ಬಿಜೆಪಿ ತನ್ನ ರಾಷ್ಟ್ರೀಯ ಪರಿಷತ್ತಿನಲ್ಲಿ ಶ್ರೀ ಕೃಷ್ಣ ಜನ್ಮಭೂಮಿಯ ಪ್ರಸ್ತಾಪ ತರುವ ಸಾಧ್ಯತೆ !

ನವ ದೆಹಲಿ – ಬಿಜೆಪಿಯ ರಾಷ್ಟ್ರೀಯ ಪರಿಷತ್ತಿನ ಸಭೆಯು ಫೆಬ್ರವರಿ 16 ರಿಂದ 18 ರವರೆಗೆ ಇಲ್ಲಿನ ಭಾರತ ಮಂಡಪದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ರಾಜ್ಯಾಧ್ಯಕ್ಷರು ಸಹಿತ ರಾಷ್ಟ್ರೀಯ ಪರಿಷತ್ತಿನ 8 ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸೂತ್ರಗಳ ಪ್ರಕಾರ ಪರಿಷತ್ತಿನ ಸಭೆಯ ಮುಖ್ಯ ಸೂತ್ರ ಶ್ರೀಕೃಷ್ಣ ಜನ್ಮಭೂಮಿಯ ಪ್ರಸ್ತಾಪದ ಬಗ್ಗೆ ಆಗಿರಬಹುದು. ‘ಈ ಪ್ರಸ್ತಾವನೆಯನ್ನು ಬಿಜೆಪಿ ನೇರವಾಗಿ ಮಂಡಿಸಬೇಕೆ ಅಥವಾ ವಿಹಿಂಪದಂತಹ ಸಂಘಟನೆಯ ಮೂಲಕ ತರಬೇಕೇ?’’ಎಂಬುದು ಪಕ್ಷದ ನಾಯಕರಲ್ಲಿ ಸಧ್ಯ ಚರ್ಚೆ ನಡೆಯುತ್ತಿದೆ. ಬಿಜೆಪಿಯ ಹೆಚ್ಚಿನ ಮುಖಂಡರು, ಬಿಜೆಪಿಯು ಪ್ರಸ್ತಾವನೆಯನ್ನು ತಾನೇ ಮಂಡಿಸಲಿ ಮತ್ತು ಇತರ ಸಂಘಟನೆಗಳ ಬಳಿ ಬೆಂಬಲಿಸುವಂತೆ ಒತ್ತಾಯಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರು, ನಾವು ಶ್ರೀರಾಮ ಮಂದಿರವನ್ನು ಪ್ರಸ್ತಾಪಿಸಿದಾಗ ಪರಿಸ್ಥಿತಿ ವಿಭಿನ್ನವಾಗಿತ್ತು ಆಗ ನಾವು ವಿರೋಧಿ ಪಕ್ಷದಲ್ಲಿದ್ದೆವು; ಹಾಗಾಗಿ ಸುದೀರ್ಘ ನ್ಯಾಯಾಲಯದ ಹೋರಾಟ ನಡೆಸಬೇಕಾಯಿತು. ಈಗ ಕೇಂದ್ರ ಹಾಗೂ ಉತ್ತರ ಪ್ರದೇಶ ಎರಡೂ ಕಡೆ ನಾವು ಅಧಿಕಾರದಲ್ಲಿದ್ದೇವೆ. ನಾವು ಮುಸ್ಲಿಂ ಪಕ್ಷಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ಉತ್ತರ ಪ್ರದೇಶ ಸರಕಾರವೂ ಜನ್ಮಭೂಮಿ ಕಾಯಿದೆಯನ್ನು ಜಾರಿಗೊಳಿಸಬಹುದು. ನ್ಯಾಯಾಲಯದ ಮೊರೆ ಹೋಗುವುದು ಕೊನೆಯ ಪರ್ಯಾಯವಾಗುತ್ತದೆ ಎಂದು ಹೇಳಿದರು.