|
ಅಯೋಧ್ಯೆಯಿಂದ ‘ಸನಾತನ ಪ್ರಭಾತ’ದ ವಿಶೇಷ ಕವರೇಜ್ ಶ್ರೀ. ನೀಲೇಶ ಕುಲಕರ್ಣಿ, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ
ಅಯೋಧ್ಯೆ, ಜನವರಿ ೨೧ (ವಾರ್ತೆ.) – ಕಳೆದ ೫೦೦ ವರ್ಷಗಳಿಂದ ಹಿಂದೂಗಳು ಯಾವ ಕ್ಷಣದ ದಾರಿ ಕಾಯುತ್ತಿದ್ದರು, ಆ ಕ್ಷಣ ಈಗ ಕೆಲವೇ ಗಂಟೆ ಉಳಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಹಸ್ತದಿಂದ ಇಂದು ಶ್ರೀರಾಮಲಲ್ಲನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯುವುದು. ಆ ಸಮಯದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲ ಆನಂದಿಬೇನ ಪಟೇಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘ ಚಾಲಕ ಡಾ. ಮೋಹನಜಿ ಭಾಗವತ ಮುಂತಾದವರು ಉಪಸ್ಥಿತರಿರುವರು. ಈ ಸಮಾರಂಭಕ್ಕೆ ಉಪಸ್ಥಿತ ಇರುವುದಕ್ಕಾಗಿ, ದೇಶಾದ್ಯಂತ ಅನೇಕ ಸಾಧು, ಸಂತರು ವಿವಿಧ ಅಖಾಡಾದ ಶ್ರೀಮಹಂತರು, ಮಹಂತರು, ಮಹಾಮಂಡಲೇಶ್ವರ ಪೀಠಾಧೀಶ್ವರರು ಮತ್ತು ಗಣ್ಯರು ಅಯೋಧ್ಯೆನಗರಕ್ಕೆ ಆಗಮಿಸಿದ್ದಾರೆ. ಈ ಸಮಯದಲ್ಲಿ ಭವ್ಯ ಶ್ರೀರಾಮಮಂದಿರದ ಉದ್ಘಾಟನೆ ಕೂಡ ನಡೆಯುವುದು. ಶ್ರೀರಾಮನ ಹೊಸ ಮೂರ್ತಿ ಇದೇ ಮಂದಿರದಲ್ಲಿ ಸ್ಥಾಪಿಸುವರು. ಶ್ರೀರಾಮ ಭಕ್ತರು, ಈ ಮಂದಿರದ ಕಟ್ಟಡ ಕಾಮಗಾರಿಗಾಗಿ ಅನೇಕ ಕಾರಸೇವಕರು ನೀಡಿರುವ ಬಲಿದಾನ ಸಾರ್ಥಕ ಆಗಿರುವ ಭಾವನೆ ವ್ಯಕ್ತಪಡಿಸಿದರು. ಒಟ್ಟಾರೆ ಈ ಸಮಾರಂಭದಿಂದ ಅಯೋಧ್ಯೆನಗರದಲ್ಲಿ ಜನವರಿ ೨೨ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆಯುವರು.
ಅಯೋಧ್ಯೆನಗರ ಹೇಗೆ ಅಲಂಕರಿಸಿದ್ದಾರೆ ?
೧. ಅಯೋಧ್ಯೆನಗರದ ಪ್ರವೇಶ ದ್ವಾರದಲ್ಲೇ ಭಕ್ತರ ಸ್ವಾಗತಕ್ಕಾಗಿ ಸೂರ್ಯೋದೇವನ ಮೂರ್ತಿ ಇರುವ ಭವ್ಯ ಕಮಾನು ತಯಾರಿಸಿದ್ದಾರೆ. ಸತ್ತಅಶ್ವಗಳ ಮೇಲೆ ವಿರಾಜಮಾನ ಸೂರ್ಯದೇವನ ಭವ್ಯ ಮೂರ್ತಿ ಎಲ್ಲರ ಗಮನ ಸೆಳೆಯುತ್ತದೆ. ಶ್ರೀರಾಮ ರಘುವಂಶದವರಾಗಿರುವುದರ ಪ್ರತೀಕ ಎಂದು ಈ ಮೂರ್ತಿ ಇಲ್ಲಿ ಸ್ಥಾಪಿಸಿದ್ದಾರೆ ಎಂದು ಹೇಳಿದರು.
