ಲೋಕಸಭೆಯಲ್ಲಿ ಹಣಕಾಸು ಸಚಿವೆಯಿಂದ ಶ್ವೇತಪತ್ರ ಮಂಡನೆ !

ನವ ದೆಹಲಿ – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಲೋಕಸಭೆಯಲ್ಲಿ ಶ್ವೇತಪತ್ರವನ್ನು ಮಂಡಿಸಿದ್ದು, ಇಂದು ಫೆಬ್ರವರಿ 9 ರಂದು ಚರ್ಚೆ ನಡೆಯಲಿದೆ. ಈ ಶ್ವೇತಪತ್ರವು 2014 ರ ಮೊದಲು ಮತ್ತು ನಂತರದ ಭಾರತೀಯ ಆರ್ಥಿಕತೆಯ ಏರಿಳಿತಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಶ್ವೇತಪತ್ರ ಎಂದರೇನು ?

ಶ್ವೇತಪತ್ರವು ಸಾಮಾನ್ಯವಾಗಿ ನೀತಿಯ ಕುರಿತು ಮನವಿ ಅಥವಾ ಪ್ರಮುಖ ವಿಷಯದ ಬಗ್ಗೆ ಮಾಹಿತಿಯ ಪ್ರಸ್ತುತಿಯ ರೂಪವನ್ನು ತೆಗೆದುಕೊಳ್ಳುತ್ತದೆ. ಶ್ವೇತಪತ್ರವು ಬ್ರಿಟಿಷ್ ಸಂಸದೀಯ ಆಡಳಿತ ವ್ಯವಸ್ಥೆಯಿಂದ ನಿರ್ಮಾಣವಾಗಿದೆ.