ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರಿಂದ ಅಮೇರಿಕಾ ಮತ್ತು ಬ್ರಿಟನ್ ನೌಕೆಗಳ ಮೇಲೆ ದಾಳಿ !

ಅಮೇರಿಕಾದ ನೌಕೆ ಭಾರತಕ್ಕೆ ಬರುತ್ತಿತ್ತು !

ಮುಂಬಯಿ – ಯೆಮನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಮೇರಿಕಾ ಮತ್ತು ಬ್ರಿಟನನ ಪ್ರತ್ಯೇಕ ವ್ಯಾಪಾರಿ ನೌಕೆಯ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದ್ದಾರೆ. ಅಮೇರಿಕಾದ ನೌಕೆ ಭಾರತಕ್ಕೆ ಬರುತ್ತಿತ್ತು. ಬ್ರಿಟನ್‌ನಿನ ‘ಯುನೈಟೆಡ್ ಕಿಂಗ್ ಡಮ್ ಮೆರಿ ಟೈಮ್ ಟ್ರೇಡ್ ಆಪರೇಷನ್ಸ್‘ ಕೊಟ್ಟಿರುವ ಮಾಹಿತಿ ಪ್ರಕಾರ, ಫೆಬ್ರವರಿ ೬ ರ ರಾತ್ರಿ ಕೆಂಪು ಸಮುದ್ರದಲ್ಲಿ ಅಮೇರಿಕಾ ನೌಕೆ ‘ಸ್ಟಾರ್ ನಾಸಿಯಾ‘ ಮೇಲೆ ಹಾಗೂ ಅದೇದಿನ ಬೆಳಗ್ಗೆ ‘ಮಾರ್ನಿಂಗ್ ಟೈಡ್‘‘ ಬ್ರಿಟಿಷ್ ನೌಕೆ ಮೇಲೆ ದಾಳಿ ನಡೆಸಲಾಯಿತು. ಇದರಲ್ಲಿ ನೌಕೆಗಳಿಗೆ ಹಾನಿಯಾಗಿದೆ; ಆದರೆ ಯಾವುದೇ ಪ್ರಾಣ ಹಾನಿ ಆಗಿಲ್ಲ.

೧. ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ನೌಕೆಗಳ ಮೇಲೆ ಸತತ ದಾಳಿ ನಡೆಸುತ್ತಿದ್ದಾರೆ. ಅಮೇರಿಕಾ ಮತ್ತು ಬ್ರಿಟನ್ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಜನವರಿ ೧೧ ರಿಂದ ಅಮೇರಿಕಾವು ಯೆಮನ್ ನಲ್ಲಿ ಹೌತಿ ಬಂಡುಕೊರರ ನೆಲೆಗಳ ಮೇಲೆ ೧೦ ಬಾರಿ ಗುರಿ ಮಾಡಿದೆ.

೨. ಹೌತಿ ಬಂಡುಕೋರರ ದಾಳಿಯಿಂದಾಗಿ ಕೆಂಪು ಸಮುದ್ರದಲ್ಲಿ ಹೋಗುವ ೨ ಸಾವಿರ ವ್ಯಾಪಾರಿ ನೌಕೆಗಳು ತಮ್ಮ ಮಾರ್ಗ ಬದಲಾಯಿಸುತ್ತಿವೆ. ವಿಶ್ವದಲ್ಲಿ ಶೇಕಡಾ ೧೫ ರಷ್ಟು ಸಾಗಾಣಿಕೆ ಈ ಮಾರ್ಗದ ಮೂಲಕ ಆಗುತ್ತದೆ. ಭಾರತದ ಶೇಕಡಾ ೮೦ ರಷ್ಟು ವ್ಯಾಪಾರ ಸಮುದ್ರದ ಮೂಲಕ ನಡೆಯುತ್ತದೆ. ದೇಶಕ್ಕೆ ಬೇಕಾಗುವ ಶೇ. ೯೦ ರಷ್ಟು ಇಂಧನ ಸಮುದ್ರದ ಮೂಲಕ ಬರುತ್ತದೆ. ಸಮುದ್ರದ ಮೂಲಕ ಯಾರೇ ದಾಳಿ ಮಾಡಿದರೂ ಭಾರತದ ಮೇಲೆ ಅದರ ಪರಿಣಾಮವಾಗುತ್ತದೆ. ಇದರಿಂದ ಪೂರೈಕೆಯ ಸರಪಳಿಗೆ ಅಡ್ಡಿಯಾಗುತ್ತದೆ.