ಮಹಾರಾಷ್ಟ್ರ ಶೌರ್ಯ ಮತ್ತು ಪರಾಕ್ರಮದ ನಾಡು ! – ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ, ಉತ್ತರ ಪ್ರದೇಶ

ಅಳಂದಿಯಲ್ಲಿ (ಪುಣೆ) ಉತ್ಸಾಹಭರಿತ, ಚೈತನ್ಯಮಯ ಹಾಗೂ ಭಾವಪೂರ್ಣ ವಾತಾವರಣದಲ್ಲಿ, ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ‘ಗೀತಾ ಭಕ್ತಿ ಅಮೃತ ಮಹೋತ್ಸವ’ ಮುಕ್ತಾಯ !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (ಬಲ) ಅವರಿಗೆ ಗಣೇಶನ ವಿಗ್ರಹವನ್ನು ನೀಡಿ ಸತ್ಕಾರ ಮಾಡುತ್ತಿರುವ, ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ

ಅಳಂದಿ (ಪುಣೆ ಜಿಲ್ಲೆ), ಫೆಬ್ರವರಿ 11 (ಸುದ್ದಿ.) – ಮಹಾರಾಷ್ಟ್ರದಲ್ಲಿ ಒಂದೇ ಕುಟುಂಬದಲ್ಲಿ ನಾಲ್ವರು ಸಂತರಾಗಿದ್ದಾರೆ. ನೂರಾರು ವರ್ಷಗಳಿಂದ ಅವರ ಆಶೀರ್ವಾದ ಸಿಗುತ್ತಿದೆ. ಅದೇ ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಸಮರ್ಥ ರಾಮದಾಸಸ್ವಾಮಿ ನಿರ್ಮಿಸಿದ್ದರು. ಅವರು ಔರಂಗಜೇಬನ ಆಡಳಿತಕ್ಕೆ ಸಮಾಲೆಸೆದಿದ್ದರು. ಮಹಾರಾಷ್ಟ್ರವು ಶೌರ್ಯ ಮತ್ತು ಪರಾಕ್ರಮದ ನಾಡಾಗಿದೆ, ಏಕೆಂದರೆ ಇಲ್ಲಿ ಸಂತರ ಉಪಸ್ಥಿತಿ ಇದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಳಂದಿಯಲ್ಲಿ ಗೌರವೋದ್ಘರಿಸಿದ್ದಾರೆ. ಫೆ.11ರಂದು ಇಲ್ಲಿನ ವಾರಕರಿ ಶಿಕ್ಷಣ ಸಂಸ್ಥೆಯ ಎದುರು ಆಯೋಜಿಸಿದ್ದ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರ ‘ಗೀತಾ ಭಕ್ತಿ ಅಮೃತ ಮಹೋತ್ಸವ’ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ 15 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸುತ್ತಾ, “ಇಂದು ಪುಣ್ಯಭೂಮಿಯಾದ ಆಳಂದಿಗೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ. ನಾನು ಸನಾತನ ಧರ್ಮಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಇಂದು ನಾನು ಶ್ರೀ ಜ್ಞಾನೇಶ್ವರ ಮಹಾರಾಜರ ಭೂಮಿಗೆ ವಂದಿಸುತ್ತೇನೆ. ನಾನು ಚಿಕ್ಕವನಿದ್ದಾಗ, ಶ್ರೀ ಜ್ಞಾನೇಶ್ವರ ಮಹಾರಾಜರು ಬರೆದ ಜ್ಞಾನೇಶ್ವರಿಯನ್ನು ಓದಿದ್ದೇನೆ ಮತ್ತು ನಾನು ಆಳಂದಿಗೆ ಬರಬೇಕೆಂದು ಬಯಸಿದ್ದೆ. ಅದು ಇಂದು ಪೂರ್ಣಗೊಂಡಿದೆ ಎಂದು ಹೇಳಿದರು.

