ನಾಥೂರಾಮ ಗೋಡ್ಸೆಯನ್ನು ಬೆಂಬಲಿಸುವ ಪ್ರಾಧ್ಯಾಪಕಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು !

ಕೇರಳದಲ್ಲಿ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯ ದೂರಿನ ನಂತರ ಕ್ರಮ !

ಕೊಚ್ಚಿ – ನಥುರಾಮ ಗೋಡ್ಸೆಯನ್ನು ಬೆಂಬಲಿಸುವ ಕೋಳಿಕೋಡಿನ ಪ್ರಾ. ಶೈಜಾ ಅಂದವನ ಇವರ ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ ಅವರ ವಿರುದ್ಧ ದೂರು ನೀಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಧ್ಯಾಪಕಿ ಅಂದವನ ಇವರು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಕ್ಯಾಲಿಕಟ್’ ನಲ್ಲಿ ಹಿರಿಯ ಪ್ರಾಧ್ಯಾಪಕಿ ಎಂದು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಅಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಲಿಸುತ್ತಾರೆ. ಜನವರಿ 30 ರಂದು ಅವರು ಮಹಾತ್ಮಾ ಗಾಂಧಿಗೆ ಸಂಬಂಧಿಸಿದ ಪೋಸ್ಟ ಪ್ರಸಾರ ಮಾಡಿದ್ದರು. ಅದರಲ್ಲಿ ಅವರು, ‘ನಥುರಾಮ ಗೋಡ್ಸೆ ಭಾರತದ ಅನೇಕ ಜನರ ನಾಯಕರಾಗಿದ್ದಾರೆ ಭಾರತವನ್ನು ರಕ್ಷಿಸಿರುವ ಬಗ್ಗೆ ಗೋಡ್ಸೆಯವರ ಬಗ್ಗೆ ಹೆಮ್ಮೆಯಿದೆ’, ಎಂದು ಬರೆದಿದ್ದರು. ಹಾಗೆಯೇ ನಥೂರಾಮ ಗೋಡಸೆಯವರನ್ನು ಬೆಂಬಲಿಸಿದ್ದರು. ಅವರ ಈ ಪೋಸ್ಟ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿತ್ತು.

ಪ್ರಾಧ್ಯಾಪಕಿ ಅಂದವನ ಇವರನ್ನು ಅಮಾನತ್ತುಗೊಳಿಸುವಂತೆ ಆಗ್ರಹ !

ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣ ರಾಜ ಅವರು ನಥುರಾಮ ಗೋಡ್ಸೆಯವರ ವಿಷಯದಲ್ಲಿ ಪೋಸ್ಟ್ ಪ್ರಸಾರ ಮಾಡಿದ್ದರು. ಅದರಲ್ಲಿ ಅವರು ತಮ್ಮ ವಿಚಾರವನ್ನು ವ್ಯಕ್ತಪಡಿಸುವಾಗ ಪ್ರಾಧ್ಯಾಪಕಿ ಅಂದವನ ಇವರು ಪೋಸ್ಟ ಪ್ರಸಾರ ಮಾಡಿದ್ದರು. ಸಾಮಾಜಿಕ ಮಾಧ್ಯಮದ ಮೇಲಿನಿಂದ ಅವರ ಮೇಲೆ ಟೀಕೆಗಳಾಗತೊಡಗಿದ ಬಳಿಕ ಪ್ರಾಧ್ಯಾಪಕಿ ಅಂದವನ ಇವರು ಪೋಸ್ಟ ತೆಗೆದು ಹಾಕಿದ್ದರು. ಆದರೂ ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆ ಅವರ ವಿರುದ್ಧ ದೂರು ನೀಡಿದಾಗ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಎನ್‌ಐಟಿಯಿಂದ ಅಮಾನತ್ತುಗೊಳಿಸುವಂತೆ ಈ ಸಂಘಟನೆ ಬೇಡಿಕೆ ಮಾಡಿದೆ. ಕೋಳಿಕೋಡ ನಲ್ಲಿನ ಕಾಂಗ್ರೆಸ್ ಸಂಸದ ಎಂ.ಕೆ. ರಾಘವನ್ ಅವರು ಎನ್‌ಐಟಿ ನಿರ್ದೇಶಕರಿಗೆ ಪತ್ರ ಬರೆದು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗೋಡ್ಸೆ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿಲ್ಲ ! – ಪ್ರಾ. ಅಂದವನ

ನನಗೆ ಗಾಂಧಿಯವರ ಹತ್ಯೆಯನ್ನು ವೈಭವೀಕರಿಸುವುದು ಇರಲಿಲ್ಲ. ಗೋಡ್ಸೆಯವರ ‘ನಾನು ಗಾಂಧಿಯನ್ನು ಏಕೆ ಹತ್ಯೆ ಮಾಡಿದೆ?’ ಈ ಪುಸ್ತಕವನ್ನು ಓದಿದ್ದೇನೆ. ಈ ಪುಸ್ತಕದಲ್ಲಿ ಅನೇಕ ಬಹಿರಂಗಪಡಿಸುವ ಮಾಹಿತಿಗಳಿವೆ. ಇದು ಸಾಮಾನ್ಯ ಜನರಿಗೆ ತಿಳಿದಿಲ್ಲ. ಈ ಸಂದರ್ಭದಲ್ಲಿ ಫೇಸಬುಕ್ ಮೇಲಿನ ಒಂದು ಪೋಸ್ಟ ಬಗ್ಗೆ ನಾನು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದೆನು. ಜನರು ನನ್ನ ಟಿಪ್ಪಣಿಗೆ ತಪ್ಪು ಅರ್ಥವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ನೋಡಿದಾಗ, ನಾನು ಪೋಸ್ಟ್ ಅನ್ನು ತೆಗೆದುಹಾಕಿದೆ ಎಂದು ಹೇಳಿದರು.

ಎನ್‌ಐಟಿಯಲ್ಲಿ ದ್ವೇಷಪೂರಿತ ಕ್ರಮ !

ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮ ನಡೆಯಿತು. ಅದರ ವಿರುದ್ಧ ಕಮ್ಯುನಿಸ್ಟ್ ಸಂಘಟನೆಯ ವಿದ್ಯಾರ್ಥಿಗಳು ‘ಎನ್‌.ಐ.ಟಿ.’ ಪ್ರದೇಶದಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ವಿವಾದ ನಿರ್ಮಾಣವಾಗಿತ್ತು.

ಸಂಪಾದಕೀಯ ನಿಲುವು

ಕಮ್ಯುನಿಸ್ಟ್ ಅಧಿಕಾರದಲ್ಲಿರುವ ಕೇರಳದಲ್ಲಿ ಪೊಲೀಸರು ಇದು ಬಿಟ್ಟರೆ ಇನ್ನೇನು ಮಾಡಬಲ್ಲರು ?

ಬೇರೆ ಸಮಯದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಡಂಗುರ ಬಾರಿಸುವವರು, ಇಂತಹ ಸಮಯದಲ್ಲಿ ಯಾವ ಬಿಲದಲ್ಲಿ ಹೋಗಿ ಅಡಗಿ ಕುಳಿತಿದ್ದಾರೆ ?