೨. ಕಮಾನದಿಂದ ಒಳಗೆ ಪ್ರವೇಶ ಮಾಡಿದ ಮೇಲೆ ಎರಡು ಬದಿಯ ರಸ್ತೆಯ ಕಡೆಗೆ ಇರುವ ಗೋಡೆಯ ಮೇಲೆ ರಾಮಾಯಣದಲ್ಲಿನ ವಿವಿಧ ಪ್ರಸಂಗಗಳ ಕೆತ್ತನೆಗಳು ಕೆತ್ತಿದ್ದಾರೆ.
೩. ರಸ್ತೆಯ ಮಧ್ಯದಲ್ಲಿರುವ ದ್ವಿಭಾಜಕದ ಮೇಲೆ ಅನೇಕ ವಿದ್ಯುತ್ ದೀಪದ ಕಂಬಗಳು ನಿರ್ಮಿಸಿದ್ದಾರೆ. ಈ ಕಂಬಗಳು ಅತ್ಯಂತ ವೈಶಿಷ್ಟ್ಯ ಪೂರ್ಣ ರೀತಿಯಲ್ಲಿ ಅಲಂಕರಿಸಿದ್ದಾರೆ. ಪ್ರತಿಯೊಂದು ಕಂಬದ ಮೇಲೆ ಹಳದಿ ಬಣ್ಣದ ಸೂರ್ಯನ ಪ್ರತಿಕೃತಿ ಕೂರಿಸಿದ್ದಾರೆ. ಇದಲ್ಲದೆ ಈ ಕಂಬಗಳ ಮೇಲೆ ಶ್ರೀ ಹನುಮಂತನ ಗದೆ ಕೆತ್ತಿದ್ದಾರೆ ಹಾಗೂ ಮೇಲಿನ ಬದಿಯಲ್ಲಿ ‘ಜಯ ಶ್ರೀರಾಮ’ ಎಂದು ಅಕ್ಷರಗಳು ಕೂಡ ಕೆತ್ತಿದ್ದಾರೆ. ಈ ಕಂಬಗಳ ಜೊತೆಗೆ ರಸ್ತೆಯ ಎರಡು ಬದಿಯಲ್ಲಿ ಹಾಗೂ ಪ್ರತಿಯೊಂದು ವೃತ್ತವು ಚಂಡುಹೂವಿನ ಆಕರ್ಷಕ ಅಲಂಕಾರ ಮಾಡಿದ್ದಾರೆ.
೪. ಅಯೋಧ್ಯೆಯಲ್ಲಿನ ಪ್ರತಿಯೊಂದು ವೃತ್ತ, ಪ್ರತಿಯೊಂದು ಅಂಗಡಿ, ಪ್ರತಿಯೊಂದು ಸ್ಥಳ ಹಾಗೂ ಮನೆಮನೆಯ ಮೇಲೆ ಕೇಸರಿ ಧ್ವಜ ಹಾರಿಸಿದ್ದು ಅದರ ಮೇಲೆ ಭಗವಾನ್ ಶ್ರೀ ರಾಮನ ಮತ್ತು ಶ್ರೀರಾಮ ಮಂದಿರದ ಛಾಯಾಚಿತ್ರವಿದೆ.
೫. ಸರಕಾರವು ಮಂದಿರದಿಂದ ದೂರದವರೆಗೆ ಅಲ್ಲಲ್ಲಿಯೇ ಧ್ವನಿವರ್ಧಕಗಳನ್ನು ಹಾಕಿರುವುದು ಮತ್ತು ಅದರಲ್ಲಿ ಶ್ರೀರಾಮನ ಗೀತೆಗಳು ಹಾಕುತ್ತಿದ್ದಾರೆ.
೬. ಈ ಎಲ್ಲಾದರಿಂದ ಸಂಪೂರ್ಣ ಅಯೋಧ್ಯನಗರ ರಾಮಮಯವಾಗಿದ್ದು ಈಗ ಶ್ರೀರಾಮನ ಆಗಮನದ ಸೆಳೆತ ಎಲ್ಲರಲ್ಲಿ ಇದೆ.
