ಮುಂಬಯಿ – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಅಟಲ್ ಸೇತುವೆಯ ಮೇಲೆ ತ್ರಿಚಕ್ರ ವಾಹನಗಳಿಗೆ ಅನುಮತಿ ಇಲ್ಲದಿರುವಾಗಲೂ ಆ ಸೇತುವೆಯ ಮೇಲೆ ತ್ರಿಚಕ್ರ ವಾಹನಗಳನ್ನು ಓಡಿಸುತ್ತಿರುವ ವೀಡಿಯೋ ಮಧ್ಯಂತರದಲ್ಲಿ ಪ್ರಸಾರವಾಗಿತ್ತು. ಈ ಸೇತುವೆಯ ಮೇಲೆ ವಾಹನಗಳನ್ನು ಬದಿಗೆ ನಿಲ್ಲಿಸಿ ಕೆಲವು ಜನರು ಅಲ್ಲಿ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವು ನಾಗರಿಕರು ಅಲ್ಲಿ ಕಸವನ್ನು ಚೆಲ್ಲುತ್ತಾರೆ. ಕೆಲವು ಸ್ಥಳಗಳಲ್ಲಿ ಅಂತೂ ಪಾನಬೀಡಾ ಅಥವಾ ಗುಟ್ಕಾ ತಿಂದು ಉಗುಳಿರುವ ಗುರುತುಗಳು ಕಂಡು ಬಂದಿದೆ.
ಅಟಲ್ ಸೇತುವೆಯ ಮೇಲೆ ಮೊದಲ ಅಪಘಾತ!
ಈ ಅಟಲ್ ಸೇತುವೆಯ ಮೇಲೆ ಇತ್ತೀಚೆಗಷ್ಟೇ ಮೊದಲ ಅಪಘಾತವಾಗಿದೆ. ಅಪಘಾತವಾಗಿರುವ ವಾಹನ ಉರಣದ ಚಿರ್ಲೆಯಿಂದ ಮುಂಬಯಿ ಕಡೆಗೆ ಹೋಗುತ್ತಿತ್ತು. ಸೇತುವೆಯ ಮೇಲೆ ಉರಣ ಕಡೆಯಿಂದ 12 ಕಿಲೋಮೀಟರ ಅಂತರದಲ್ಲಿ ಒಂದು ವಾಹನ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಮಧ್ಯದ ದ್ವಿಭಜಕ್ಕೆ ಡಿಕ್ಕಿ ಹೊಡೆದಿದೆ.. ಈ ವಾಹನವನ್ನು ಮಹಿಳೆ ಚಲಾಯಿಸುತ್ತಿದ್ದಳು. ಅವಳೊಂದಿಗೆ ಓರ್ವ ಪುರುಷ ಮತ್ತು ಚಿಕ್ಕ ಮಗು ಇತ್ತು. ಸುದೈವದಿಂದ ಮೂವರಿಗೂ ಅಪಘಾತದಲ್ಲಿ ಗಂಭೀರ ಗಾಯಗಳು ಆಗಿಲ್ಲ. ಆ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತಕ್ಕೀಡಾದ ವಾಹನವು ವೇಗದ ಮಿತಿಯನ್ನು ಪಾಲಿಸುತ್ತಿತ್ತೇ? ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ.
#WATCH महाराष्ट्र: नवनिर्मित मुंबई ट्रांस हार्बर लिंक(अटल सेतु) पर एक कार अनियंत्रित होकर डिवाइडर से टकरा गई। (21.01)
(सोर्स: नवी मुंबई पुलिस) pic.twitter.com/ir46kDChiP
— ANI_HindiNews (@AHindinews) January 21, 2024
ಸಂಪಾದಕರು ನಿಲುವು* ಸ್ವಾತಂತ್ರ್ಯ ಬಂದು 76 ವರ್ಷಗಳ ಬಳಿಕವೂ ರಾಜಕಾರಣಿಗಳು ಜನರಿಗೆ ಶಿಸ್ತು ಕಲಿಸದೇ ಇರುವುದರ ಪರಿಣಾಮ! ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಹ ಘಟನೆಗಳು ನಡೆಯುವುದು, ವಿಶ್ವ ಗುರುವಾಗಲು ಮುಂದಡಿಯಿಡುತ್ತಿರುವ ಭಾರತಕ್ಕೆ ನಾಚಿಕೆಗೇಡಿನ ಸಂಗತಿ! |