ಬೆಂಗಳೂರು – ಶ್ರೀರಾಮ ಮಂದಿರದಲ್ಲಿನ ಶ್ರೀರಾಮಲಲ್ಲಾನ ಮೂರ್ತಿಗಾಗಿ ಉಪಯೋಗಿಸಿರುವ ಕಲ್ಲು ಯಾವ ವ್ಯಕ್ತಿ ನೀಡಿದ್ದರು, ಅವರಿಗೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದಿಂದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ೮೦ ಸಾವಿರ ರೂಪಾಯಿ ದಂಡ ವಿಧಿಸಿದೆ. ಶ್ರೀನಿವಾಸ ನಟರಾಜ ಎಂದು ಅವರ ಹೆಸರಾಗಿದ್ದು ಅವರು ಗಣಿಗಾರಿಕೆಯ ಕಾಂಟ್ರಾಕ್ಟ್ ಪಡೆದಿದ್ದರು. ಸರಕಾರವು ವಿಧಿಸಿರುವ ದಂಡ ಪಾವತಿಸಲು ನಟರಾಜ ಇವರು ಅವರ ಪತ್ನಿಯ ಆಭರಣಗಳನ್ನು ಕೂಡ ಒತ್ತೆ ಇಟ್ಟಿದ್ದಾರೆ.
೧. ನಟರಾಜ ಹಾರೋಹಳ್ಳಿ ಗುಜ್ಜೆ ಗೌಡನಪುರ ಗ್ರಾಮದವರಾಗಿದ್ದು ಅವರು ರಾಮದಾಸ ಎಂಬ ರೈತನ ಹೊಲದಲ್ಲಿನ ಬಂಡೆ ತೆಗೆಯುವ ಕಾಂಟ್ರಾಕ್ಟ್ ಪಡೆದಿದ್ದರು. ಈ ಭೂಮಿಯ ಒಂದು ದೊಡ್ಡ ಬಂಡೆ ನಟರಾಜ ಇವರು ೩ ಭಾಗವಾಗಿ ವಿಂಗಡಿಸಿದ್ದರು ,ಇದರಲ್ಲಿನ ಒಂದು ಬಂಡೆ ಶ್ರೀ. ಅರುಣ ಯೋಗಿರಾಜ ಇವರು ಶ್ರೀರಾಮಲಲ್ಲಾನ ಮೂರ್ತಿಗಾಗಿ ಆರಿಸಿಕೊಂಡರು.
೨. ನಟರಾಜ ಅವರು, ನಾನು ಕೇವಲ ಬಂಡೆ ಸ್ವಚ್ಛಗೊಳಿಸಿದ್ದೆ ; ಆದರೆ ಗಣಿಗಾರಿಕೆ ಮತ್ತು ಭೂಗರ್ಭ ಶಾಸ್ತ್ರ ಇಲಾಖೆಯಿಂದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಮಾಡುತ್ತಾ ದಂಡ ವಿಧಿಸಿದರು. ಈ ಪ್ರಕರಣದಲ್ಲಿ ನನಗೆ ಯಾರಾದರೂ ಸಹಾಯ ಮಾಡುವರು ಎಂದು ನಾನು ಎದುರು ನೋಡುತ್ತಿದ್ದೇನೆ.
ಯಾವ ಭೂಮಿಯಿಂದ ಶ್ರೀರಾಮಲಲ್ಲಾನ ಮೂರ್ತಿಗಾಗಿ ಬಂಡೆ ದೊರೆತಿದೆ ಅಲ್ಲಿ ಕೂಡ ಶ್ರೀರಾಮಮಂದಿರ ಕಟ್ಟುವರು !
ರಾಮದಾಸ ಎಂಬ ೭೦ ವರ್ಷದ ದಲಿತ ಕೃಷಿಕನ ಮಾಲೀಕತ್ವದ ಭೂಮಿಯಿಂದ ಈ ಬಂಡೆ ತೆಗೆದಿದ್ದರೆ. ಈಗ ಅಲ್ಲಿ ಶ್ರೀರಾಮನ ಮಂದಿರ ಕಟ್ಟುವರು. ರಾಮದಾಸ ಇವರು, ಇಲ್ಲಿ ದಕ್ಷಿಣಕ್ಕೆ ಆಂಜನೇಯನ ದೇವಸ್ಥಾನ ಇರುವುದು . ಯಾವ ಭೂಮಿಯಿಂದ ಶ್ರೀರಾಮಲಲ್ಲಾನ ಮೂರ್ತಿಗಾಗಿ ಬಂಡೆ ತೆಗೆದಿದ್ದಾರೆ, ಆ ಜಾಗದ ಕಡೆಗೆ ಆಂಜನೇಯ ನೋಡುತ್ತಿದ್ದಾನೆ. ಆದ್ದರಿಂದ ನಾನು ಇಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟುವುದಕ್ಕಾಗಿ ೪ ಗುಂಟೆ ಭೂಮಿಯನ್ನು ದಾನ ನೀಡುವ ನಿರ್ಣಯ ತೆಗೆದುಕೊಂಡಿದ್ದೇನೆ. ಈ ದೇವಸ್ಥಾನಕ್ಕಾಗಿ ಶ್ರೀರಾಮನ ಮೂರ್ತಿ ಕೆತ್ತುವುದಕ್ಕಾಗಿ ನಾವು ಶ್ರೀ ಅರುಣ ಯೋಗಿರಾಜ ಇವರನ್ನು ಭೇಟಿ ಮಾಡುವೆವು ಎಂದು ಹೇಳಿದರು.