ಮಹಾರಾಣಾ ಪ್ರತಾಪ ಸೇನೆ ರಾಜಸ್ಥಾನದ ಮುಖ್ಯಮಂತ್ರಿಗಳಲ್ಲಿ ಬೇಡಿಕೆ !
ಅಜಮೇರ (ರಾಜಸ್ಥಾನ) – ಇಲ್ಲಿಯ ಮೊಯಿನುದ್ದೀನ್ ಚಿಸ್ತಿ ದರ್ಗಾ ಪೂರ್ವ ಹಿಂದೂ ದೇವಾಲಯವಾಗಿತ್ತು. ಈ ದರ್ಗಾ ಹಿಂದೂ ಮಂದಿರವನ್ನು ಕೆಡವಿ ನಿರ್ಮಿಸಲಾಗಿದೆ.ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಮೀಕ್ಷೆ ನಡೆಸುವುದು ಬಹಳ ಮುಖ್ಯವಾಗಿದೆ. ಇದರಿಂದ ಎಲ್ಲವೂ ಬಹಿರಂಗವಾಗುತ್ತದೆ. ಈ ಸಮೀಕ್ಷೆಯ ಸಲುವಾಗಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೂ ಕೋರಿದ್ದೆವು ಮತ್ತು ಈಗಿನ ಮುಖ್ಯಮಂತ್ರಿ ಭಜನಲಾಲ ಶರ್ಮಾ ಅವರಿಗೂ ಅದೇ ಬೇಡಿಕೆಯನ್ನು ಮಾಡಿದ್ದೇವೆ ಎಂದು ಮಹಾರಾಣಾ ಪ್ರತಾಪ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜವರ್ಧನ ಸಿಂಗ ಪರಮಾರ ಹೇಳಿದರು. ಅವರು ವಿಚಾರಣೆ ಮಾಡುವ ಪತ್ರವನ್ನುಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿದ್ದೇವೆ.
(ಸೌಜನ್ಯ – F3 News)
ರಾಜವರ್ಧನ ಸಿಂಗ ಪರಮಾರ ಮಾತನಾಡಿ, ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಆಯೋಜಿಸಿರುವ ‘ಜನ ಜಾಗರಣ ಯಾತ್ರೆ’ಯಲ್ಲಿ ಅನೇಕ ಜನರು ಈ ಬೇಡಿಕೆಗೆ ಬೆಂಬಲ ನೀಡಿದ್ದಾರೆ. ಅಯೋಧ್ಯೆಯ ಬಾಬರಿ, ವಾರಣಾಸಿಯ ಜ್ಞಾನವಾಪಿ ಮಸೀದಿಯಂತೆ ಅಜ್ಮೀರ್ ದರ್ಗಾದ ಬಗ್ಗೆಯೂ ತನಿಖೆ ನಡೆಸಿ ಅಗತ್ಯ ಸೂಚನೆಯನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.
ಸಂಪಾದಕೀಯ ನಿಲುವುಮುಸ್ಲಿಂ ಆಕ್ರಮಣಕಾರರು ಭಾರತದ ಸಾವಿರಾರು ಮಂದಿರಗಳನ್ನು ಕೆಡವಿ ಅಲ್ಲಿ ಮಸೀದಿಗಳು ಅಥವಾ ದರ್ಗಾಗಳನ್ನು ನಿರ್ಮಿಸಿದರು. ಈ ಮಂದಿರಗಳನ್ನು ಮರಳಿ ಪಡೆಯಲು ಹಿಂದೂಗಳು ಕಾನೂನು ಮೂಲಕ ಪ್ರಯತ್ನಿಸುತ್ತಿದ್ದಾರೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಈಗ ಕೇಂದ್ರದ ಭಾಜಪ ಸರಕಾರವು ಈ ಮಂದಿರಗಳನ್ನು ಮರಳಿ ಹಿಂದೂಗಳಿಗೆ ಪಡೆಯಲು ಕಾನೂನು ರೂಪಿಸಬೇಕು. |