೭. ಎಲ್ಲರ ಬಾಯಿಯಲ್ಲಿ ಕೇವಲ ಮತ್ತು ಕೇವಲ ಜಯ ಶ್ರೀರಾಮನ ಘೋಷಣೆಗಳೇ ಬರುತ್ತೀವೆ.
ಶ್ರೀರಾಮ ಜನ್ಮಭೂಮಿಯ ಕಡೆಗೆ ಹೋಗುವ ರಸ್ತೆಗಳು ಹೂವಿನಿಂದ ಅಲಂಕರಿಸಿದ್ದಾರೆ !
ಶ್ರೀರಾಮ ಜನ್ಮ ಭೂಮಿಯ ಕಡೆಗೆ ಹೋಗುವ ಮುಖ್ಯ ರಸ್ತೆ ಕೆಲವು ಕಿಲೋಮೀಟರ್ವರೆಗೆ ಹೂವಿನ ಹಾರಗಳಿಂದ ಅಲಂಕರಿಸಿದ್ದಾರೆ. ಮಾರ್ಗದಲ್ಲಿನ ಮರಗಳ ಮೇಲೆ ಕೂಡ ಹೂವಿನ ಹಾರ ಹಾಕಿದ್ದಾರೆ. ಈ ಮಾರ್ಗದಲ್ಲಿ ಪ್ರಭು ಶ್ರೀರಾಮ, ಸೀತಾ ಮಾತೆ, ಶ್ರೀ ಹನುಮಂತ, ಲಕ್ಷ್ಮಣ, ವಾಲ್ಮೀಕಿ ಋಷಿ ಇವರ ಆಕರ್ಷಕ ಭವ್ಯ ಮೂರ್ತಿಗಳು ಸ್ಥಾಪಿಸಿದ್ದಾರೆ. ಈ ಮೂರ್ತಿಗಳು ಎಲ್ಲರ ಗಮನ ಸೆಳೆಯುತ್ತಿವೆ.
ಶ್ರೀರಾಮಜನ್ಮಭೂಮಿಯ ಕಡೆ ಹೋಗುವ ರಸ್ತೆಗಳ ಮೇಲೆ ಆಕರ್ಷಕ ಕುಸರೀ ಕೆಲಸದ ಕಮಾನಗಳು ಹಾಕಿದ್ದು ಅದರ ಮೇಲೆ ವಿದ್ಯುತ್ ದೀಪದ ಅಲಂಕಾರ ಮಾಡಿದ್ದಾರೆ. ಇದರ ಜೊತೆಗೆ ನಿರ್ಧರಿಸಿದ ಅಂತರದಲ್ಲಿನ ಕಂಬಗಳ ಮೇಲೆ ಶ್ರೀರಾಮನ ನಿಂತಿರುವಚಿತ್ರ (ಕಟೌಟ್) ಹಾಕಿದ್ದಾರೆ.
ಸಾಮಾನ್ಯ ಭಕ್ತರಿಗಾಗಿ ೨ ದಿನದರ್ಶನ ನಿಲ್ಲಿಸಿದ್ದಾರೆ.
ಪ್ರಾಣ ಪ್ರತಿಷ್ಠಾಪನೆಯ ಸಮಾರಂಭದ ಹಿನ್ನೆಲೆಯಲ್ಲಿ ಸಾಮಾನ್ಯ ಭಕ್ತರಿಗಾಗಿ ಜನವರಿ ೨೧ ಮತ್ತು ೨೨ ಈ ದಿನದಂದು ದರ್ಶನ ನಿಲ್ಲಿಸಿದ್ದಾರೆ. ೨೩ ರಿಂದ ಭಕ್ತರು ಮತ್ತೆ ಎಂದಿನಂತೆ ದರ್ಶನ ಪಡೆಯುವರು.
ಹೆಚ್ಚಿನ ಪೊಲೀಸ ಬಂದೋಬಸ್ತ್ !
