ಉತ್ತರಾಖಂಡ ಸರಕಾರದಿಂದ ಸಮಾನ ನಾಗರಿಕ ಕಾನೂನಿನ ಕರಡು ಮಂಡನೆ !

ಇಂದು ಸಚಿವಸಂಪುಟ ಸಭೆಯಲ್ಲಿ ಚರ್ಚೆ

ಡೆಹರಾಡೂನ್ (ಉತ್ತರಾಖಂಡ) – ಸಮಾನ ನಾಗರಿಕ ಕಾನೂನಿಗಾಗಿ ಉತ್ತರಾಖಂಡ ಸರಕಾರವು ರಚಿಸಿರುವ ತಜ್ಞರ ಸಮಿತಿಯು ಕಾಯಿದೆಯ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ. ಸಮಿತಿಯ ಅಧ್ಯಕ್ಷ ರಂಜನಾ ಪ್ರಕಾಶ ದೇಸಾಯಿ ಅವರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂತಿಮ ಕರಡು ಪ್ರತಿಯನ್ನು ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಅವರಿಗೆ ಸಲ್ಲಿಸಿದರು. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಧಾಮಿ ಮಾತನಾಡಿ, ನಾವು ಬಹಳದಿನಗಳಿಂದ ಕರಡು ಪ್ರತಿಗಾಗಿ ಕಾಯುತ್ತಿದ್ದೇವೆ. ಈಗ ಸಮಿತಿಯ ವರದಿಯ ನಂತರ ನಾವು ಮುಂದುವರೆಯುತ್ತೇವೆ. ಎಲ್ಲಾ ಔಪಚಾರಿಕತೆಗಳನ್ನು ಪೂರೈಸಿದನಂತರ ನಾವು ಅದನ್ನು ವಿಧಾನಸಭೆಯಲ್ಲಿ ಮಂಡಿಸುತ್ತೇವೆ ಎಂದರು.

ಫೆಬ್ರವರಿ ೫ ರಂದು ವಿಶೇಷ ಅಧಿವೇಶನ !

ನಾಳೆ, ಫೆಬ್ರವರಿ ೩ ರಂದು ನಡೆಯುವ ಸಚಿವಸಂಪುಟದ ಸಭೆಯಲ್ಲಿ ಕರಡುಪ್ರತಿ ಮಂಡಿಸಲಾಗುವುದು. ಸಚಿವಸಂಪುಟ ಸಮಿತಿ ಒಪ್ಪಿಗೆ ನೀಡಿದ ನಂತರ ಅದನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಇದಕ್ಕಾಗಿ ಫೆಬ್ರವರಿ ೫ ರಿಂದ ಸದನದ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.