ಅಸ್ಸಾಂನಲ್ಲಿ ‘ಮಾ ಕಾಮಾಖ್ಯ ಕಾರಿಡಾರ್‘ ನಿರ್ಮಾಣ, ಪ್ರಧಾನಿಯಿಂದ ಅಡಿಪಾಯ !

೪೯೮ ಕೋಟಿ ರೂಪಾಯಿ ಖರ್ಚಾಗುವ ನಿರೀಕ್ಷೆ !

(ಕಾರಿಡಾರ್ ಅಂದರೆ ವಿಶಾಲ ಮತ್ತು ಸುಸಜ್ಜಿತ ಮಾರ್ಗ)

ಗೌಹಾಟಿ (ಅಸ್ಸಾಂ) – ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ ಕಾರಿಡಾರ್ ಮತ್ತು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಂತರ ಈಗ ಗೌಹಾಟಿಯಲ್ಲಿ ‘ಮಾ ಕಾಮಾಖ್ಯ ಕಾರಿಡಾರ್‘ ನ ನಿರ್ಮಾಣ ಮಾಡಲಾಗುವುದು. ಇಲ್ಲಿನ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಮಾ ಕಾಮಾಖ್ಯ ಮಂದಿರ ಕಾರಿಡಾರ್ ಸೇರಿದಂತೆ ಅಸ್ಸಾಂನಲ್ಲಿ ೧೧೦೦೦ ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರಿಡಾರ್ ಅನ್ನು ೪೯೮ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ತಮ್ಮ ಮೂಲವನ್ನು ನಾಶಪಡಿಸಿ ಮತ್ತು ಭೂತಕಾಲವನ್ನು ಮರೆತು ಯಾರೂ ಯಶಸ್ವಿಯಾಗುವುದಿಲ್ಲ ! – ಪ್ರಧಾನಮಂತ್ರಿ

ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕೆಲವು ಜನರು ತಮ್ಮ ಸಂಸ್ಕ್ರತಿಯ ಬಗ್ಗೆ ನಾಚಿಕೆ ಪಡುತ್ತಾರೆ. ತಮ್ಮ ಮೂಲಗಳನ್ನು ನಾಶಪಡಿಸಿ ಮತ್ತು ಭೂತಕಾಲವನ್ನು ಮರೆತು ಯಾರೂ ಯಶಸ್ವಿಯಾಗುವುದಿಲ್ಲ. ನಮ್ಮ ತೀರ್ಥಕ್ಷೇತ್ರಗಳು, ನಮ್ಮ ದೇವಾಲಯಗಳು, ನಮ್ಮ ಶ್ರದ್ಧಾಸ್ಥಾನಗಳು, ಇವು ಕೇವಲ ಭೇಟಿನೀಡುವ ಸ್ಥಳಗಳಲ್ಲ. ಇವು ನಮ್ಮ ಸಂಸ್ಕ್ರತಿಯ ಸಾವಿರಾರು ವರ್ಷಗಳ ಪ್ರಯಾಣದ ಗುರುತುಗಳಾಗಿವೆ.

ಗೌಹಾಟಿಯಲ್ಲಿನ ನೀಲಾಂಚಲ ಪರ್ವತದಲ್ಲಿರುವ ದೇವಾಲಯಗಳನ್ನು ಯೋಜನೆಯಲ್ಲಿ ಸೇರ್ಪಡೆ !

ದೇವಿಯ ಮಂದಿರಗಳು : ಮಾತಂಗಿ, ಕಮಲಾ, ತ್ರಿಪುರಸುಂದರಿ, ಕಾಳಿ, ತಾರಾ, ಭುವನೇಶ್ವರಿ, ಬಗಲಾಮುಖಿ, ಛಿನ್ನಮಾಸ್ತಿಕಾ, ಭೈರವಿ, ಧೂಮಾವತಿ ದೇವಿ ಮತ್ತು ದಶಮಹಾವಿದ್ಯಾ(ದೇವಿಯ ಹತ್ತು ಅವತಾರಗಳು)

ಶಿವನ ೫ ಮಂದಿರಗಳು : ಕಾಮೇಶ್ವರ, ಸಿದ್ದೇಶ್ವರ, ಕೇದಾರೇಶ್ವರ, ಅಮರಟೋಕೇಶ್ವರ, ಅಘೋರ ಮತ್ತು ಕೋಟಿಲಿಂಗ ಮಂದಿರಗಳು.