ಸಂಪೂರ್ಣ ಅಯೋಧ್ಯೆಯಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತ್ ಮಾಡಿದ್ದಾರೆ. ಅಯೋಧ್ಯೆಯಲ್ಲಿನ ಪ್ರವೇಶ ದ್ವಾರದಿಂದ ಪೊಲೀಸರ ಬೃಹತ್ ತಂಡಗಳು ಕಾಣುತ್ತಿವೆ. ವೃತ್ತಗಳಲ್ಲಿ ತಾತ್ಕಾಲಿಕ ಬ್ಯಾರಿಕೆಡ್ಸ್ ಅಳವಡಿಸಿ ವಾಹನ ಪರಿಶೀಲನೆ ನಡೆಯುತ್ತಿದೆ. ಕೇವಲ ಪಾಸ್ ಇರುವ ವಾಹನಗಳು ಮತ್ತು ವ್ಯಕ್ತಿಗಳನ್ನೇ ಮುಂದೆ ಕಳಿಸುತ್ತಿದ್ದಾರೆ. ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರ ಅಳವಡಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಪೊಲೀಸ ಪಡೆಗಳು ಕೂಡ ಬೃಹತ್ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳ ನೇಮಕ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನ ಆಗಮನ, ಎಂದರೆ ರಾಮರಾಜ್ಯರೂಪೀ ಹಿಂದೂ ರಾಷ್ಟ್ರದ ನಾಂದಿ !ತ್ರೇತಾಯುಗದಲ್ಲಿ ರಾವಣನ್ನು ವಧಿಸಿ ಪ್ರಭು ಶ್ರೀರಾಮ ಅಯೋಧ್ಯೆಗೆ ಹಿಂತಿರುಗಿದ್ದನು ಮತ್ತು ಕಲಿಯುಗದಲ್ಲಿ ಹಿಂದೂಗಳ ೫೦೦ ವರ್ಷದ ಸುಧೀರ್ಘ ಹೋರಾಟದ ನಂತರ ಇಂದು ರಾಮಲಲ್ಲ ಶ್ರೀರಾಮ ಜನ್ಮ ಭೂಮಿಯಲ್ಲಿನ ಭವ್ಯ ಮಂದಿರದಲ್ಲಿ ವಿರಾಜಮಾನರಾಗುತ್ತಿದ್ದಾರೆ. ತ್ರೇತಾಯುಗದಲ್ಲಿನ ಅಯೋಧ್ಯವಾಸಿಗಳು ಪ್ರತ್ಯಕ್ಷ ಸಗುಣ ರೂಪದಲ್ಲಿನ ಶ್ರೀರಾಮನನ್ನು ನೋಡಿದರು ಹಾಗೂ ಕಲಿಯುಗದಲ್ಲಿನ ಅಂದರೆ ಈಗಿನ ನಾವೆಲ್ಲ ಶ್ರೀರಾಮ ಭಕ್ತರು ನಿರ್ಗುಣ ಸ್ವರೂಪದಲ್ಲಿನ ಶ್ರೀರಾಮ ತತ್ವ ಅನುಭವಿಸುತ್ತಿದ್ದೇವೆ. ತ್ರೇತಾಯುಗದಲ್ಲಿನ ಪ್ರಭು ಶ್ರೀರಾಮ ಹಿಂತಿರುಗಿದನಂತರ ರಾಮರಾಜ್ಯ ಸಾಕಾರವಾಗಿತ್ತು. ಅದೇ ರೀತಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಆಗಮನ ಎಂದರೆ ರಾಮರಾಜ್ಯ ರೂಪದ ಹಿಂದೂ ರಾಷ್ಟ್ರದ ನಾಂದಿಯಾಗಿದೆ. ಇಲ್ಲಿ ಬಂದಿರುವ ಸಾಧು ಸಂತರು ಕೂಡ ಇದೇ ಹೇಳುತ್ತಿದ್ದಾರೆ. ಇದರ ಅನುಭೂತಿ ಈಗ ಅಯೋಧ್ಯೆಯಲ್ಲಿನ ಪ್ರತಿಯೊಂದು ಹಿಂದೂ ಪಡೆಯುತ್ತಿದ್ದಾನೆ. |