ಶ್ರೀರಾಮ ಮಂದಿರದ ಉದ್ಘಾಟನೆಯ ನೇರ ಪ್ರಸಾರ ನಿಷೇಧಿಸಿದ ತಮಿಳುನಾಡಿನ ದ್ರಮುಕ ಸರಕಾರ !

  • ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರ ಆರೋಪ !

  • ಆರೋಪ ತಳ್ಳಿಹಾಕಿದ ತಮಿಳುನಾಡು ಸರಕಾರ !

ನವ ದೆಹಲಿ – ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭದ ನೇರ ಪ್ರಸಾರ, ಪೂಜೆ ಮತ್ತು ಮಹಾಪ್ರಸಾದ ಮುಂತಾದವುಗಳನ್ನು ತಮಿಳುನಾಡು ರಾಜ್ಯದ ದ್ರಮುಕ ಸರಕಾರ ನಿಷೇಧಿಸಿದೆ ಎಂದು ಕೇಂದ್ರ ಹಣಕಾಸು ನಿರ್ಮಲಾ ಸೀತಾರಾಮನ್ ಇವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಆರೋಪಿಸಿದ್ದಾರೆ. ದ್ರಮುಕ ಸರಕಾರ ಈ ಆರೋಪ ತಳ್ಳಿ ಹಾಕಿದೆ. ತಮಿಳುನಾಡಿನ ಹಿಂದೂ ದತ್ತಿ ಇಲಾಖೆಯ ಸಚಿವ ಶೇಖರ ಬಾಬು ಇವರು, ದ್ರಮುಕ ಪಕ್ಷದ ಯುವ ಸಮ್ಮೇಳನ ನಡೆಯುತ್ತಿದೆ. ಆದ್ದರಿಂದ ಜನರ ಗಮನ ಬೇರೆಡೆ ಸೆಳೆಯಲು ಭಾಜಪ ಈ ರೀತಿಯ ವದಂತಿಗಳು ಹರಡುತ್ತಿದೆ. ದೇವಸ್ಥಾನದಲ್ಲಿ ಭಕ್ತರಿಗೆ ಶ್ರೀ ರಾಮನ ಹೆಸರಿನಲ್ಲಿ ಪೂಜೆ ಮಾಡಲು, ಪ್ರಸಾದ ವಿತರಿಸಲು ಯಾವುದೇ ನಿಷೇಧವಿಲ್ಲ ಎಂದು ಹೇಳಿದ್ದಾರೆ.