇಶವ ಬಾಲಿಂಗ್ ಗಾಗಿ ಮೈದಾನದಲ್ಲಿ ಬರುವಾಗ ಡಿಜೆಯಲ್ಲಿ ‘ರಾಮ ಸಿಯಾರಾಮ’ ಹಾಡು ಹಾಕಲು ಹೇಳುತ್ತಿದ್ದರು.
೨. ನವಂಬರ್-ಡಿಸೆಂಬರ್ ೨೦೨೩ ರಲ್ಲಿ ಭಾರತದಲ್ಲಿ ನಡೆದಿರುವ ಒನ್ ಡೇ ವಿಶ್ವಕಪ್ ಸಮಯದಲ್ಲಿ ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕೇಶವ ಇವರ ಬ್ಯಾಟ್ ಮೇಲೆ ‘ಓಂ’ ಸ್ಟಿಕರ್ ಅಂಟಿಸಿದ್ದರು. ಚೆನ್ನೈದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಅವರು ಗೆಲುವಿನ ಆನಂದ ವ್ಯಕ್ತಪಡಿಸುವಾಗ ಮಾಡಿರುವ ಪೋಸ್ಟಿನಲ್ಲಿ ‘ಜೈ ಶ್ರೀ ಹನುಮಾನ್’ ಎಂದು ಬರೆದಿದ್ದರು.
೩. ಒಂದು ಸಂದರ್ಶನದಲ್ಲಿ ಅವರು, ನಾನು ಧಾರ್ಮಿಕ ಮತ್ತು ಆಧ್ಯಾತ್ಮದಲ್ಲಿ ಬಹಳ ಆಸಕ್ತಿ ಇರುವ ಕುಟುಂಬದಿಂದ ಬಂದಿದ್ದೇನೆ. ಧರ್ಮ ಮತ್ತು ಆಧ್ಯಾತ್ಮ ನನ್ನ ಮೇಲೆ ಹೇರಿಲ್ಲ. ನನಗೆ ಯಾವಾಗಲೂ, ಅದು ನನಗೆ ಕಠಿಣ ಪರಿಸ್ಥಿತಿಯಲ್ಲಿ ಮಾರ್ಗದರ್ಶನ ಮತ್ತು ದೃಷ್ಟಿಕೋನ ನೀಡುತ್ತದೆ ಅನಿಸುತ್ತದೆ ಎಂದು ಹೇಳಿದ್ದರು.
೪. ಕೇಶವ ಇವರ ಮುತ್ತಜ್ಜ ಉತ್ತರ ಪ್ರದೇಶದಲ್ಲಿನ ಸುಲ್ತಾನಪುರದಿಂದ ೧೮೭೪ ರಲ್ಲಿ ಡರ್ಬನದಲ್ಲಿ ಕೂಲಿ ಕೆಲಸಕ್ಕಾಗಿ ಬಂದಿದ್ದರು. ‘ನಾನು ಎಲ್ಲಾ ಹಬ್ಬಗಳನ್ನು ಮನೆಯಲ್ಲಿ ಆಚರಿಸುತ್ತೇನೆ ಮತ್ತು ಪ್ರತಿಯೊಬ್ಬರಿಗೂ ಜೀವನದಲ್ಲಿ ಶ್ರದ್ಧೆ ಇರಬೇಕು.’ ಎಂಬ ಸಂದೇಶವನ್ನು ಕೊಡುತ್ತೇನೆ, ಎಂದು ಹೇಳಿದರು.
೫. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಸಮಯದಲ್ಲಿ ಕೇಶವ ಎಷ್ಟು ಉತ್ಸಾಹಿತವಾಗಿದ್ದರೂ ಎಂದರೆ, ಅವರು ಈ ಬಗ್ಗೆ ನಾನು ಪ್ರಭು ಶ್ರೀ ರಾಮನ ಅನನ್ಯ ಭಕ್ತನಾಗಿದ್ದೇನೆ ಮತ್ತು ಈ ದಿನ ವಿಶೇಷವಾಗಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹೀಗೆ ನಡೆಯುವುದು ವಿಶೇಷವಾಗಿದೆ. ಇದು ಜಗತ್ತಿನಲ್ಲಿ ಎಲ್ಲೆಡೆ ನಡೆಯುವುದಿಲ್ಲ ಮತ್ತು ಇದು ನಡೆದಿರುವುದು ನನಗೆ ಸಂತೋಷ ನೀಡಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಎಷ್ಟು ಭಾರತೀಯ ಹಿಂದೂ ಕ್ರಿಕೆಟ ಆಟಗಾರರಲ್ಲಿ ಇಂತಹ ಧರ್ಮಾಭಿಮಾನ ಇದೆ ? |