ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದುಗಳು ನಿರಂತರ ಪ್ರಯತ್ನ ಮಾಡುವುದು ಅವಶ್ಯಕ ! – ಪೂ. ರಾಜುದಾಸಜಿ ಮಹಾರಾಜ, ಮಹಂತ, ಹನುಮಾನಗಢಿ, ಅಯೋಧ್ಯೆ

ಪೂ. ರಾಜುದಾಸಜಿ ಮಹಾರಾಜ, ಮಹಂತ

ಅಯೋಧ್ಯೆ, ಜನವರಿ ೨೫ (ವಾರ್ತೆ.) – ಹಿಂದೂ ರಾಷ್ಟ್ರ ಇಲ್ಲದಿದ್ದರೆ, ಸನಾತನ ಧರ್ಮ ಕೂಡ ಸುರಕ್ಷಿತವಾಗಿ ಉಳಿಯಲಾರದು. ಇದಕ್ಕಾಗಿ ಎಲ್ಲಾ ಹಿಂದೂಗಳು ಹಿಂದೂ ರಾಷ್ಟ್ರಕ್ಕೆ ಬಲವಾಗಿ ಆಗ್ರಹಿಸಬೇಕು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿರಬೇಕು, ಎಂದು ಅಯೋಧ್ಯೆಯಲ್ಲಿನ ಹನುಮಾನ ಗಢಿಯ ಮಹಂತ ಪೂ. ರಾಜದಾಸಜಿ ಮಹಾರಾಜ ಇವರು ಕರೆ ನೀಡಿದರು. ಜನವರಿ 24 ರಂದು ದೈನಿಕ ‘ಸನಾತನ ಪ್ರಭಾತ’ಗೆ ನೀಡಿದ ಸಂದರ್ಶನದಲ್ಲಿ ಈ ಮೇಲಿನ ಕರೆ ನೀಡಿದರು.

ಈ ಸಮಯದಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಕುರಿತು ದೈನಿಕ ‘ಸನಾತನ ಪ್ರಭಾತ’ಗೆ ಪ್ರತಿಕ್ರಿಯೆ ನೀಡುವಾಗ ಪೂ. ರಾಜುದಾಸಜಿ ಮಹಾರಾಜರು, ”ಸಂಪೂರ್ಣ ದೇಶ ರಾಮಮಯ, ಸನಾತನಮಯ, ಕೇಸರಿಮಯ, ಹಿಂದುತ್ವಮಯ ಮತ್ತು ರಾಷ್ಟ್ರಮಯವಾಗಿದೆ. ಸನಾತನ ಧರ್ಮ ಸಂಸ್ಕೃತಿಯ ರಕ್ಷಣೆಗಾಗಿ ಜಗತ್ತಿನಲ್ಲಿನ ಎಷ್ಟೋ ರಾಮ ಭಕ್ತರು ಮತ್ತು ಸನಾತನ ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ತ್ಯಾಗ, ತಪಸ್ಸು ಮತ್ತು ಸಂಘರ್ಷ ಮಾಡಿದ್ದಾರೆ. ಶ್ರೀ ರಾಮ ಮಂದಿರಕ್ಕಾಗಿ ೫೦೦ ವರ್ಷಗಳ ಹೋರಾಟದಲ್ಲಿ ೫ ಲಕ್ಷರಾಮ ಭಕ್ತರ ಪ್ರಾಣದ ಆಹುತಿ ಆಗಿದೆ. ಸ್ವಾತಂತ್ರ್ಯದ ನಂತರ ೭೦ ವರ್ಷ ಹಿಂದುಗಳು ಅನೇಕ ಆಘಾತವನ್ನು ಸಹಿಸಿದ್ದಾರೆ. ಶ್ರೀರಾಮ ಮಂದಿರಕ್ಕಾಗಿ ಹಿಂದುಗಳು ಇಷ್ಟೊಂದು ಅಘಾತ ಸಹಿಸುವುದು ಇದೇನು ಸಾಮಾನ್ಯ ವಿಷಯವಲ್ಲ. ಶ್ರೀರಾಮನ ಹಳೆಯ ಅವಸ್ಥೆ ನೋಡಿ ಜನರು ಅಪಹಾಸ್ಯ ಮಾಡುತ್ತಾ ಹೇಳುತ್ತಿದ್ದರು, ‘ಭವ್ಯ ಶ್ರೀರಾಮಮಂದಿರ ಹೇಗೆ ಕಟ್ಟುವರು ? ಮಂದಿರ ಕಟ್ಟಲು ಪ್ರಯತ್ನ ಮಾಡಿದರೆ ಗುಂಡು ಹಾರಿಸಲಾಗುವುದು. ರಕ್ತದ ನದಿಗಳೇ ಹರಿಯುವುದು; ಆದರೆ ಹಾಗೆ ಏನು ಆಗದೇ ಶ್ಟ್.” ಎಂದು ಹೇಳಿದರು.

ಹಿಂದೂ ರಾಷ್ಟ್ರದ ಸ್ಥಾಪನೆ ಬೇಗನೆ ಆಗುವುದು !

ಹಿಂದೂ ರಾಷ್ಟ್ರ ಎಂದರೆ ರಾಮರಾಜ್ಯ. ರಾಮರಾಜ್ಯದಲ್ಲಿ ಎಲ್ಲರೂ ಸುಖವಾಗಿ ಇದ್ದರು. ಯಾರಿಗು ದುಃಖ ಇರಲಿಲ್ಲ. ಹಿಂದೂರಾಷ್ಟ್ರದಲ್ಲಿ ವಿಶ್ವ ಬಾಂಧವ್ಯದ ಭಾವನೆ ಇದೆ. ಭಾರತದಲ್ಲಿ ಅನೇಕ ಪಂಥ, ಧರ್ಮ, ಸಂಪ್ರದಾಯ ಇವೆ, ಅವರ ಆಚಾರ ಧರ್ಮದ ಪದ್ಧತಿಗಳು ಬೇರೆ ಬೇರೆಯಾಗಿದ್ದರೂ ಅವರು ಯಾವುದೇ ಸಂಘರ್ಷ ಮಾಡದೆ ಹೊಂದಿಕೊಂಡು ಬಾಳುತ್ತಿದ್ದಾರೆ. ತದ್ವಿರುದ್ಧ ಇತರ ದೇಶದಲ್ಲಿ ಒಂದೇ ಧರ್ಮ, ಒಂದೇ ಸಂಪ್ರದಾಯ ನಂಬುತ್ತಾರೆ. ಭಾರತದ ಪ್ರತಿಯೊಂದು ಸಂಪ್ರದಾಯದ ಪೂಜಾ ಅರ್ಚನೆ ಮಾಡುವ ಪದ್ಧತಿ ಬೇರೆ ಬೇರೆ ಆಗಿದ್ದರು, ಭಾರತದಲ್ಲಿನ ಸ್ವಂತ ಧರ್ಮದ ಪದ್ಧತಿಗಳು ನಿರ್ಭಯದಿಂದ, ಸ್ವತಂತ್ರವಾಗಿ ಆಚರಿಸಲು ಯಾವುದೇ ಬಂಧನ ಅಥವಾ ಅಡಚಣೆ ಇಲ್ಲ. ಭಾರತದಲ್ಲಿ ಆದಷ್ಟು ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆ ಆಗುವುದು, ಎಂದು ಪೂ. ರಾಜುದಾಸಜಿ ಮಹಾರಾಜ ಇವರು ಈ ಸಮಯದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.