ಕಾಶಿ-ಮಥುರೆಯ ಮಂದಿರಗಳನ್ನು ನಿರ್ಮಾಣದ ಸಂಕಲ್ಪ ! – ಭಯ್ಯಾಜಿ ಜೋಶಿ, ರಾಷ್ಟ್ರೀಯ ಸ್ವಯಂಸೇವಕ ಸಂಘ

ಪಿಂಪರಿ (ಪುಣೆ ಜಿಲ್ಲೆ) – ದೇಶ ಬದಲಾಗುತ್ತಿದೆ, ಅದರ ಅನುಭೂತಿ ಬರುತ್ತಿದೆ. `ಜಯ ಶ್ರೀ ರಾಮ’ ಘೋಷಣೆ ಮಾಡಲಾಗುತ್ತಿದೆ. ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಜನವರಿ 22ರಿಂದ ದೇಶಾದ್ಯಂತ ಭಕ್ತಿಯ ಅಲೆ ಎದ್ದಿದೆ. ಅದು ಇನ್ನು ಮುಂದೆಯೂ ಶಾಶ್ವತವಾಗಿ ಇರಲಿದೆ. ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಮಂದಿರವಾಯಿತು. ಇದೇ ಮಾರ್ಗದಿಂದ ಮುಂದುವರಿಯುತ್ತಾ, ಕಾಶಿ-ಮಥುರೆಯ ಮಂದಿರಗಳನ್ನು ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆಯೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸದಸ್ಯ ಭಯ್ಯಾಜಿ ಜೋಶಿ ಚಿಂಚವಾಡದಲ್ಲಿ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ವಿನಾಯಕ ಥೋರಾತ ಅವರ ಅಮೃತ ಮಹೋತ್ಸವದ ಜನ್ಮದಿನದ ನಿಮಿತ್ತ ಚಿಂಚವಡದಲ್ಲಿ ಅಭಿಷ್ಟಚಿಂತನ ಸಮಾರಂಭ ನಡೆಯಿತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಜೋಶಿ ಮತ್ತು ಸಂಘದ ಪ್ರಾಂತ್ಯ ಸಂಘಚಾಲಕ ನಾನಾಸಾಹೇಬ ಜಾಧವ ಇವರ ಹಸ್ತದಿಂದ ಥೊರಾತ ಅವರನ್ನು ಸನ್ಮಾನಿಸಲಾಯಿತು. ಸ್ವಯಂಸೇವಕ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಜೋಶಿಯವರು ಮಾತನಾಡಿ, `ಮಂದಿರ ವಹೀ ಬನಾಯೇಂಗೆ’ ಈ ಘೋಷಣೆಯನ್ನು ನೀಡುತ್ತಾ, ರಾಮಭಕ್ತರು ಬಾಬ್ರಿಯನ್ನು ಕೆಡವಿದರು. 500 ವರ್ಷಗಳಿಂದ ಹೃದಯಕ್ಕೆ ಚುಚ್ಚುವ ಮುಳ್ಳನ್ನು ದೂರಗೊಳಿಸಿ ಆದರ್ಶಮಯ ಪ್ರೇರಣಾಸ್ಥಾನ ಸ್ಥಾನವನ್ನು ನಿರ್ಮಾಣ ಮಾಡಿದರು. ದೇಶದಲ್ಲಿ ಮಂದಿರಗಳೇನು ಕಡಿಮೆಯಿಲ್ಲ. ಆದರೆ ಅಯೋಧ್ಯೆಯ ಶ್ರೀರಾಮಮಂದಿರವು ಸರ್ವಾರ್ಥದಿಂದ ರಾಷ್ಟ್ರಮಂದಿರವಾಗಿದೆ. ಸಮಾಜದ ಸಾಮೂಹಿಕ ಆನಂದ, ಸಾಮೂಹಿಕ ಶಕ್ತಿಯನ್ನು ನಿರ್ಮಾಣ ಮಾಡುವ ಪ್ರಯತ್ನಗಳ ಒಂದು ಭಾಗವಾಗಿದೆ. ಆ ಮಧ್ಯಮದಿಂದ ದೇಶದ ಏಳನೇ ಸ್ವರ್ಣ ಪುಟವನ್ನು ಬರೆಯುವ ಭಾಗ್ಯ ನಿಮಗೆ ನಮಗೆ ಲಭಿಸಿದೆ ಎಂದು ಹೇಳಿದರು.