ಉಸಿರಾಟಕ್ಕೆ ಸಂಬಂಧಿತ ರೋಗಿಗಳ ಸಂಖ್ಯೆ ಹೆಚ್ಚು
ಅಯೋಧ್ಯೆ, ಜನವರಿ ೨೫ (ವಾರ್ತೆ.) – ಶ್ರೀರಾಮಜನ್ಮ ಭೂಮಿಯಲ್ಲಿ ನೂತನ ಮಂದಿರದಲ್ಲಿ ವಿರಾಜಮಾನ ಆಗಿರುವ ರಾಮರಾಯನ ದರ್ಶನ ಪಡೆಯುವುದಕ್ಕಾಗಿ ಬಂದಿರುವ ೧೨ ಸಾವಿರ ಜನರು ಇಲ್ಲಿಯವರೆಗೆ ಪ್ರಥಮೋಪಚಾರದ ಲಾಭ ಪಡೆದಿದ್ದಾರೆ. ಇಲ್ಲಿಯ ನಡುಗುವ ಚಳಿಯಿಂದ ಅನೇಕರಿಗೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಆರಂಭವಾಗಿದೆ. ಒಟ್ಟು ರೋಗಿಗಳ ಪೈಕಿ ಉಸಿರಾಟಕ್ಕೆ ಸಂಬಂಧಿಸಿದ ರೋಗಿಗಳ ಸಂಖ್ಯೆ ಎಲ್ಲಕ್ಕಿಂತ ಹೆಚ್ಚು ಎಂದರೆ ಶೇಕಡ ೨೪ ರಷ್ಟು ಇದೆ. ಅಯೋಧ್ಯೆನಗರದಲ್ಲಿನ ಶರಯು ನದಿಯ ತೀರದಲ್ಲಿ ಪ್ರಾಥಮಿಕ ಉಪಚಾರ ಕೇಂದ್ರಕ್ಕೆ ಹೋಗಿ ದೈನಿಕ ‘ಸನಾತನ ಪ್ರಭಾತ’ನ ಪ್ರತಿನಿಧಿಗಳು ಈ ಮಾಹಿತಿ ಪಡೆದಿದ್ದಾರೆ.
ಜನವರಿ ೧೫ ರಿಂದ ಈ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಅಯೋಧ್ಯೆನಗರದಲ್ಲಿ ಆರಂಭಿಸಿದ್ದಾರೆ. ಇದರಲ್ಲಿ ಉಸಿರಾಟದ ತೊಂದರೆಯ ನಂತರ ಹೊಟ್ಟೆ ತೊಳಿಸುವುದು ಮತ್ತು ನಂತರ ಜ್ವರ ಬರುವುದು ಈ ರೋಗಗಳ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಾಗಿವೆ. ಹೊಟ್ಟೆಯ ವೇದನೆಯ ರೋಗಿಗಳ ಸಂಖ್ಯೆ ಶೇಕಡಾ ೧೪ ಹಾಗೂ ಚರ್ಮದ ಅಲರ್ಜಿ ಆಗಿರುವ ರೋಗಿಗಳ ಸಂಖ್ಯೆ ಶೇಕಡ ೧೩ ರಷ್ಟು ಇದೆ. ಅಯೋಧ್ಯೆಯಲ್ಲಿ ರಾಮಕಥಾ ಸಂಗ್ರಹಾಲಯ, ಸಾಕೇತ ಪೆಟ್ರೋಲ್ ಪಂಪ್, ರಾಮೇಶ್ವರಪುರಂ, ರಾಮ ಜನ್ಮ ಭೂಮಿ ಹೀಗೆ ರಾಜ್ಯದ ಆರೋಗ್ಯ ಇಲಾಖೆಯಿಂದ ೧೮ ಸ್ಥಳಗಳಲ್ಲಿ ಈ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದ್ದು, ಎಲ್ಲಾ ಕೇಂದ್ರಗಳಲ್ಲಿ ಒಟ್ಟು ೧೦೪ ವೈದ್ಯರ ಸಮಾವೇಶವಿದೆ. ಇದರಲ್ಲಿ ತಜ್ಞ ಡಾಕ್ಟರರು ಕೂಡ ಇದ್ದಾರೆ. ಬೆಳಿಗ್ಗೆ ೮ ರಿಂದ ರಾತ್ರಿ ೮ ರ ವರೆಗೆ ಈ ಚಿಕಿತ್ಸಾ ಕೇಂದ್ರಗಳು ಕಾರ್ಯನಿರತವಾಗಿರುತ್ತವೆ. ರಾಮಕಥಾ ಸಂಗ್ರಹಾಲಯದಲ್ಲಿನ ಚಿಕಿತ್ಸಾ ಕೇಂದ್ರದಲ್ಲಿ ಇಲ್ಲಿಯವರೆಗೆ ೨ ಸಾವಿರದ ೨೯೯ ಜನರಿಗೆ ಪ್ರಥಮೋಪಚಾರ ನೀಡಿದ್ದಾರೆ.
ಭಕ್ತರಿಗೆ ತಕ್ಷಣ ಚಿಕಿತ್ಸೆ ದೊರೆಯುವುದಕ್ಕಾಗಿ ಚಿಕಿತ್ಸಾ ಕೇಂದ್ರಗಳು ! – ಡಾ. ಪಿಯೂಷ ಗುಪ್ತ, ಪ್ರಾರ್ಥಮಿಕ ಆರೋಗ್ಯ ಕೇಂದ್ರ, ಶರಯು ತೀರ
ಅಯೋಧ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಭಕ್ತರಿಗೆ ತಕ್ಷಣ ಚಿಕಿತ್ಸೆ ಸಿಗಬೇಕು, ಅದಕ್ಕಾಗಿ ಈ ಪ್ರಾರ್ಥಮಿಕ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿದ್ದಾರೆ. ನೆಗಡಿ, ಬೇಧಿ, ಜ್ವರ, ಆಯಾಸ, ಹೊಟ್ಟೆ ಹಾಳಾಗುವುದು ಮುಂತಾದ ತೊಂದರೆ ಇರುವ ರೋಗಿಗಳ ಸಂಖ್ಯೆ ಹೆಚ್ಚು ಇದೆ. ೨ ಕೇಂದ್ರದಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಈ ಚಿಕಿತ್ಸಾ ಪದ್ಧತಿ ಅನುಸರಿಸುತ್ತಿದ್ದರೆ. ನಡುಗುವ ಚಳಿಯಿಂದ ಹೃದಯಘಾತ ಆಗುವುದು, ಉಸಿರಾಟ ತೆಗೆದುಕೊಳ್ಳಲು ಅಡಚಣೆ ಬರುವುದು ಹೇಗೆ ತೊಂದರೆಗಳು ರೋಗಿಗಳಿಗೆ ಆಗುತ್ತಿವೆ. ಉಸಿರಾಟಕ್ಕೆ ಸಂಬಂಧಿಸಿದ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿ ಆಕ್ಸಿಜನ್ ಸಿಲೆಂಡರ್ ಲಭ್ಯವಿದೆ. ಜೀವ ರಕ್ಷಕ ಇಂಜೆಕ್ಷನ್ ಕೂಡ ಲಭ್ಯವಿದೆ. ಹೃದಯವಿಕಾರ, ಮಧುಮೇಹ, ರಕ್ತದೊತ್ತಡ ಇದಕ್ಕೂ ಕೂಡ ಔಷಧಿಗಳು ಲಭ್ಯವಿದೆ.