ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವ ಬಗ್ಗೆ ಮೌಲಾನಾ ತೌಕೀರ್ ರಝಾ ಇವರ ದುರಹಂಕಾರ !
ನವ ದೆಹಲಿ – ಎಲ್ಲಾ ಮುಸ್ಲಿಮರು ತಮ್ಮ ದೇಶವನ್ನು ಪ್ರೀತಿಸುತ್ತಾರೆ. ದೇಶಪ್ರೇಮದಿಂದ ಮುಸ್ಲಿಮರು ತಾಳ್ಮೆಯಿಂದ ಇದ್ದಾರೆ. ಒಂದು ವೇಳೆ ನಮ್ಮ ಯುವಕರು ನಿಯಂತ್ರಣ ಹೊರಗೆ ಬಂದರೆ, ಭಾರತದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುತ್ತದೆ. ಅವರು ಯಾರಿಗೂ ಹೆದರುವುದಿಲ್ಲ. ಒಳ್ಳೆಯ ಕೆಲಸ ಮಾಡಿದವರಿಗೆ ಭಾರತ ರತ್ನ ನೀಡಲಾಗುತ್ತಿದೆ; ಆದರೆ ಅಡ್ವಾಣಿ ಅವರು ಯಾವುದೇ ಒಳ್ಳೆಯ ಕೆಲಸ ಮಾಡಿಲ್ಲ ಎಂದು ‘ಇತ್ತೆಹಾದ್ ಮಿಲ್ಲತ್ ಕೌನ್ಸಿಲ್’ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ವಿಷ ಕಾರಿದ್ದಾರೆ. ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವುದರಿಂದ, ಆ ಪ್ರಶಸ್ತಿಗೆ ಮಾಡಿದ ಘೋರ ಅವಮಾನವಾಗಿದೆ. ಭಾಜಪದ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸುವ ಹಿನ್ನೆಲೆಯಲ್ಲಿ ಅವರು ಮೇಲಿನ ಹೇಳಿಕೆಗಳನ್ನು ನೀಡಿದ್ದಾರೆ.
Maulana Tauqeer Raza’s threat after declaring Bharat Ratna to Lal Krishna Advani.
‘If Mu$l!m youths go out of control, there will be an atmosphere of war in the Country’.
👉 Since an alarming number of youths are already out of control, we have problems like Love J!h@d, J!h@d!… pic.twitter.com/okPETNq5qd
— Sanatan Prabhat (@SanatanPrabhat) February 4, 2024
ರಾಝಾ ಮಾತನ್ನು ಮುಂದುವರೆಸಿ,
1. ಭಾರತದಲ್ಲಿ ದ್ವೇಷ, ಅಪ್ರಾಮಾಣಿಕತೆ, ಅನ್ಯಾಯ ಮತ್ತು ನಿರುದ್ಯೋಗ ಹೆಚ್ಚಾಗಿದೆ. ಇದಕ್ಕೆ ಅಡ್ವಾಣಿ ಜವಾಬ್ದಾರರಾಗಿದ್ದಾರೆ.
2. ಮುಸಲ್ಮಾನರಿಗೆ ದೇಶದಲ್ಲಿ ಮತಾಂಧತೆ ಮತ್ತು ಯುದ್ಧದ ವಾತಾವರಣ ಬೇಕಾಗಿಲ್ಲ. ಮಸೀದಿಗಳನ್ನು ಕೆಡವಬೇಕು, ಮುಸ್ಲಿಮರನ್ನು ಕೊಲ್ಲಬೇಕು, ಅವರನ್ನು ಅವಮಾನಿಸಬೇಕು, ಅವರ ಹೆಣ್ಣುಮಕ್ಕಳ ದಾರಿ ತಪ್ಪಿಸಬೇಕು ಇದು ನಮಗೆ ಅಪೇಕ್ಷಿತವಿಲ್ಲ.
