ಖಾದರ ನರಕಕ್ಕೆ ಹೋಗಲಿ ! – ಧಾರ್ಮಿಕ ಮುಸ್ಲಿಂ ನಾಯಕರ ವಿರೋಧ

ಹಿಂದೂ ದೇವಾಲಯಕ್ಕೆ ತೆರಳಿ ಹರಕೆಯನ್ನು ತೀರಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ !

ಮಂಗಳೂರು – ವಿಧಾನಸಭೆ ಅಧ್ಯಕ್ಷರಾದ ಯು.ಟಿ. ಖಾದರ ಇವರು ಶ್ರೀಕ್ಷೇತ್ರ ಪಣೋಲಿಬೈಲದಲ್ಲಿ ಕಲ್ಲುರ್ಟಿ ಕಲ್ಕುಡ್ ದೇವರ ಪೂಜೆಯಲ್ಲಿ ಭಾಗವಹಿಸಿ ಹರಕೆಯನ್ನು ತೀರಿಸಿದರು. ಯು.ಟಿ. ಖಾದರ ಇವರ ಈ ಕೃತಿಯ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಅವರ ಆಕ್ಷೇಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ ಮಾಡಿದ್ದಾರೆ. ಇದರಲ್ಲಿ ಅವರು ‘ಖಾದರ್’ ಅವರು ದೇವತೆಗಳನ್ನು ಪೂಜಿಸಲಿ, ಪ್ರಸಾದ ಸ್ವೀಕರಿಸಿ ಹಣೆಗೆ ತಿಲಕವನ್ನು ಹಚ್ಚಿಕೊಂಡು ನರಕಕ್ಕೆ ಹೋಗಲಿ. ಅದು ಅವರ ವೈಯಕ್ತಿಕ ಸ್ವಾತಂತ್ರ್ಯವಾಗಿದೆ. ಅದು ಭಾರತದ ಪ್ರತಿಯೊಬ್ಬರಿಗೂ ಇರುವ ಸಂವಿಧಾನಾತ್ಮಕ ಸ್ವಾತಂತ್ರ್ಯವಾಗಿದೆ. ‘ಅದನ್ನು ತಡೆಯುವ ಹಕ್ಕು ನನಗಿಲ್ಲ’ ಎಂದು ಹೇಳಿದ್ದಾರೆ.

ಈ ಪೋಸ್ಟನಲ್ಲಿ ಫೈಝಿಯು, ‘ಯು.ಟಿ. ಖಾದರ್ ಅವರನ್ನು ಮುಸ್ಲಿಮರು ಕೇವಲ ರಾಜಕಾರಣಿಯಾಗಿ ನೋಡಬೇಕು. ಧಾರ್ಮಿಕ ಮುಖಂಡನೆಂದು ನೋಡಬಾರದು. ಧಾರ್ಮಿಕ ಮುಸ್ಲಿಂ ಮುಖಂಡರು ಇರುವ ಕಾರ್ಯಕ್ರಮದಲ್ಲಿ ಅವರನ್ನು ‘ಮುಸ್ಲಿಂ ನಾಯಕರು’ ಎಂದು ಕುಳ್ಳಿರಿಸುವುದು ಸೂಕ್ತವಲ್ಲ. ಆದ್ದರಿಂದ ಅವರ ಭೂತಾರಾಧನೆಗೆ ನಾವು ಸ್ವೀಕೃತಿ ಕೊಟ್ಟಂತೆ ಆಗಬಹುದು. ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ.’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಧಾರ್ಮಿಕ ಮುಖಂಡರ ಬಾಯಿಯಲ್ಲಿ ತಮ್ಮ ಸ್ವಧರ್ಮದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿಷಯದ ಬಗ್ಗೆ ಎಂತಹ ಮಾತುಗಳನ್ನು ಆಡುತ್ತಾರೆ ? ಇದರಿಂದ ಅವರ ಮನಸ್ಥಿತಿಯನ್ನು ಗಮನಕ್ಕೆ ಬರುತ್ತದೆ ! ಇಂತಹ ಧಾರ್ಮಿಕ ಮುಖಂಡರು ಎಂದಾದರೂ ಮುಸ್ಲಿಮರಿಗೆ ಎಲ್ಲಾ ಧರ್ಮಗಳ ಸಮಾನತೆ ಮತ್ತು ಜಾತ್ಯತೀತತೆಯ ಬಗ್ಗೆ ಕಲಿಸುತ್ತಾರೆಯೇ ? ಇದಕ್ಕೆ ವ್ಯತಿರಿಕ್ತವಾಗಿ, ಹಿಂದೂಗಳ ಮೇಲೆ ದಾಳಿ ಮಾಡುವ ಸಲುವಾಗಿಯೇ ಪ್ರಚೋದಿಸುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ !