ಮೋದಿ ಸರಕಾರದ ಅಸಮರ್ಥತೆಯನ್ನು ತೋರಿಸಲು ಕಾಂಗ್ರೆಸ್‌ನಿಂದ ಕಪ್ಪು ಪತ್ರ !

ನಿರುದ್ಯೋಗ, ಹಣದುಬ್ಬರ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮೋದಿ ಸರಕಾರ ವಿಫಲ !

ನವದೆಹಲಿ – 10 ವರ್ಷಗಳ ಮೋದಿ ಸರಕಾರವು ಅನ್ಯಾಯದ ಕಾಲವಾಗಿತ್ತು. ಈ ಸರಕಾರವು ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದೆ ಮತ್ತು ನಿರುದ್ಯೋಗ, ಹಣದುಬ್ಬರ ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಬಿಜೆಪಿಯೇತರ ಆಡಳಿತವಿರುವ ಕೇರಳ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಿಗೆ ಕಳೆದ ದಶಕದಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ಕಾಲದ ಆರ್ಥಿಕತೆಯ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಇದರಿಂದಾಗಿ ಫೆಬ್ರವರಿ 8ರಂದು ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ‘ಕಪ್ಪು ಪತ್ರ’ ಹೊರಡಿಸಿದೆ. ಈ ಸಂಬಂಧ ಖರ್ಗೆ ಪತ್ರಿಕಾಗೋಷ್ಠಿ ನಡೆಸಿ ಕಪ್ಪು ಪತ್ರ’ ಬಿಡುಗಡೆ ಮಾಡಿದರು.

10 ವರ್ಷಗಳಲ್ಲಿ ಬಿಜೆಪಿಯಿಂದ 411 ಶಾಸಕರ ಆಮದು !

ಖರ್ಗೆ ತಮ್ಮ ಮಾತನ್ನು ಮುಂದುವರೆಸಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗಾಣಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಇತರ ಪಕ್ಷಗಳಿಂದ 411 ಶಾಸಕರನ್ನು ಆಮದು ಮಾಡಿಕೊಂಡಿದೆ. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರವನ್ನು ಉರುಳಿಸಿದ ನಂತರ ಬಿಜೆಪಿ ತನ್ನದೇ ಆದ ಸರಕಾರವನ್ನು ರಚಿಸಿತು.

ಭಾರತದ ಪ್ರಗತಿಯ ಬಗ್ಗೆ ಯಾರ ದೃಷ್ಟಿ ತಾಗಬಾರೆಂದು ಕಪ್ಪು ಪತ್ರಿಕೆ ! – ಪ್ರಧಾನಿ ಮೋದಿ

ಫೆಬ್ರವರಿ 8 ರಂದು ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಖರ್ಗೆ ಅವರು ಕಪ್ಪು ಕಪ್ಪು ಪತ್ರವನ್ನು ಘೋಷಿಸಿದರು. ನಂತರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಗುವಿಗೆ ದೃಷ್ಟಿ ತಾಗಬಾರದು ಎಂದು ಚಿಕ್ಕ ಚುಕ್ಕೆ ಹಾಕುತ್ತಾರೆ. ಕಳೆದ 10 ವರ್ಷಗಳಲ್ಲಿ ಭಾರತ ಪ್ರಗತಿಯ ಉತ್ತುಂಗದಲ್ಲಿದೆ. ಈ ಪ್ರಗತಿಗೆ ಯಾರ ದೃಷ್ಟಿ ತಾಗಬಾರದೆಂದು ಕಾಂಗ್ರೆಸ್ ಕಪ್ಪು ಚುಕ್ಕೆ ಹಾಕಲು ಯತ್ನಿಸಿತು. ಅದಕ್ಕಾಗಿ ನಾನು ಖರ್ಗೆ ಧನ್ಯವಾದ ಹೇಳುತ್ತೇನೆ. ಹಿರಿಯ ವ್ಯಕ್ತಿಯೊಬ್ಬರು ಈ ಕೆಲಸವನ್ನು ಮಾಡಿದರು, ಅವರು ಹೆಚ್ಚು ಸಂತೋಷವಾಗುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹೀಗೆ ಮಾಡುವುದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾವುದೇ ಲಾಭವಾಗುವುದಿಲ್ಲ ! ಬದಲಿಗೆ, 2004-2014ರ ದಶಕದಲ್ಲಿ ಮಾಡಿದ ಭ್ರಷ್ಟಾಚಾರಕ್ಕಾಗಿ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು. ಇದರೊಂದಿಗೆ ‘ಶಿಕ್ಷಣ ನೀಡುವ ಹಕ್ಕು 2009’ ಈ ಹಿಂದು ವಿರೋಧಿ ಕಾನೂನು ಅದೇ ರೀತಿ ಹಿಂದಿನ ದಶಕದಲ್ಲಿ ಮಾಡಿದ ‘ಪ್ರಾರ್ಥನಾ ಕಾಯ್ದೆ 1991’, ‘ವಕ್ಫ್ ಕಾಯ್ದೆ 1995’ ನಂತಹ ಕಪ್ಪು ಕಾನೂನುಗಳನ್ನು ತೊಡೆದುಹಾಕುವ ಭರವಸೆಯನ್ನು ಕಾಂಗ್ರೆಸ್ ನೀಡಿದರೆ, ಅದರಿಂದ ಸ್ವಲ್ಪ ಲಾಭವಾಗಬಹುದು !