ಸೈನ್ಯದಿಂದ ನಿವೃತ್ತರಾದ ನಂತರ ಭಯೋತ್ಪಾದಕನಾದ ರಿಯಾಜನ ಬಂಧನ

ನವದೆಹಲಿ – ಭಾರತೀಯ ಸೈನ್ಯದಿಂದ ನಿವೃತ್ತಗೊಂಡ ನಂತರ ಭಯೋತ್ಪಾದಕನಾದ ರಿಯಾಜ ಅಹಮದ ರಾಥರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ರಿಯಾಜನು ಜಮ್ಮೂ-ಕಾಶ್ಮೀರದ ಕುಪವಾಡಾದ ನಿವಾಸಿಯಾಗಿದ್ದಾನೆ. ಅವನು `ಲಷ್ಕರ್-ಎ-ತೋಯಬಾ’ಗಾಗಿ ಕೆಲಸ ಮಾಡುತ್ತಿದ್ದನು. ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಸಂಗ್ರಹಿಸುವಲ್ಲಿ ಇವನು ಮಹತ್ವದ ಪಾತ್ರ ವಹಿಸಿದ್ದಾನೆ. ಇದರಲ್ಲಿ ಅವನಿಗೆ ಖುರ್ಷಿದ ಅಹಮದ ರಾಥರ ಹಾಗೂ ಗುಲಾಮ ಸರವಾರ ರಾಥರ ಸಹಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಿಯಾಜ ಹಾಗೂ ಆತನ ಮಿತ್ರ ಅಲ್ತಾಫನು ಜನವರಿ 31, 2023 ರಂದು ಭಾರತೀಯ ಸೈನ್ಯದಿಂದ ನಿವೃತ್ತರಾಗಿದ್ದರು. ರಿಯಾಜನು ಹವಾಲದಾರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು.

(ಸೌಜನ್ಯ – Republic World)

ಸಂಪಾದಕೀಯ ನಿಲುವು

ಸೈನ್ಯದಲ್ಲಿರುವಾಗ ಅವನು ಭಯೋತ್ಪಾದಕ ಸಂಘಟನೆಗೆ ಹೇಗೆ ಸಹಾಯ ಮಾಡಿದ್ದನು ? ಎಂಬುದರ ತನಿಖೆಯನ್ನೂ ನಡೆಸಬೇಕು !