ಪ್ರತಿಯೊಬ್ಬರೂ 5 ತಪಸ್ವಿಗಳನ್ನು ಸತ್ಕರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಬೇಕು ! – ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ್

ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ್ ಅವರು ಮಾರ್ಗದರ್ಶನ ಮಾಡುತ್ತಾ, “ನಾನು ಆಳಂದಿ ಭೂಮಿಯನ್ನು ಎಲ್ಲಕ್ಕಿಂತ ಪವಿತ್ರವೆಂದು ಪರಿಗಣಿಸುತ್ತೇನೆ. ನನ್ನ ಮನಸ್ಸು ಆಳಂದಿದಲ್ಲಿ ಮಾತ್ರ ನೆಲೆಸಿದೆ. ಇಲ್ಲಿ ಭಾಗವತ್ ಕಥೆಗಳನ್ನು ಕೇಳುವ ಮತ್ತು ತಮ್ಮ ಇಡೀ ಜೀವನವನ್ನು ಧರ್ಮಕ್ಕಾಗಿ ಮುಡಿಪಾಗಿಟ್ಟ 75 ತ್ಯಾಗಿ ತಪಸ್ವಿಗಳನ್ನು ಬರೆದು ಅವರ ಸತ್ಕಾರ ಮಾಡಬೇಕು. ನಾನು ಅವರ ಮುಖದಲ್ಲಿ ಆನಂದವನ್ನು ಅನುಭವಿಸಲು ಬಯಸುತ್ತೇನೆ; ಆದರೆ ಕ್ರಮೇಣ ಕಾರ್ಯಕ್ರಮ ಬೆಳೆಯಿತು. ನಾವೂ ಕೂಡ ಅಂತಹ 5 ತಪಸ್ವಿಗಳನ್ನು ಗೌರವಿಸುವ ಮೂಲಕ ನಮ್ಮ ಜನ್ಮದಿನವನ್ನು ಸಹ ಆಚರಿಸಬೇಕು ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಸಂತರು ಮತ್ತು ಗಣ್ಯರಿಂದ ಗೌರವೋದ್ಗಾರ !

ಸನಾತನ ವೈದಿಕ ಸಂಸ್ಕೃತಿಯ ರಕ್ಷಣೆಯಲ್ಲಿ ಮಹಾರಾಷ್ಟ್ರಕ್ಕೆ ಮಹತ್ತರವಾದ ಸ್ಥಾನವಿದೆ ! – ಪ.ಪೂ. ಜಗದ್ಗುರು ಶಂಕರಾಚಾರ್ಯ ಪ.ಪೂ. ವಿಜಯೇಂದ್ರ ಸರಸ್ವತಿ ಮಹಾರಾಜರು, ಕಂಚಿ ಕಾಮಕೋಟಿ ಪೀಠಾಧೀಶರು

ಮಹಾರಾಷ್ಟ್ರ ಸಂತರ ನಾಡು. ಛತ್ರಪತಿ ಶಿವಾಜಿ ಮಹಾರಾಜರಂತಹ ರಾಜರು ಇಲ್ಲಿಯೇ ಆಗಿ ಹೋದರು. ಹೆಚ್ಚಿನ ಜ್ಯೋತಿರ್ಲಿಂಗ ಮತ್ತು ಅಷ್ಟವಿನಾಯಕರು ಈ ನೆಲದಲ್ಲಿದ್ದಾರೆ. ಸೇನಾ ಮುಖ್ಯಸ್ಥರೂ ಮಹಾರಾಷ್ಟ್ರದವರು.

ಜುನಾ ಅಖಾಡ ಪೀಠಾಧಿಪತಿ ಪೂ. ಅವಧೇಶಾನಂದ ಗಿರಿಜಿ ಮಹಾರಾಜ್

ಪೂ. ಸ್ವಾಮಿ ಮಾಡುತ್ತಿರುವ ಶ್ರೀಮದ್ ಭಗವದ್ಗೀತೆ ಮತ್ತು ವೇದಗಳ ಸಂರಕ್ಷಣೆ ಮತ್ತು ಪ್ರಚಾರದ ಕಾರ್ಯ ಅದ್ಭುತವಾಗಿದೆ.” ಪೂ. ರಮೇಶಭಾಯ್ ಓಜಾ ಅವರು ಮಾತನಾಡಿ, ‘ಭಾರತ್ ಮತ್ತು ಸ್ವಾಮಿಗಳ ಅಮೃತ ಮಹೋತ್ಸವವಾಗಿದೆ. ಭಾರತ ಮತ್ತು ಸ್ವಾಮಿಗಳ ನಡುವೆ ಏಕತೆ ಇದೆ. ಸ್ವಾಮಿಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಕ್ತಿ ಮತ್ತು ಭಕ್ತಿಯ ಸಂಗಮವನ್ನು ಆಚರಿಸುತ್ತಿದ್ದೇವೆ. ಶ್ರೀಮದ್ ಭಗವದ್ಗೀತೆ ಜಾಗತಿಕ ಗ್ರಂಥವಾಗಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.

