ಚಲನಚಿತ್ರಗಳಲ್ಲಿ ಮಹಿಳೆಯರನ್ನು ‘ಐಟಂ’ಗಳಾಗಿ ತೋರಿಸಿರುವುದು ನನಗೆ ನಾಚಿಕೆ ಆಗುತ್ತದೆ !- ನಟ ಅಮೀರ್ ಖಾನ್

ನಟ ಅಮೀರ್ ಖಾನ್ ನಿಂದ ಕ್ಷಮೆಯಾಚನೆ !

ನಟ ಅಮೀರ್ ಖಾನ್

ಮುಂಬಯಿ – ಹಿಂದಿ ಚಿತ್ರಗಳನ್ನು ಅಂತಹ ಜವಾಬ್ದಾರಿಯಿಂದ ಮಾಡಲಾಗುವುದಿಲ್ಲ. ನಾವು ಸಿನೆಮಾದಲ್ಲಿ ಏನಾದರೂ ತಪ್ಪನ್ನು ತೋರಿಸಿದಾಗ, ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ತೋರಿಸಲಾಗುತ್ತದೆ. ಇದು ತಪ್ಪಾಗಿದೆ. ನಾವು ಸಿನೆಮಾಗಳಲ್ಲಿ ಮಹಿಳೆಯರನ್ನು ‘ಐಟಂ’ ಮಾಡುತ್ತೇವೆ. ‘ತೂ ಚೀಸ್ ಬಡಿ ಹೈ ಮಸ್ತ್ ಮಸ್ತ್’ ಹಾಡುಗಳಲ್ಲಿ ನಾವು ಹಾಗೆಯೇ ಮಾಡುತ್ತೇವೆ. ಇದೆಲ್ಲದರಲ್ಲೂ ನನ್ನ ಪಾಲು ಇದೆ. ನಾನು ಕೂಡ ಅಂತಹ ಸಿನೆಮಾಗಳಲ್ಲಿ ಕೆಲಸ ಮಾಡಿದ್ದೇನೆ, ಅಂತಹ ಸಿನೆಮಾಗಳನ್ನು ಮಾಡಿದ್ದೇನೆ. ‘ಖಾಂಬೆ ಜೈಸಿ ಖಡಿ ಹೈ, ಲಡಕಿ ಹೈ ಯಾ ಛಡಿ ಹೈ’ ಹಾಡಿನಲ್ಲಿ ನಾವು ಹೆಣ್ಣನ್ನು ಮನುಷ್ಯರು ಎನ್ನುವುದಿಲ್ಲ. ಇದರ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ ಎಂದು ಚಿತ್ರನಟ ಅಮೀರ್ ಖಾನ್ ಕ್ಷಮೆಯಾಚಿಸಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ಮಹಿಳೆಯರೊಂದಿಗೆ ಪುರುಷರ ವರ್ತನೆಯನ್ನು ಕಿರಣ್ ರಾವ್ ಟೀಕಿಸಿದ್ದರು. ಅವರಿಗೆ ಸಿನೆಮಾದ ನಿರ್ದೇಶಕ ಸಂದೀಪ್ ವಾಂಗಾ ರೆಡ್ಡಿ ಇವರು, ‘ನೀವು ನಿಮ್ಮ ಮಾಜಿ ಪತಿ ಅಮೀರ್ ಖಾನ್ ಅವರ ಸಿನೆಮಾಗಳನ್ನು ನೋಡಬೇಕು’ ಎಂದು ಹೇಳಿದ್ದರು. ಅದಕ್ಕಾಗಿ ವಾಂಗಾ ಅವರು ಅಮೀರ್ ಖಾನ್ ಅವರ ಚಿತ್ರಗಳನ್ನು ಪ್ರಸ್ತಾಪಿಸಿದರು. ಇದರಿಂದ ಅಮೀರ್ ಖಾನ್ ಮೇಲಿನ ಮಾತುಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಸಂಪಾದಕರ ನಿಲುವು

* ಹಿಂದಿ ಸಿನಿಮಾಗಳು ಹೆಣ್ಣನ್ನು ಉಪಭೋಗದ ವಸ್ತುವಾಗಿ ತೋರಿಸುತ್ತವೆ ಎಂಬುದು ಒಬ್ಬರಾದರೂ ಒಪ್ಪಿಕೊಂಡರು ಮತ್ತು ಈ ಬಗ್ಗೆ ನಾಚಿಕೆ ಆಗುವುದು ಇದು ಸಣ್ಣ ವಿಷಯವಲ್ಲ ! ಇದನ್ನು ತಡೆಯಲು ಅವರು ಪ್ರಯತ್ನಿಸುವ ನಿರೀಕ್ಷೆಯಿದೆ !

* ಅಮೀರ್ ಖಾನ್ ಇವರು ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಇದೇ ರೀತಿಯ ಭಾವನೆಯನ್ನು ತೋರಿಸಬೇಕು. ಅವರ ಚಿತ್ರ ‘ಪಿಕೆ’ ಹಿಂದೂ ದೇವರುಗಳ ಅಶ್ಲೀಲವಾಗಿ ವಿಡಂಬನೆ ಮಾಡಲಾಗಿತ್ತು. ಅದಕ್ಕೂ ಅವರು ಕ್ಷಮೆ ಕೇಳಬೇಕು !