ಉತ್ತರಾಖಂಡ ವಕ್ಫ್ ಮಂಡಳಿಯ ೧೧೭ ಮದರಸಾಗಳಲ್ಲಿ ಶ್ರೀರಾಮನ ಕಥೆ ಅಳವಡಿಕೆ !

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡ ವಕ್ಫ್ ಬೋರ್ಡ್ ಅಡಿಯಲ್ಲಿ ನಡೆಸುತ್ತಿರುವ ಮದರಸಾಗಳ ಹೊಸ ಪಠ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಕಥೆಯನ್ನು ಸಹ ಸೇರಿಸಲಾಗುವುದು. ವಕ್ಫ್ ಬೋರ್ಡ್ ಅಡಿಯಲ್ಲಿ ರಾಜ್ಯಾದ್ಯಂತ ೧೧೭ ಮದರಸಾಗಳನ್ನು ನಡೆಸಲಾಗುತ್ತಿದೆ.

ವಕ್ಫ್ ಬೋರ್ಡ್‌ನ ಅಧ್ಯಕ್ಷ ಶಾದಾಬ ಶಾಮ್ಸ ಮಾತನಾಡುತ್ತಾ, ಈ ವರ್ಷ ಮಾರ್ಚ್‌ನಲ್ಲಿ ಪ್ರಾರಂಭವಾಗುವ ಶಾಲೆಗಳಲ್ಲಿ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು. ಶ್ರೀರಾಮನು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರೂ ಅವರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅನುಸರಿಸಬೇಕು. ತಂದೆಯ ವಚನ ಪೂರ್ಣ ಮಾಡುವುದಕ್ಕಾಗಿ ಶ್ರೀರಾಮನು ಸಿಂಹಾಸನವನ್ನು ತೊರೆದು ಕಾಡಿಗೆ ಹೋದರು. ಶ್ರೀರಾಮನಂತಹ ಮಗ ಯಾರಿಗೆ ಬೇಡವೇ ? ಮದರಸಾದಲ್ಲಿಯ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮ್ಮದ್ ಅವರೊಂದಿಗೆ ಶ್ರೀರಾಮನ ಜೀವನವನ್ನು ಕಲಿಸಲಾಗುವುದು ಎಂದರು.

ಸಂಪಾದಕೀಯ ನಿಲುವು

ಉತ್ತರಾಖಂಡ ವಕ್ಫ್ ಮಂಡಳಿಯ ಶ್ಲಾಘನೀಯ ನಿರ್ಧಾರ ! ದೇಶದಲ್ಲಿ ಪ್ರತಿಯೊಂದು ಮದರಸಾದಲ್ಲಿ ಹೀಗೆ ಮಾಡುವುದು ಅವಶ್ಯಕವಾಗಿದೆ. ಕೇವಲ ಶ್ರೀರಾಮನದೇ ಅಲ್ಲ, ಹಿಂದೂಗಳ ಪ್ರತಿಯೊಂದು ದೇವತೆಗಳ ವಿಷಯದ ಬಗ್ಗೆ ಶಿಕ್ಷಣ ಕೊಡಬೇಕು, ಆಗ ಮದರಸಾಗಳಿಂದ ಶಿಕ್ಷಣಪಡೆದ ವಿದ್ಯಾರ್ಥಿಗಳ ಮೇಲೆ ಯೋಗ್ಯ ಸಂಸ್ಕಾರವಾಗುವುದು ಮತ್ತು ಅವರು ಭಾರತದ ಆದರ್ಶ ಪ್ರಜೆಗಳಾಗುವರು !