ಸರಕಾರ ದ್ವೇಷದ ಆಧಾರದ ಮೇಲೆ ರಾಜಕೀಯ ಮಾಡಲು ಬಯಸುತ್ತದೆ ! – ಜಮಾತ್-ಎ-ಇಸ್ಲಾಮಿ ಹಿಂದ
`ಜಮಾತೆ ಇಸ್ಲಾಮಿ ಹಿಂದ’ನ ಕಾರ್ಯದರ್ಶಿ ಮಲಿಕ ಮೊಹತಸೀಮ ಖಾನ ಇವರೂ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ್ದಾರೆ. ಅವರು ಮಾತನಾಡಿ, ಈಗಿನ ಸರಕಾರದಿಂದ ಬಾಬ್ರಿ ಮಸೀದಿ ಧ್ವಂಸ ಮಾಡಿರುವ ಜನರನ್ನೇ ಗೌರವಿಸುತ್ತದೆ ಎಂದು ನಿರೀಕ್ಷಿಸಬಹುದು. ಕೇಂದ್ರ ಸರಕಾರ ದ್ವೇಷದ ಆಧಾರದಲ್ಲಿ ರಾಜಕೀಯ ಮಾಡಲು ಬಯಸುತ್ತಿದೆ. ಯಾರಿಗೆ ಶಾಂತಿ ಬೇಡವಾಗಿದೆಯೋ, ಅಂತಹವರಿಗೆ ಈಗಿನ ಸರಕಾರ ಬಹುಮಾನ ನೀಡುತ್ತದೆ. ಸದ್ಯದ ಸರಕಾರ ಕಾನೂನು ಪ್ರಕಾರ ಕೆಲಸ ಮಾಡುತ್ತಿದೆಯೇ, ಎಂದು ದೇಶದ ಜನತೆ ವಿಚಾರ ಮಾಡಬೇಕು.
ಸಂಪಾದಕೀಯ ನಿಲುವುಭಾರತದಲ್ಲಿ ಅನೇಕ ಯುವಕರು ನಿಯಂತ್ರಣದ ಹೊರಗೆ ಇರುವುದರಿಂದಲೇ ಇಂದು ಲವ್ ಜಿಹಾದ, ಜಿಹಾದಿ ಭಯೋತ್ಪಾದಕತೆ, ಗೋಹತ್ಯೆ ಮುತಾಂದ ಸಮಸ್ಯೆಗಳು ಬಾಯಿ ತೆರೆದು ನಿಂತಿವೆ. ಇಂತಹುದರಲ್ಲಿ ಅದಕ್ಕೆ ಸೊಪ್ಪು ಹಾಕಲು ಉತ್ತರಪ್ರದೇಶ, ಉತ್ತರಾಖಂಡ, ಆಸ್ಸಾಂ ಮುಂತಾದ ರಾಜ್ಯಗಳಲ್ಲಿ ಆಡಳಿತ ಕಾರ್ಯನಿರತವಾಗಿರುವುದರಿಂದಲೇ ಇಂತಹ ದರ್ಪದ ಮಾತು ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಅಂಶವನ್ನು ವಿರೋಧಿಸುವುದರಲ್ಲಿ ತಪ್ಪಿಲ್ಲ; ಆದರೆ ದೇಶದ ಅಖಂಡತೆಗೆ ಸವಾಲೆಸೆಯುವ ಇಂತಹ ಮೌಲ್ವಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ! ಭಾರತದಲ್ಲಿರುವ ಮುಸ್ಲಿಮರು ಭಯಭೀತರಾಗಿದ್ದಾರೆ ಎನ್ನುವ ರೀತಿಯಲ್ಲಿ ಭಾರತದ ಪ್ರತಿಷ್ಠೆಯನ್ನು ಮಲಿನಗೊಳಿಸುವ ಬಿಬಿಸಿ, ನ್ಯೂಯಾರ್ಕ್ ಟೈಮ್ಸಗಳಂತಹ ಭಾರತದ್ವೇಷಿ ವಿದೇಶಿ ಪ್ರಸಾರಮಾಧ್ಯಮಗಳಿಗೆ ಈಗ ಈ ಸುದ್ದಿಗಳ ಕುರಿತು ಭಾರತವು ಪ್ರಶ್ನಿಸುವುದು ಆವಶ್ಯಕವಿದೆ ! |