|
ಉತ್ತರ ಕನ್ನಡ – ಕಾರವಾರದಲ್ಲಿ ಸನಾತನ ಸ್ವರಾಜ್ಯ ಸಂಘದ ವತಿಯಿಂದ ರಾಮಮಂದಿರ ಪ್ರಾಣಪ್ರತಿಷ್ಟಾಪನೆ ನಿಮಿತ್ತ ರಾಮಯಾಣ ಸ್ಪರ್ಧೆ ನಡೆಸಿ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಸನಾತನ ಧರ್ಮದ ಕುರಿತು ಪ್ರವಚನವನ್ನು ಆಯೋಜಿಸಲಾಗಿತ್ತು. ಈ ನಿಮಿತ್ತ ಕಾರ್ಯಕ್ರಮದ ಮುಖ್ಯ ಅಧ್ಯಕ್ಷರಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಹಾಗೂ ಗೌರವ ಅಧ್ಯಕ್ಷರಾಗಿ ಸನಾತನ ಸಂಸ್ಥೆಯ ಸೌ. ತಾರಾ ಹಾಗೂ ವಿಶೇಷ ಅಥಿತಿಯಾಗಿ ಅಂಕೋಲಾದ ಸಮಿತಿ ಕಾರ್ಯಕರ್ತರಾದ ಶ್ರೀ. ವಿನಾಯಕ ಶೆಟ್ಟಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಶ್ರೀ. ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ, ನಾವು ಧರ್ಮಾಚರಣೆಯನ್ನು ಯಾವ ರೀತಿ ಮಾಡಬೇಕು ಅಂದರೆ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕರಾಗ್ರೆ ವಸತೆ ಲಕ್ಷ್ಮೀ ಶ್ಲೋಕದಿಂದ ಆರಂಭವಾಗಿ ಸ್ನಾನ ಮಾಡುವಾಗ ‘ಗಂಗೆ ಚ ಯಮುನೇಚ…’ ಶ್ಲೋಕ ಹೇಳಬೇಕು ಹೀಗೆ ಧರ್ಮಪಾಲನೆ ಮಾಡುತ್ತ ಸಂಜೆ ದೀಪ ಹಚ್ಚುವ ತನಕ ನಮ್ಮಲ್ಲಿ ಧರ್ಮದ ಸಂಸ್ಕಾರ ನಿರ್ಮಾಣ ಮಾಡಬೇಕು ಎಂದು ತಮ್ಮ ಮಾರ್ಗದರ್ಶನದಲ್ಲಿ ಹೇಳಿದರು ಹಾಗೂ ಈ ರೀತಿ ಧರ್ಮವು ನಮಗೆ ಯಾವ ರೀತಿಯಲ್ಲಿ ಆದರ್ಶ ಜೀವನ ನಡೆಸಿ ಸಮಾಜ ಉತ್ತಮವಾಗಿ ಇರಬಲ್ಲದು ಎಂದು ಮಾರ್ಗದರ್ಶನ ಮಾಡಿದರು.
ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ರಾಮಾಯಣದ ಸ್ಪರ್ಧೆ ಮಾಡಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು ಹಾಗೂ ಅದೇ ಸಮಯದಲ್ಲಿ ಶ್ರೀ ರಾಮ ನಾಮ ಸಂಕೀರ್ತನವನ್ನು ಕೂಡ ಎಲ್ಲಾ ಉಪಸ್ಥಿತರಿದ್ದವರು ಮಾಡಿದರು.