ಮಾರಕಾಸ್ತ್ರ ಬಳಸಲಾಗಿದೆ ಎಂದು ಅಭಾವಿಪನ ಆರೋಪ
ನವ ದೆಹಲಿ – ಇಲ್ಲಿಯ ಜವಾಹರ ಲಾಲ ನೆಹರು ವಿಶ್ವವಿದ್ಯಾಲಯ ಎಂದರೆ ಜೆ.ಎನ್.ಯು. ದ ಪರಿಸರದಲ್ಲಿ ಫೆಬ್ರುವರಿ ೯ ರ ರಾತ್ರಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಅ.ಭಾ.ವಿ.ಪ.) ಮತ್ತು ಕಮ್ಯುನಿಸ್ಟ್ ವಿಚಾರಧಾರೆಯ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆಯಿತು. ಇದರಲ್ಲಿ ಎರಡೂ ಗುಂಪಿನ ವಿದ್ಯಾರ್ಥಿಗಳು ಗಾಯಗೊಂಡರು. ಈ ವಿಶ್ವವಿದ್ಯಾಲಯದಲ್ಲಿ ಈ ವರ್ಷ ವಿದ್ಯಾರ್ಥಿ ಸಂಘಟನೆಯ ಚುನಾವಣೆ ನಡೆಯಲಿದೆ. ಅದರ ಪ್ರಯುಕ್ತ ಇಲ್ಲಿಯ ಸಾಬರಮತಿ ಡಾಬಾದಲ್ಲಿ ವಿಶ್ವವಿದ್ಯಾಲಯದ ಸಾಮಾನ್ಯ ಸಭೆಗಾಗಿ ಎಲ್ಲಾ ವಿದ್ಯಾರ್ಥಿಗಳ ಗುಂಪು ಬಂದಿದ್ದವು. ಇದರಲ್ಲಿ ಚುನಾವಣಾ ಆಯೋಗದ ಸದಸ್ಯರ ಚುನಾವಣೆಯ ಕುರಿತು ಚರ್ಚೆ ನಡೆಯಿತು. ಆ ಸಮಯದಲ್ಲಿ ಈ ಘರ್ಷಣೆ ನಡೆದಿದೆ. ಈ ಘರ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಪರಸ್ಪರ ವಾದಿಸುವುದು ಕಾಣುತ್ತಿದೆ. ಇಲ್ಲಿಯ ಸುರಕ್ಷಾ ಕಾರ್ಮಿಕರು ಮಧ್ಯಪ್ರವೇಶಿಸುತ್ತಿರುವುದು ಕಾಣುತ್ತಿದೆ. ವಿಶ್ವವಿದ್ಯಾಲಯದ ಆಡಳಿತದಿಂದ ಇಲ್ಲಿಯವರೆಗೆ ಈ ಘಟನೆಯ ಕುರಿತು ಯಾವುದೇ ಹೇಳಿಕೆ ಬಂದಿಲ್ಲ.
(ಸೌಜನ್ಯ – TV9)
೧. ಡೆಮೊಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ ನ ಕಾರ್ಯಕರ್ತರಿಂದ ನಮ್ಮ ಮೇಲೆ ದಾಳಿ ನಡೆದಿದೆ, ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿ ಪ್ರಶಾಂತೋ ಬಾಗಚಿ ಮತ್ತು ದಿವ್ಯ ಪ್ರಕಾಶ್ ಈ ಅಂಗವಿಕಲ ವಿದ್ಯಾರ್ಥಿನಿಯರಿಗೆ ಕೂಡ ತಳಿಸಲಾಗಿದೆ. ವಿದ್ಯಾರ್ಥಿ ಪ್ರಫುಲ್ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ.
೨. ಈ ಪ್ರಕರಣದ ಬಗ್ಗೆ ದೆಹಲಿ ಪೊಲೀಸ್ ಅಧಿಕಾರಿಗಳು, ರಾತ್ರಿ ೧೨.೩೦ ಗಂಟೆಗೆ ವಿಶ್ವವಿದ್ಯಾಲಯದ ಸುರಕ್ಷಾ ಕಾರ್ಮಿಕರು ಕರೆ ಮೂಲಕ ದೂರ ನೀಡಿದ್ದರು. ಅದರ ನಂತರ ಪೊಲೀಸ ತಂಡ ವಿಶ್ವವಿದ್ಯಾಲಯದ ಪ್ರವೇಶ ದ್ವಾರ ತಲುಪಿದರು. ಆದರೆ ಒಳಗೆ ಹೋಗಲಿಲ್ಲ. ಪೊಲೀಸರಿಗೆ ಕೇವಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ದೂರು ದೊರೆತಿದೆ. ವಿಶ್ವವಿದ್ಯಾಲಯದಿಂದ ಯಾವುದೇ ದೂರು ನೀಡಿಲ್ಲ. ಪೊಲೀಸರು ಜೆ.ಎನ್. ಯು.ದ ವ್ಯವಸ್ಥಾಪಕರ ಸಂಪರ್ಕದಲ್ಲಿದ್ದು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಜೆ.ಎನ್.ಯು. ನಲ್ಲಿ ದೇಶವಿರೋಧಿ ಮತ್ತು ಹಿಂದೂ ವಿರೋಧಿ ಕಮ್ಯುನಿಸ್ಟ್ ವಿಚಾರಧಾರೆಯ ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿಡುವಲ್ಲಿ ಆಡಳಿತ ವಿಫಲವಾಗಿದೆ, ಇಂತಹ ವಿದ್ಯಾಲಯಗಳನ್ನು ಮುಚ್ಚುವುದೇ ಲೇಸು ! |