ಮಂಡ್ಯದಲ್ಲಿ ಹನುಮಂತನ ಧ್ವಜ ಹಾರಿಸಿದ ನೌಕರನನ್ನು ಅಮಾನತುಗೊಳಿಸಿದ ಜಿಲ್ಲಾ ಪಂಚಾಯತ್ ಅಧಿಕಾರಿ ಶೇಖ್ ತನ್ವೀರ್ !

ಮಂಡ್ಯ – ಮಂಡ್ಯದಲ್ಲಿ ಹಾರಿಸಲಾಗಿರುವ 108 ಅಡಿ ಎತ್ತರದ ಹನುಮಂತನ ಧ್ವಜವನ್ನು ತೆರವು ಮಾಡುವಂತೆ ಹಿಂದೂ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕೆರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ಜನವರಿ 30, 2024 ರಂದು ಈ ಅಮಾನತು ಆದೇಶ ಹೊರಡಿಸಿದ್ದಾರೆ.

(ಸೌಜನ್ಯ – Tv9 Kannada)

ಕೆರಗೋಡು ಗ್ರಾಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶ ನೀಡಲಾಗಿತ್ತು; ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತನ ಧ್ವಜ ಹಾರಿಸಲು ಜನರಿಗೆ ಅವಕಾಶ ನೀಡಿದ್ದು, ಅದನ್ನು ತೆಗೆದುಹಾಕಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶೇಖ್ ತನ್ವೀರ್ ಆಸಿಫ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

1. ಜನವರಿ 28, 2024 ರಂದು, 108 ಅಡಿ ಎತ್ತರದ ಕಂಬದಿಂದ ಹನುಮಂತನ ಧ್ವಜವನ್ನು ಕೆಳಗಿಳಿಸುವ ವಿಷಯದಿಂದಾಗಿ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಹನುಮಂತನ ಧ್ವಜ ತೆರವು ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಎಲ್ಲೆಂದರಲ್ಲಿ ಟಿಪ್ಪು ಸುಲ್ತಾನರ ಭಿತ್ತಿಪತ್ರಗಳು ಕಾಣುವ ರಾಜ್ಯದಲ್ಲಿ ಹನುಮಾನ್ ಧ್ವಜ ಹಾರಿಸಿದರೆ ಏನು ತೊಂದರೆ?’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರಕಾರದ ಜಾತ್ಯತೀತತೆಯ ಬಗ್ಗೆಯೂ ಬಿಜೆಪಿ ಪ್ರಶ್ನೆಗಳನ್ನು ಎತ್ತಿತ್ತು.

2. ಹನುಮಂತನ ಧ್ವಜ ತೆಗೆಯಲಾಗುತ್ತದೆ ಎಂದು ತಿಳಿದ ತಕ್ಷಣ ಗ್ರಾಮದ ಜನರು ಅಲ್ಲಿ ಜಮಾಯಿಸಿದರು. ಅವರನ್ನು ತೆಗೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿ ನಂತರ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಹನುಮಾನ್ ಧ್ವಜವನ್ನು ತೆಗೆದು ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ಈ ವೇಳೆ ನೆರೆದಿದ್ದವರು ಕೇಸರಿ ಧ್ವಜಗಳನ್ನು ಹಾರಿಸಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದರು.

3. ಹನುಮಂತನ ಧ್ವಜ ತೆರವು ಮಾಡಿರುವುದನ್ನು ವಿರೋಧಿಸಿ ಕೆರಗೋಡಿನಿಂದ ಮಂಡ್ಯ ಜಿಲ್ಲಾಸ್ಪತ್ರೆವರೆಗೆ ಮೆರವಣಿಗೆ ನಡೆಸಿದರು.