ನವ ದೆಹಲಿ – ಮೆಹರೌಲಿ ಪ್ರದೇಶದಲ್ಲಿ ಸಂಜಯ ವನದಲ್ಲಿದ್ದ ಅನೇಕ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಕೆಡವಲಾಗಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರವು (‘ಡಿಡಿಎ’) ಇಲ್ಲಿನ ಅತಿಕ್ರಮಣಗಳ ವಿರುದ್ಧ ಬುಲ್ಡೋಜರ್ ನಡೆಸಿ ಕ್ರಮವನ್ನು ಪ್ರಾರಂಭಿಸಿದೆ. ಸಂಜಯ ವನದಲ್ಲಿ ಸುಮಾರು 600 ವರ್ಷಗಳ ಹಳೆಯ ಅಖುಂದಜಿ ಮಸೀದಿಯನ್ನು ತೆರವುಗೊಳಿಸಿದ ಬಳಿಕ ಈಗ ಬಾಬಾ ಹಾಜಿ ರೋಜಬಿಹ ಇವನ ಗೋರಿಯನ್ನು ಕೆಡವಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಹಾಜಿ ರೋಜಬಿಹನು ಭಾರತದಲ್ಲಿ ಇಸ್ಲಾಂ ಧರ್ಮದ ಪ್ರಸಾರ ಮಾಡಿದ್ದನು.
1. `ಡಿ.ಡಿಎ’ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, `ರಿಜ ಮ್ಯಾನೇಜಮೆಂಟ ಬೋರ್ಡ’ ಉಚ್ಚ ನ್ಯಾಯಾಲಯವು ರಿಜ ಅರಣ್ಯ(ಪರ್ವತ ಶ್ರೇಣಿ) ಎಲ್ಲಾ ರೀತಿಯ ಅತಿಕ್ರಮಣಗಳಿಂದ ಮುಕ್ತವಿರಬೇಕು, ಇದಕ್ಕಾಗಿ ಒಂದು ಅಧ್ಯಯನ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಸಂಜಯ ವನದ ಅನೇಕ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸಿತ್ತು.
2. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್.ಜಿ.ಟಿ.ಗೆ) ಹಾಜರು ಪಡಿಸಿರುವ ವರದಿಯಲ್ಲಿ ಈ ಅತಿಕ್ರಮಣಗಳಲ್ಲಿ ಅನೇಕ ಬಹುಮಹಡಿ ಕಟ್ಟಡಗಳು ಮತ್ತು ತೋಟದ ಮನೆಗಳು ಸೇರಿವೆ ಎಂದು ಹೇಳಲಾಗಿದೆ.
3. ಈ ಅತಿಕ್ರಮಣಗಳು ರಿಜ ಅರಣ್ಯದಲ್ಲಿ ಅತ್ಯಂತ ಒಳಭಾಗದ ವರೆಗೆ ಹರಡಿಕೊಂಡಿವೆ. ನ್ಯಾಯಾಲಯ ಹಲವು ಬಾರಿ ಆದೇಶ ನೀಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಅನಧಿಕೃತ ಕಟ್ಟಡಗಳನ್ನು ತೆರವು ಮಾಡಲು ಯಾವುದೇ ಕ್ರಮವನ್ನು ಕೈಕೊಂಡಿಲ್ಲ. (ಈ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಆಗ ಮಾತ್ರ ಅತಿಕ್ರಮಣರಿಗೆ ಹದ್ದುಬಸ್ತಿನಲ್ಲಿಡಬಹುದು !- ಸಂಪಾದಕರು)
4. ಪ್ರಸಿದ್ಧ ಇತಿಹಾಸಕಾರ ಮತ್ತು ಲೇಖಕ ರಾಣಾ ಸಫವಿ ಅವರು ‘ಡಿಡಿಎ’ ದ ಕೃತ್ಯದ ಬಗ್ಗೆ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ. ಅವರು ಮಾತನಾಡಿ, ಸಂಜಯ ವನದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ಅತಿಕ್ರಮಣ ಎಂದು ಕರೆಯುವುದು ತಪ್ಪು ಎಂದಿದ್ದಾರೆ.
12th century shrine razed in DDA drive at Delhi’s Mehrauli
(Report @SANJEEVKJHA1 & Aheli Das) https://t.co/f3lnGQtKss pic.twitter.com/RexscbiysW
— HT Delhi (@htdelhi) February 6, 2024