ಯೋಗ ಋಷಿ ಬಾಬಾ ರಾಮದೇವ್

ಮಹಾರಾಷ್ಟ್ರವು ಶಕ್ತಿ, ಭಕ್ತಿ, ಶೌರ್ಯ ಮತ್ತು ಜ್ಞಾನವನ್ನು ನೀಡಿತು. ಪೂಜ್ಯ ಸ್ವಾಮೀಜಿ ಅವರು ವೇದಗಳು, ಉಪನಿಷತ್ತುಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ನಿರೂಪಿಸಿದ ಸಂತರಾಗಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಮೂಲಕ ದೇಶಕ್ಕೆ ಸಾಂಸ್ಕೃತಿಕ ನಾಯಕತ್ವ ನೀಡುವ ಕಾರ್ಯವನ್ನು ಸ್ವಾಮೀಜಿ ಮಾಡಿದ್ದಾರೆ. ಈಗ ರಾಮರಾಜ್ಯ ತರಲು ಯೋಗ ಮತ್ತು ಧರ್ಮವನ್ನು ಹಿಡಿಯಬೇಕು ಎಂದು ಹೇಳಿದರು.

ಸ್ವಾಮೀಜಿಯವರು ಜ್ಞಾನೇಶ್ವರ ಮತ್ತು ಜ್ಞಾನೇಶ್ವರಿಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದರು ! – ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ

ಜನರಿಂದ ಶ್ರೀರಾಮ ಸ್ಥಾಪನೆಯಾಗಬೇಕು ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಇದರ ಪ್ರಕಾರ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ್ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯನ್ನು ಮಾಡಿದರು. ಆದರೆ ಅವರು ಶ್ರೀಕೃಷ್ಣನ ಪ್ರಾಣಪ್ರತಿಷ್ಠೆಯನ್ನು ಮಾಡದೆ ವಿಶ್ರಮಿಸುವುದಿಲ್ಲ. ಜ್ಞಾನೇಶ್ವರ ಮತ್ತು ಜ್ಞಾನೇಶ್ವರಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಿದರು.

ಯೋಗಿ ಆದಿತ್ಯನಾಥ್ ಇವರು ಶ್ರೀ ಜ್ಞಾನೇಶ್ವರ್ ಮಹಾರಾಜ್ ಸಂಜೀವನ್ ಸಮಾಧಿಯ ದರ್ಶನ ಪಡೆದರು !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಳಂದಿಯಲ್ಲಿರುವ ಸಂತ ಜ್ಞಾನೇಶ್ವರ ಮಹಾರಾಜ್ ಸಂಜೀವನ ಸಮಾಧಿಯ ದರ್ಶನ ಪಡೆದರು ಮತ್ತು ಗ್ರಾಮ ದೇವತೆ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮುಖ್ಯ ಟ್ರಸ್ಟಿ ರಾಜೇಂದ್ರ ಉಮಾಪ್, ಟ್ರಸ್ಟಿ ಯೋಗಿ ನಿರಂಜನನಾಥಜಿ, ವಿಕಾಸ್ ಢಗೆ ಹಾಗೂ ವ್ಯವಸ್ಥಾಪಕ ಜ್ಞಾನೇಶ್ವರ ವೀರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಯೋಗಿ ನಿರಂಜನನಾಥಜಿ ಅವರು ಯೋಗಿ ಆದಿತ್ಯನಾಥ್ ಅವರಿಗೆ ದೇವಸ್ಥಾನದ ಬಗ್ಗೆ ಎಲ್ಲಾ ಮಾಹಿತಿ ನೀಡಿದರು.