ಶುಕ್ರವಾರ ನಮಾಜ್ ಪಠಣಗಾಗಿ ಜ್ಞಾನವಾಪಿಯಲ್ಲಿ ಮುಸ್ಲಿಮರಿಂದ ಶಕ್ತಿ ಪ್ರದರ್ಶನ !

ಹಿಂದೂಗಳಿಗೆ ವ್ಯಾಸ ನೆಲಮಾಳಿಗೆಯಲ್ಲಿ ಪೂಜೆ ಮಾಡುವ ಅಧಿಕಾರ ಸಿಕ್ಕಿದ್ದರಿಂದ ನಿಷೇಧ !

ಒಟ್ಟು 2 ಸಾವಿರದ 247 ಮುಸ್ಲಿಮರು ಒಟ್ಟಾದರು

ವಾರಣಾಸಿ (ಉತ್ತರ ಪ್ರದೇಶ) – ಫೆಬ್ರವರಿ 2 ರ ಶುಕ್ರವಾರದ ಪ್ರಾರ್ಥನೆಗಾಗಿ ಮೊದಲ ಬಾರಿಗೆ 2 ಸಾವಿರದ 247 ಮುಸ್ಲಿಮರು ಜ್ಞಾನವಾಪಿಗೆ ತಲುಪಿದರು. ‘ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ’ಯ ಕರೆಯ ಮೇರೆಗೆ ವ್ಯಾಸಜಿ ಅವರ ನೆಲಮಾಳಿಗೆಯಲ್ಲಿ ಪ್ರಾರ್ಥನೆಗೆ ಅವಕಾಶಕೊಟ್ಟಿರುವುದನ್ನು ವಿರೋಧಿಸಿ ಅವರು ನಮಾಜ್‌ಗಾಗಿ ಜ್ಞಾನವಾಪಿಗೆ ಬಂದಿದ್ದರು. ಇಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ, ಪೊಲೀಸರು ಮುಸ್ಲಿಮರಿಗೆ ಹಿಂತಿರುಗಿ ಹೋಗಲು ಅಥವಾ ಹತ್ತಿರದ ಮಸೀದಿಗಳಿಗೆ ಹೋಗುವಂತೆ ಮನವಿ ಮಾಡಿದರು. ಈ ವೇಳೆ ದಲ್ಮಂಡಿಯಲ್ಲಿ ಘೋಷಣೆಗಳನ್ನು ಕೂಗುವ ಮೂಲಕ ನೆರೆದಿದ್ದವರು ಬಿಗುವಿನ ವಾತಾವರಣವನ್ನು ನಿರ್ಮಿಸಲು ಯತ್ನಿಸಿದರು.

ಶಕ್ತಿ ಪ್ರದರ್ಶನ ಯಾವಾಗ ಯಾವಾಗ ನಡೆಯಿತು?

ಅಕ್ಟೋಬರ್ 25, 2018 : ಜ್ಞಾನವಾಪಿಯಲ್ಲಿ ವಕ್ಫ್ ಬೋರ್ಡ್‌ನ ಗೋಡೆಯನ್ನು ಕೆಡವಿರುವುದನ್ನು ವಿರೋಧಿಸಿ 2 ಸಾವಿರದ 100 ಮುಸ್ಲಿಮರು ಮರುದಿನ ಶುಕ್ರವಾರದ ನಮಾಜ್‌ಗಾಗಿ ಜ್ಞಾನವಾಪಿಗೆ ತಲುಪಿದ್ದರು.

ಮೇ 6, 2022 : ಜ್ಞಾನವಾಪಿಯವರ ಸಮೀಕ್ಷೆಯಲ್ಲಿ 2 ಸಾವಿರ ಮುಸ್ಲಿಮರು ನಮಾಜ್ ಮಾಡಿದ್ದರು.

ಮತಾಂಧರ !

ಈ ಸಂದರ್ಭದಲ್ಲಿ ಮುಫ್ತಿ ಅಬ್ದುಲ್ ಬಾತಿನ್ ನೊಮಾನಿ ಅವರು ಭಕ್ತಾದಿಗಳನ್ನು ಧಾರ್ಮಿಕರಾಗುವಂತೆ ಹೇಳಿದರು. ಅವರು ಜ್ಞಾನವಾಪಿಯಲ್ಲಿ ಶುಕ್ರವಾರ ನಮಾಝ್‌ನ ಮೊದಲು ಮಾಡಿದ ಭಾಷಣದಲ್ಲಿ ಮಸೀದಿ ಮತ್ತು ವ್ಯಾಸಜಿಯ ನೆಲಮಾಳಿಗೆಯ ವಾಸ್ತವತೆಯ ಬಗ್ಗೆ ಅರಿವು ಮೂಡಿಸಿದರು. ಅವರು, ಯಾವುದೇ ಸಂದರ್ಭದಲ್ಲೂ ನಗರದ ಶಾಂತಿ ಕದಡಬಾರದು ಎಂದರು. ನಮಾಜ್ ಮುಗಿಸಿ ನೇರವಾಗಿ ಮನೆಗೆ ಹೋಗಿ ! ನಮ್ಮ ದೇಶ ಪ್ರಜಾಪ್ರಭುತ್ವವನ್ನು ಆಧರಿಸಿದೆ. ಇದು ನಾಲ್ಕು ಕಂಬಗಳನ್ನು ಹೊಂದಿದೆ. ಆಧಾರಸ್ತಂಭ ಪ್ರಸಾರ ಮಾಧ್ಯಮ ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿಲ್ಲ. (ಒಂದೆಡೆ ಇಂತಜಾಮಿಯಾ ಮಸೀದಿ ಸಮಿತಿಯು ಮುಸ್ಲಿಮರನ್ನು ನಮಾಜ್ ಮಾಡಲು ಕರೆದರೆ ಮತ್ತೊಂದೆಡೆ ಮುಫ್ತಿ ಮುಗ್ಧರಂತೆ ನಟಿಸುತ್ತಿದ್ದಾರೆ ! – ಸಂಪಾದಕರು)

ಸಂಪಾದಕರ ನಿಲುವು

* ಹಿಂದೂ-ಮುಸ್ಲಿಂ ಏಕತೆಗಾಗಿ ಸದಾ ಹಿಂದೂಗಳಿಗೆ ಉಪದೇಶ ಮಾಡುವವರು ವಾರಣಾಸಿಯಲ್ಲಿ ಮುಸ್ಲಿಮರಿಗೆ ಚಕಾರವನ್ನೂ ಎತ್ತುವುದಿಲ್ಲ ಎಂದು ತಿಳಿಯಿರಿ !